ಶ್ರೀ ಗುರುರಾಯರ ವರ್ಧಂತೋತ್ಸವದ ಹಿನ್ನೆಲೆಯಲ್ಲಿ ರಚಿಸಿದ ಕವಿತೆ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ

ಭಕುತಿಗೆ ಒಲಿಯುವ ಮಮತೆಯಲ್ಲಿ ಸಲಹುವ
ಭಕುತಿಗೆ ಒಲಿಯುವ ಮಮತೆಯಲ್ಲಿ ಸಲಹುವ
ನಂಬಿದವರ ಕರವ ಪಿಡಿದು ಕರುಣೆಯಿಂದದಿ ಕಾಪಾಡುವ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ಶಾರದಾಂಬೆಯ ಆಣತಿಯಂತೆ ಖಾವಿಯನು ಧರಿಸಿ ನಿಂತೆ
ಶಾರದಾಂಬೆಯ ಆಣತಿಯಂತೆ ಖಾವಿಯನು ಧರಿಸಿ ನಿಂತೆ
ಜಗವ ಬೆಳಗಿ ಧರೆಯ ತಣಿಸಿ ಸಾರ್ವಭೌಮರಾಗಿ ನೆಲೆಸಿಹ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ಒನಕೆಯ ಚಿಗುರಿಸಿದೆ ಸತ್ತವನ ಬದುಕಿಸಿದೆ
ಒನಕೆಯ ಚಿಗುರಿಸಿದೆ ಸತ್ತವನ ಬದುಕಿಸಿದೆ
ಅಂಧರಿಗೆ ಬೆಳಕನೀಡಿ ಆತ್ಮಗಳಿಗೆ ಮೋಕ್ಷನೀಡಿಹ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ಪ್ರಹ್ಲಾದರ ವಂಶ ನೀವು ವ್ಯಾಸಕುಲದ ಬಂಧು ನೀವು
ಪ್ರಹ್ಲಾದರ ವಂಶ ನೀವು ವ್ಯಾಸಕುಲದ ಬಂಧು ನೀವು
ಮಾಧ್ವಕುಲದ ಜ್ಯೋತಿಯಾಗಿ ಭಕುತ ಕುಲಕೆ ದೀಪ್ತಿಯಾಗಿಹ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ
ಚಿತ್ರ ರಚನೆ - ಸಾಹಿತ್ಯ:-ವಿ.ಎಸ್.ಕುಮಾರ್. ಎಂ.ಎ.ಕನ್ನಡ
ಮೊಬೈಲ್ ಸಂಖ್ಯೆ: 7892346105 / 9844604465