ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿರವರು ಪರೀಕ್ಷೆ ಸಿದ್ದರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಕೆಲವು ಅಂಶಗಳನ್ನು ನೀಡಿರುತ್ತಾರೆ ಮತ್ತು ಪ್ರೋತ್ಸಾಹವನ್ನು ನೀಡಿ ಶಿಕ್ಷಣದ ಮಹತ್ವವನ್ನು ತಿಳಿಸಿರುತ್ತಾರೆ.
ಪ್ರಧಾನಿ ಮೋದಿ ಸಲಹೆ :
• ಪರೀಕ್ಷೆಯಾಚೆಗೂ ಜೀವನವಿದೆ : ಪರೀಕ್ಷೆಗೋಸ್ಕರವೇ ಜೀವಿಸಬೇಡಿ. ಪರೀಕ್ಷೆಗಳಿಂದ ಆಚೆಗೂ ಜೀವನವಿದೆ. ಪರೀಕ್ಷೆಯಲ್ಲಿ ಕಡಿಮೆ ಸ್ಕೋರ್ ಮಾಡಿದ ಮಾತ್ರಕ್ಕೆ ಜೀವನ ನಿಂತುಬಿಡುವುದಿಲ್ಲ. ಪರೀಕ್ಷೆಗಳನ್ನು ಕಲಿಯಲು ದೊರೆತ ಅವಕಾಶಗಳೆಂದು ತಿಳಿಯಿರಿ.
• ಪೋಷಕರ ವಿಸಿಟಿಂಗ್ ಕಾರ್ಡ್ ಅಲ್ಲ : ಮಕ್ಕಳ ಅಂಕಪಟ್ಟಿ ಅಥವಾ ರಿಪೋರ್ಟ್ ಕಾರ್ಡ್ಗಳನ್ನು ಪೋಷಕರು ತಮ್ಮ `ವಿಸಿಟಿಂಗ್ ಕಾರ್ಡ್’ಗಳೆಂದು ಭಾವಿಸಬಾರದು. ಪೋಷಕರು ತಮ್ಮ ಕನಸುಗಳನ್ನು ಮಕ್ಕಳು ಸಾಕಾರಗೊಳಿಸಬೇಕೆಂದು ನಿರೀಕ್ಷಿಸಬಾರದು. ಪ್ರತಿಯೊಬ್ಬ ಮಗುವಿಗೂ ಅದರದ್ದೇ ಆದ ಶಕ್ತಿ ಸಾಮರ್ಥ್ಯವಿರುತ್ತದೆ.
• ಮಕ್ಕಳನ್ನು ಬಯ್ಯದೆ, ಪ್ರೋತ್ಸಾಹಿಸಿ : ಪೋಷಕರ ಪ್ರೋತ್ಸಾಹದಿಂದ ಮಾತ್ರ 60% ಅಂಕ ಗಳಿಸಿದ ಮಗು 70% ಅಥವಾ 80% ಸ್ಕೋರ್ ಮಾಡುವತ್ತ ಮುನ್ನಡೆಯಬಲ್ಲದು. ನಿಮ್ಮ ಮಗು 90% ಗಳಿಸಲಿಲ್ಲ ಎಂದು ನಿಂದಿಸಿದರೆ, ಇದರಿಂದ ಮಕ್ಕಳು ನಿರುತ್ಸಾಹಗೊಳ್ಳುತ್ತಾರೆ. ತಾವು ಅಸಮರ್ಥರೆಂದು ಭಾವಿಸುತ್ತಾರೆ. ಇದರಿಂದ ಮಕ್ಕಳ ಅಂಕ ಗಳಿಕೆ ಮತ್ತಷ್ಟು ಇಳಿಯುತ್ತದೆಯೇ ಹೊರತು ಸುಧಾರಿಸದು. ಬೇರೆ ಮಕ್ಕಳೊಂದಿಗೆ ಹೋಲಿಸದೆ, ಮಕ್ಕಳ ಪ್ರತಿ ಸಣ್ಣ ಸಣ್ಣ ಸುಧಾರಣೆಗಳನ್ನೂ ಪೋಷಕರು ಪ್ರೋತ್ಸಾಹಿಸಬೇಕು.
• ನಿರೀಕ್ಷೆಯೇ ಹೊರಯಾಗಬಾರದು : ನಿರೀಕ್ಷೆ ತುಂಬಾ ಮುಖ್ಯವಾದದ್ದು. ಆದರೆ, ಅದು ನೀವು ಗುರಿಯತ್ತ ಸಾಗಲು ಸ್ಫೂರ್ತಿ ಆಗಬೇಕೇ ಹೊರತು ಹೊರೆಯಾಗಬಾರದು. ದೇಶದ 1.25 ಕೋಟಿ ಜನರೂ 1.25 ನಿರೀಕ್ಷೆಗಳನ್ನು ಹೊಂದಿರಬೇಕೆAದು ನಾನು ಬಯಸುತ್ತೇನೆ.
• ತಪ್ಪುಗಳನ್ನು ಅಪ್ಪಿಕೊಳ್ಳಿ : ತಪ್ಪು ಮಾಡುವುದು ಸಹಜ. ಹಾಗೆಂದು ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕೊರಗುವ ಅಗತ್ಯವಿಲ್ಲ. ತಪ್ಪಿನಿಂದ ಪಾಠ ಕಲಿಯಬೇಕು.
• ಗಮ್ಯ ದೊಡ್ಡದಿರಲಿ, ಪುಟ್ಟಪುಟ್ಟ ಗುರಿಗಳಿರಲಿ : ನಿಮ್ಮ ಗಮ್ಯ ದೊಡ್ಡದಿರಬೇಕು. ಗಮ್ಯವನ್ನು ತಲುಪುವ ಹಾದಿಯಲ್ಲಿ ಚಿಕ್ಕ ಚಿಕ್ಕ ಗುರಿಗಳಿರಬೇಕು. ನಿಮ್ಮ ಗುರಿಗಳನ್ನು ಬೇರೆಯವರು ನಿರ್ಧರಿಸದೆ, ನೀವೇ ಆಯ್ದುಕೊಳ್ಳಬೇಕು. ದೊಡ್ಡ ಗುರಿ ಸಾಧಿಸಲಾಗದಿದ್ದರೆ, ಅಕ್ಷಮ್ಯವಲ್ಲ.
• ಹತಾಶೆಯಿಂದ ಹೊರಬರಲು ಮಾರ್ಗ : ವಿದ್ಯಾರ್ಥಿಗಳು ಬೇರೊಬ್ಬರಿಗೆ ಹೋಲಿಸಿಕೊಳ್ಳಬಾರದು. ಬದಲಿಗೆ ಅವರದ್ದೇ ಹಳೆಯ ದಾಖಲೆಗಳನ್ನು ಮುರಿಯುವ ಗುರಿಯನ್ನು ಹೊಂದಬೇಕು. ಅಂಥವರಿಗೆ ಹತಾಶೆ ಕಾಡುವುದಿಲ್ಲ.
• `STEM’ ನಿಂದಾಚೆಗೆ : ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್ ಮತ್ತು ಗಣಿತ ವಿಷಯಗಳಿಗಷ್ಟೇ ಒತ್ತು ಕೊಡುವ ಪೋಷಕರ ಬಗ್ಗೆ ಮಾತನಾಡಿದ ಮೋದಿ ಅವರು, ಇದರಿಂದಾಚೆಗಿರುವ ವಿಷಯಗಳಿಗೂ ಮಹತ್ವವಿದೆ. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರಿಗೆ ಸ್ವತಂತ್ರ ಆಯ್ಕೆ ಅವಕಾಶ ನೀಡಬೇಕು, ಎಂದರು.
• ಕೌನ್ಸೆಲಿಂಗ್ ಎಂಬ ಆಪದ್ಬಾಂಧವ : ಪೋಷಕರು ವಿದ್ಯಾರ್ಥಿಗಳಲ್ಲಿ ಕಂಡು ಬರುವ ಖಿನ್ನತೆಯ ಸಣ್ಣ ಲಕ್ಷಣಗಳನ್ನೂ ಕಡೆಗಣಿಸಬಾರದು. ಅವರಿಗೆ ತಜ್ಞರ ಸಲಹೆಸೂಚನೆ ಕೊಡಿಸಬೇಕು. ಕೌನ್ಸೆಲಿಂಗ್ ಹೋದರೆ ಸಮಾಜ ಏನು ತಿಳಿದೀತು ಎಂಬ ಭ್ರಮೆಯಿಂದ ಹೊರಬರಬೇಕು. ತಜ್ಞರ ಮಾರ್ಗದರ್ಶನ ವಿದ್ಯಾರ್ಥಿಗಳನ್ನು ಸಮಸ್ಯೆಯಿಂದ ಹೊರತರಲು ನೆರವಾಗುತ್ತದೆ.
• 14 ಕೋಟಿ ಮಕ್ಕಳು ವಿಡಿಯೊ ಚಾಟ್ ಮೂಲಕ ನಡೆದ ಈ ಬಾರಿಯ ಪರೀಕ್ಷಾಪೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಏಳು ಕೋಟಿ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
• 06 ದೇಶಗಳಲ್ಲಿ ನೆಲೆಸಿರುವ ಮಕ್ಕಳು ಹಾಗೂ ಪಾಲಕರು ಭಾಗಿಯಾಗಿದ್ದು ವಿಶೇಷ. ರಷ್ಯಾ, ನೈಜೀರಿಯಾ, ಇರಾನ್, ನೇಪಾಳ, ಕುವೈತ್, ಸೌದಿ ಅರೇಬಿಯಾ, ಸಿಂಗಾಪುರದಲ್ಲಿರುವ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ.
ಆತ್ಮೀಯ ವಿದ್ಯಾರ್ಥಿಗಳೆ ಹಾಗೂ ಪೋಷಕ ಬಂಧುಗಳೇ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿಯು ಬಿಡುಗಡೆಯಾಗಿದೆ. ಕೆಲ ಮಾಹಿತಿಗಳನ್ನು ತಮಗೆ ತಿಳಿಸಲು ಹರ್ಷವಾಗುತ್ತದೆ.
1) 10ನೇ ತರಗತಿಯ ಪರೀಕ್ಷೆಗಳು ರಾಜ್ಯಮಟ್ಟದಲ್ಲಿ ನಡೆಯುತ್ತದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಿರ್ವಹಣೆ ಮಾಡುತ್ತದೆ.
2) 10ನೇ ತರಗತಿಯನ್ನು ಎಸ್.ಎಸ್.ಎಲ್.ಸಿ ಎಂದು ಸಂಕ್ಷಿಪ್ತವಾಗಿ ಕರೆಯುತ್ತಾರೆ. ಇದರ ಅರ್ಥ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್.
3) 10ನೇ ತರಗತಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಏಳು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.
ಪರೀಕ್ಷೆಗೆ ಸಂಬ0ಧಿಸಿದ0ತೆ ವಿವರಗಳು ಈ ಕೆಳಕಂಡAತೆ ಇದೆ.
1) ಇಡೀ ರಾಜ್ಯಕ್ಕೆ ಒಂದೇ ಪ್ರಶ್ನೆ ಪತ್ರಿಕೆ, ಒಂದೇ ವೇಳಾಪಟ್ಟಿ ಇರುತ್ತದೆ.
2) ಪರೀಕ್ಷೆಯ ಪಲಿತಾಂಶವು ಇಡೀ ರಾಜ್ಯದಲ್ಲಿ ಒಂದೇ ಸಲ ಪ್ರಕಟವಾಗುತ್ತದೆ.
3) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆಸನದ ವ್ಯವಸ್ಥೆ ಒಂದು ಕೊಠಡಿಗೆ 24 ರಂತೆ ಇರುತ್ತದೆ.
4) ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಅವರ ಬಳಿ ಪ್ರವೇಶಪತ್ರ, ಲೇಖನ ಸಾಮಗ್ರಿ ಹೊರತುಪಡಿಸಿ ಮತ್ಯಾವುದೇ ವಸ್ತುಗಳನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗದಂತೆ ನಿರ್ಬಂಧಿಸಲು ಸೂಚನೆ ನೀಡುವುದು.
5) ಕೊಠಡಿ ಮೇಲ್ವಿಚಾರಕರು ಮಂಡಳಿಯಿAದ ನೀಡಿರುವ ನಾಮಯಾದಿ ಪಟ್ಟಿ ಹಾಗೂ ಪ್ರವೇಶ ಪತ್ರದಲ್ಲಿರುವ ಫೋಟೋ ಮತ್ತು ಸಹಿ ಹಾಗೂ ಅಭ್ಯರ್ಥಿಗಳು ಒಂದೇ ಎಂಬುದನ್ನು ತಾಳೆ ನೋಡಿ ಖಾತ್ರಿ ಮಾಡಿಕೊಳ್ಳುವಂತೆ ಸೂಚಿಸಬೇಕು.
6) ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಪತ್ರಿಕೆಯನ್ನು ಹಂಚುವ ಸಂದರ್ಭದಲ್ಲಿ ಮಾತ್ರ ಮೇಲ್ವಿಚಾರಕರು ಪ್ರಶ್ನೋತ್ತರ ಪತ್ರಿಕೆಗೆ ಸಹಿ ಮಾಡುವುದು. ಪ್ರಶ್ನೋತ್ತರ ಪತ್ರಿಕೆಗಳನ್ನು ಹಂಚುವ ಮೊದಲೇ ಸಹಿ ಮಾಡುವುದನ್ನು ನಿರ್ಬಂಧಿಸುವುದು.
7) ಪರೀಕ್ಷಾ ಸಿಬ್ಬಂದಿಯು ಪರೀಕ್ಷಾ ಕೊಠಡಿಯೊಳಗೆ ಅನಾವಾಶ್ಯಕವಾಗಿ ಓಡಾಡುವುದು, ಮಾತನಾಡುವುದು, ಮಕ್ಕಳನ್ನು ಹೆದರಿಸುವುದು ಮಾಡಬಾರದು.
8) ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ಆವರಣವನ್ನು ನಿಷೇದಿತ ಪ್ರದೇಶವೆಂದು ಘೋಷಿಸುವುದು. ಪರೀಕ್ಷಾ ಕಾರ್ಯಕ್ಕೆ ಸಂಬAಧಿಸಿದ ಎಲ್ಲಾ ಸಿಬ್ಬಂದಿಗೆ ಮೊದಲೇ ಗುರುತಿನ ಚೀಟಿ ವಿತರಿಸುವುದು.
9) ನಮೂನೆಯಲ್ಲಿ ಪ್ರಶ್ನೋತ್ತರ ಪತ್ರಿಕೆಯ ಮುದ್ರಿತ ಕ್ರಮಾಂಕವನ್ನು ನಿಗದಿತ ಅಂಕಣದಲ್ಲಿ ಬರೆಯಬೇಕು. ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆ ಕೊಡುವಾಗ ಮತ್ತು ವಾಪಸ್ಸು ಪಡೆಯುವಾಗ ನಿಗದಿತ ಅಂಕಣದಲ್ಲಿ ಸಹಿ ಪಡೆಯಬೇಕು.
10) ಯಾವುದೇ ಕಾರಣಕ್ಕೂ ಅಭ್ಯರ್ಥಿಯು ಪ್ರಶ್ನೋತ್ತರ ಪತ್ರಿಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕೊಂಡೊಯ್ಯುವAತಿಲ್ಲ.
11) ಅಭ್ಯರ್ಥಿಗಳು ಓದುತ್ತಿರುವ ಶಾಲೆಯಿಂದ 2 ಕಿ.ಮೀ. ವ್ಯಾಪ್ತಿಯೊಳಗಿನ ಶಾಲೆಗಳ ವ್ಯಾಪ್ತಿಗೆ ಬರುವಂತೆ ಕನಿಷ್ಟ 250 ರಿಂದ 500 ಅಭ್ಯರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರವನ್ನು ರಚಿಸಲಾಗುತ್ತದೆ.
12) ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ದಿನಾಂಕದAದು ನಡೆಯುವ ಪರೀಕ್ಷೆಯ ವಿಷಯವನ್ನು ಬೋಧಿಸುವ ಶಿಕ್ಷಕರು ಕೊಠಡಿ ಮೇಲ್ವಿಚಾರಣೆ ಮಾಡತಕ್ಕದ್ದಲ್ಲ. ಇತರೇ ಶಿಕ್ಷಕರನ್ನು ಮಾತ್ರ ಈ ಕಾರ್ಯಕ್ಕೆ ಬಳಸಿಕೊಳ್ಳಬೇಕು.
13) ಕಿವುಡ ಮತ್ತು ಮೂಗ, ಕಲಿಕೆ ನ್ಯೂನ್ಯತೆ, ಅಂಗವಿಕಲ, ಅಂಧ ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತೆ ಸಮೀಪದ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗುವುದು.
14) ಪ್ರತಿ ಕೊಠಡಿಯಲ್ಲಿ ಕನಿಷ್ಠ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ಅಡಚಣೆಯಾಗದಂತೆ ಆಸನ ವ್ಯವಸ್ಥೆ ಮಾಡುವುದು.
15) ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವ ಪಟ್ಟಿಯಲ್ಲಿನ ಶಿಕ್ಷಕರನ್ನೇ ನೇಮಿಸಿಕೊಳ್ಳಬೇಕು.
16) ಪ್ರತಿ ದಿನವೂ ಕೊಠಡಿ ಮೇಲ್ವಿಚಾರಕರು ಬದಲಾಗುವಂತೆ ನೋಡಿಕೊಳ್ಳಬೇಕು.
17) ವಿದ್ಯಾರ್ಥಿಗಳು, ಪೋಷಕರು ಪರೀಕ್ಷಾ ಸಂದರ್ಭದಲ್ಲಿ ಸ್ಟಡಿ ಹಾಲಿಡೇಸ್ ರಜವನ್ನು ನೀಡುತ್ತಾರಾ? ಎಷ್ಟು ದಿನ ಎಂದು ಪ್ರಶ್ನೆ?. ಪರೀಕ್ಷೆ ಮುಗಿಯುವ ತನಕ ವಿದ್ಯಾರ್ಥಿಗಳ ಹಾಜರಾತಿಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ವರ್ಗಾವಣೆ ಪತ್ರ ನೀಡುವಾಗ ಒಟ್ಟು ದಿನಗಳನ್ನು ನಮೂದಿಸುತ್ತಾರೆ. ಆದ್ದರಿಂದ ಯಾವುದೇ ಸ್ಟಡಿ ಹಾಲಿಡೇಸ್ ಶಾಲೆ ನೀಡುವುದಿಲ್ಲ.
18) ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾದರೆ ವಿವಿಧ ಕಾರಣಗಳಿಂದ ಅಥವಾ ಅನುತ್ತೀರ್ಣರಾದರೆ ಭಯ ಪಡಬೇಕಾಗಿಲ್ಲ. ಜೂನ್ ತಿಂಗಳ 2ನೇ ವಾರದಲ್ಲಿ ಪೂರಕ ಪರೀಕ್ಷೆ (ಸಪ್ಲಿಮೆಂಟರಿ ಪರೀಕ್ಷೆ) ಯನ್ನು ಮಾಡುತ್ತಾರೆ.
19) ಪಲಿತಾಂಶ ಪ್ರಕಟವಾದ ಮೇಲೂ ಕೂಡ ವಿದ್ಯಾರ್ಥಿಗಳ ಅಂಕಪಟ್ಟಿ, ಪಲಿತಾಂಶಗಳಲ್ಲಿ ವ್ಯತ್ಯಾಸಗಳು ಇದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು. ಮರುಏಣಿಕೆ ಮತ್ತು ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದು ಸರಿಪಡಿಸಿಕೊಳ್ಳಬಹುದು.
20) ಶಾಲೆಗೆ 100 ಕ್ಕೆ 100 ಪಲಿತಾಂಶ ಬಂದಾಗ ಸರ್ಕಾರವು ಆಯಾ ಶಾಲೆಗೆ ಪ್ರಶಸ್ತಿಪತ್ರ, ನೆನಪಿನ ಕಾಣಿಕೆ ನೀಡಿ ಪುರಸ್ಕರಿಸುತ್ತದೆ.
21) ಶಾಲೆಗೆ ಶೂನ್ಯ ಪಲಿತಾಂಶ ಅಥವಾ ಕಡಿಮೆ ಪಲಿತಾಂಶ ಬಂದಾಗ ಶಾಲೆಯ ಶಿಕ್ಷಕರಿಗೆ ಶಾಲೆಯ ಆಡಳಿತ ಮಂಡಳಿಗಳಿಗೆ ಕಾರಣ ಕೇಳಿ ಮೆಮೋ ನೀಡುತ್ತಾರೆ. ವಾರ್ಷಿಕ ಬಡ್ತಿಯನ್ನು ಸಹ ತಡೆಯಲು ಅವಕಾಶವಿದೆ.
22) ಪರೀಕ್ಷಾ ಕಾರ್ಯದಲ್ಲಿ ಯಾವುದೇ ರೀತಿ ಅಕ್ರಮ, ಅವ್ಯವಹಾರ ನಡೆಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಹ ದಂಡನೆ, ಕಾರಾಗೃಹವಾಸ ಶಿಕ್ಷಣಕಾಯ್ದೆಯಲ್ಲಿ ಇದೆ.
23) ಪರೀಕ್ಷಾ ಅವಧಿಯು ಮೂರು ಗಂಟೆಯಾಗಿರುತ್ತದೆ. ದ್ವಿತೀಯ ಭಾಷೆ, ತೃತೀಯ ಭಾಷೆಗೆ ಮಾತ್ರ ಎರಡೂವರೆ ಗಂಟೆ ಇರುತ್ತದೆ.
24) ಪರೀಕ್ಷಾ ಸಂದರ್ಭದಲ್ಲಿ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೇಡಿಯೋ ಮೂಲಕ ಪ್ರಶ್ನೆಪತ್ರಿಕೆಗಳ ಸ್ವರೂಪ, ಬರೆಯುವ ಶೈಲಿ ಮುಂತಾದ ವಿವರಗಳನ್ನು ಪ್ರತಿದಿನ ಮಧ್ಯಾಹ್ನ 2:30 ಗಂಟೆಗೆ ಬಿತ್ತರಿಸುತ್ತದೆ ಮತ್ತು ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ನೆರವಿಗೆ ಒಂದು ತಿಂಗಳ ಕಾಲ ಸಹಾಯವಾಣಿಯನ್ನು ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ಕಾರ್ಯ ನಿರ್ವಹಿಸುತ್ತದೆ. ಈ ಕೆಳಕಂಡ ದೂರವಾಣಿಗಳನ್ನು ಸಂಪರ್ಕಿಸಬಹುದು.
080-23310075
080-23310076
25) ಪ್ರಶ್ನೆಪತ್ರಿಕೆಗಳ ಅಂಕ ಈ ಕೆಳಕಂಡ0ತಿರುತ್ತದೆ
ಪ್ರಥಮ ಭಾಷೆ - 100, ಉಳಿದ ಎಲ್ಲಾ ಭಾಷೆಗಳು 80, ಒಟ್ಟು - 500
ಆಂತರಿಕ ಚಟುವಟಿಕೆ ಅಂಕಗಳು ಕನ್ನಡ ಭಾಷೆಗೆ - 25 ಉಳಿದ ಎಲ್ಲಾ ಭಾಷೆಗಳಿಗೆ 20 ಒಟ್ಟು - 125
ಎಲ್ಲಾ ವಿಷಯಗಳ ಒಟ್ಟು ಅಂಕಗಳು - 625
26) ಪ್ರಥಮ ಭಾಷೆಯಲ್ಲಿ ಕನಿಷ್ಟ 35 ಅಂಕಗಳು ಇತರ ಭಾಷೆಗಳಲ್ಲಿ 28 ಅಂಕಗಳನ್ನು ಪಡೆಯಲೇಬೇಕು ಉತ್ತೀರ್ಣರಾಗಲು. ಬಾಹ್ಯ ಪರೀಕ್ಷೆಯ 500 ಅಂಕಗಳಿಗೆ 175 ಕನಿಷ್ಟ ಅಂಕಗಳನ್ನು ಪಡೆದಿರಲೇಬೇಕು. ಶೇ. 35 ಅಂಕಗಳನ್ನು ಪಡೆದಿರಬೇಕು.
27) ವಿಕಲಚೇತನರಿಗೆ ಪರೀಕ್ಷಾ ಅವಧಿಯ ನಂತರವೂ ಒಂದು ಗಂಟೆ ಸಮಯವನ್ನು ಅಭ್ಯರ್ಥಿಗಳಿಗೆ ನೀಡುತ್ತಾರೆ.
28) ಮಕ್ಕಳ ಹಾಜರಾತಿ, ಪರೀಕ್ಷೆ ತೆಗೆದುಕೊಳ್ಳಲು ಶೇಕಡ 75 ರಷ್ಟು ಕಡ್ಡಾಯವಾಗಿರುತ್ತದೆ.
29) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ ನಗದು ಪುರಸ್ಕಾರವನ್ನು ನೀಡುತ್ತಾರೆ.
ವಿದ್ಯಾರ್ಥಿಗಳಿಗೆ ಸಲಹೆಗಳು:
1. ಪರೀಕ್ಷಾ ಸಮಯದಲ್ಲಿ ಇತರ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಕೊಡಬಾರದು.
2. ಶಿಕ್ಷಕರು ನೀಡಿದ ಅಥವಾ ತಾವೇ ಸಿದ್ದಪಡಿಸಿದ ನೋಟ್ಸ್ ಅನ್ನು ಪ್ರತಿದಿನ ಅವಲೋಕಿಸಿ ಮನನ ಮಾಡಿಕೊಳ್ಳಬೇಕು.
3. ಕಾಲದ ಮಿತಿಯೊಳಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೂ ಮನಸ್ಸಿಗೆ ಬಂದ ಅನುಮಾನಗಳನ್ನು ಸಕಾಲದಲ್ಲಿ ಪರಿಹರಿಸಿಕೊಳ್ಳಬೇಕು.
4. ಸಂಭವನೀಯ ಪ್ರಶ್ನೆಗಳನ್ನು ಸ್ವತಃ ತಯಾರು ಮಾಡಿ ಅಥವಾ ಶಿಕ್ಷಕರ ನೆರವಿನಿಂದ ಬರೆದು ಉತ್ತರಗಳನ್ನು ಅಭ್ಯಸಿಸಬೇಕು ಹಾಗೂ ಪ್ರತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರವಾದ ಉತ್ತರವನ್ನೇ ಬರೆಯಬೇಕು.
5. ಪ್ರಶ್ನೆಗಳ ಅಂಕಕ್ಕೆ ತಕ್ಕ ಉತ್ತರ ಬರೆಯಬೇಕು. ಕೈ ಬರಹ ಸ್ಪಷ್ಟವಾಗಿರಬೇಕು. ಚಿತ್ರಗಳನ್ನು ಅಂದವಾಗಿ ಬರೆದು ಭಾಗಗಳನ್ನು ಗುರುತಿಸಬೇಕು. ಉತ್ತರ ಪತ್ರಿಕೆಗಳಲ್ಲಿ ಚಿತ್ತು ಮಾಡುವುದು, ಬಣ್ಣ ಬಣ್ಣದ ಶಾಹಿ ಬಳಸುವುದು ಸರಿಯಲ್ಲ.
ವಿದ್ಯಾರ್ಥಿಗಳಿಗೆ ನೆನಪಿರಬೇಕಾದ ಅಂಶಗಳು
1. ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು ವದಂತಿಗೆ ಗಮನ ನೀಡಬೇಡಿ.
2. ಪರೀಕ್ಷೆಗಳಲ್ಲಿ ನಕಲು ಮಾಡಿದ್ದಕ್ಕೆ 3 ತಿಂಗಳ ಕಾರಾಗೃಹ ವಾಸ ಹಾಗೂ ಒಂದು ಸಾವಿರ ರೂಪಾಯಿಗಳ ಜುಲ್ಮಾನೆಗೆ ಕಾನೂನಿನಲ್ಲಿ ಅವಕಾಶವಿದೆ.
3. ಪರೀಕ್ಷೆಗಳಲ್ಲಿ ಇತರರಂತೆ ನಟಿಸಿ ಹಾಜರಾಗಿದ್ದರೆ 1 ವರ್ಷದ ಕಾರಾಗೃಹ ವಾಸ ಹಾಗೂ 5 ಸಾವಿರ ರೂಗಳ ಜುಲ್ಮಾನೆ ವಿಧಿಸಬಹುದು.
4. ಪರೀಕ್ಷೆಗೆ ಸಂಬAಧಿಸಿದ ಅಂಕಗಳನ್ನು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಆದೇಶವಿದೆ.
5. ಪರೀಕ್ಷೆಯಲ್ಲಿ ಬರೆದ ಉತ್ತರ ವ್ಯತ್ಯಾಸಗೊಳಿಸಿದರೆ ಯಾವುದೇ ವ್ಯಕ್ತಿಯು ಸಹ ಒಂದು ವರ್ಷ ಕಾರಾಗೃಹ ವಾಸ, 5 ಸಾವಿರ ರೂಗಳು ಜುಲ್ಮಾನೆ ವಿಧಿಸಬಹುದು.
6. ಪ್ರವೇಶ ಪತ್ರದ ಜೆರಾಕ್ಸ್ನ್ನು ವಿದ್ಯಾರ್ಥಿಗಳು ಇಟ್ಟುಕೊಂಡಿರಬೇಕು. ಪ್ರವೇಶಪತ್ರ ಕಳೆದು ಹೋದರೆ ಪರೀಕ್ಷಾ ಕೇಂದ್ರದಲ್ಲಿ ಡೂಪ್ಲಿಕೇಟ್ ಹಾಲ್ಟಿಕೇಟ್ ಪಡೆಯಲು ಅವಕಾಶವಿದೆ.
7. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರವು ವಿವಿಧ ರೀತಿಯ ಸೌಕರ್ಯಗಳನ್ನು, ವಿದ್ಯಾರ್ಥಿವೇತನಗಳನ್ನು ನೀಡುತ್ತಾರೆ.
8. ಶಾಲೆಯಲ್ಲಿ ವಿದ್ಯಾರ್ಥಿಗಳು ಅವ್ಯವಹಾರ ಮಾಡಿ ಸಿಕ್ಕರೆ ಆ ವಿದ್ಯಾರ್ಥಿ ಹೆಸರನ್ನು, ಆ ಶಾಲೆಯ ಹೆಸರನ್ನು ಅದೇ ದಿನ ಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಪ್ರಕಟವಗುತ್ತದೆ. ಆದ್ದರಿಂದ ಶಾಲೆಯ ಕೀರ್ತಿ, ಅಪಕೀರ್ತಿ, ಗೌರವಕ್ಕೆ ಮೂಲ ಕಾರಣ ಶಾಲಾ ವ್ಯವಸ್ಥೆ, ವಿದ್ಯಾರ್ಥಿಯ ನೈತಿಕ, ಪ್ರಾಮಾಣಿಕ ಹೊಣೆಗಾರಿಕೆಯಾಗಿದೆ.
ವಿದ್ಯಾರ್ಥಿಗಳೇ ನೆನಪಿಡಿ
• ನಿಮ್ಮ ಒತ್ತಡಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಿ.
• ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಇದೆ.
• ಒಮ್ಮೆ ನಿಮ್ಮ ನಿರೀಕ್ಷೆಯಲ್ಲಿ ವಿಫಲರಾದರೆ ಅದೇ ಕೊನೆ ಎಂದು ಎಂದೂ ಭಾವಿಸಬೇಡಿ.
• ಸೋಲೇ ಗೆಲುವಿಗೆ ಸೋಪಾನ ಎಂಬದನ್ನು ನೆನಪಿಡಿ.
• ಸೋತಾಗ ನಕಾರಾತ್ಮಕ ಭಾವನೆಗೊಳಗಾಗಬೇಡಿ.
• ಸಕಾರಾತ್ಮಕವಾಗಿ ಸವಾಲನ್ನು ಎದುರಿಸಲು ಧೈರ್ಯ ತಂದುಕೊಳ್ಳಿ.
• ಪೋಷಕರ ನಿರೀಕ್ಷೆಗಳು ಹೆಚ್ಚೆಂದು ಎನಿಸಿದರೆ ಅವರಿಗೆ ತಿಳಿಸಿ.
• ಒಮ್ಮೆ ಪೋಷಕರು ಬೈದರೆ ಅದು ಅವಮಾನವೆಂದಣಿಸದೇ ಅದರ ಹಿನ್ನಲೆಯನ್ನು ಅರ್ಥ ಮಾಡಿಕೊಳ್ಳಿ.
• ಜೀವನದಲ್ಲಿ ಕೌಶಲಗಳು, ಹವ್ಯಾಸಗಳು ಅವಶ್ಯ. ಅವಕ್ಕೆ ವೇಳೆ ಕೊಡಿ.
• ಆತ್ಮೀಯ ಸ್ನೇಹಿತರೊಂದಿಗೆ ಚರ್ಚಿಸಿ, ಚಟಗಳಿಗೆ ಬಲಿಯಾಗಬೇಡಿ.
ಪೋಷಕರೇ ಗಮನಿಸಿ
ನಿಮ್ಮ ಮಗು ನಿಮ್ಮ ಸ್ನೇಹಿತ.
ಮಗುವಿನ ಸಾಮರ್ಥ್ಯ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಮಕ್ಕಳೊಂದಿಗೆ ವ್ಯವಹಾರಿಕತನ ಬೇಡ.
ನಿಮ್ಮ ನಿರೀಕ್ಷೆ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿರಲಿ.
ಬೇರೆ ಮಕ್ಕಳೊಂದಿಗೆ, ಸಹೋದರ, ಸಹೋದರಿಯರೊಂದಿಗೆ ಹೋಲಿಕೆ ಮಾಡುವುದು ಉಚಿತವಲ್ಲ.
ಮಕ್ಕಳಲ್ಲಿ ಬಾಲ್ಯದಿಂದಲೇ ಕೆಲವಾದರೂ ಹವ್ಯಾಸಗಳನ್ನು ಕಲಿಯಲು ಅನುವು ಮಾಡಿಕೊಡಿ.
ಮಕ್ಕಳ ಅನಿಸಿಕೆಗಳನ್ನು ಆಲಿಸಿ, ಸ್ಪಂದಿಸಿ.
ಮಕ್ಕಳು ವಿಫಲರಾದಾಗ ಟೀಕಿಸದೇ ಅವರಿಗೆ ಧೈರ್ಯ ತುಂಬಿ.
ಮುಂದೆ ನಡೆಯಲು ಪ್ರೋತ್ಸಾಹಿಸಿ. ನಿಮ್ಮ ಸಹಾಯ ಹಸ್ತ ನೀಡಿ.
ಮಕ್ಕಳೊಂದಿಗಿನ ಅನುಭವಕ್ಕೆ, ಸಕಾರಾತ್ಮಕವಾದ ಮಾರ್ಗದರ್ಶನ, ಸ್ನೇಹಪರತೆ ಎಂದಿಗೂ ಅವರನ್ನು ಆತ್ಮಹತ್ಯಾ ಆಲೋಚನೆಗೆ ತಳ್ಳದು.
ಪೋಷಕರು ಏನು ಮಾಡಬಹುದು?
ಮಕ್ಕಳನ್ನು ಏಕಾಂಗಿಯಾಗಿರಲು (ಒಂಟಿತನದ ಭಾವನೆ ಬೆಳೆಯಲು) ಬಿಡಬೇಡಿ.
ಹೆಚ್ಚಿನ ಸಮಯ ಟಿವಿ ಹಾಗೂ ಇಂಟರ್‌ನೆಟ್‌ಗಳ ಮುಂದೆ ಕಳೆಯಲು ಬಿಡುವುದು ಬೇಡ.
ಆಫೀಸಿನ ಒತ್ತಡ, ಕೋಪಗಳನ್ನು ಮಕ್ಕಳ ಮೇಲೆ ಹೇರಬೇಡಿ.
ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ.
ಮಕ್ಕಳಲ್ಲಿ ಆದಷ್ಟೂ ಮಟ್ಟಿಗೆ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಪಡಿ.
ಹೊರಗಿನ ಆಹಾರ ಅದರಲ್ಲೂ ಬೇಕರಿ ಪದಾರ್ಥಗಳನ್ನು, ಹೆಚ್ಚಿನ ಪ್ರಮಾಣದಲ್ಲಿ ಪ್ರಿಸರ್ವೆಟಿವ್ ಬಳಸಿರುವ ತಿನಿಸುಗಳನ್ನು ಮಕ್ಕಳಿಗೆ ನಿತ್ಯ ನೀಡಬೇಡಿ.
ಕುಟುಂಬದ ಇತರೆ ಸದಸ್ಯರೊಂದಿಗೆ ಮಕ್ಕಳನ್ನು ಮುಕ್ತವಾಗಿ ಬೆರೆಯಲು ಬಿಡಿ.
ಸೂಕ್ಷö್ಮ ಮಾತುಗಳಲ್ಲಿ ಮತ್ತು ಒಳ್ಳೆಯ ರೀತಿಯಿಂದಲೇ ಮಕ್ಕಳಲ್ಲಿ ಉತ್ತರದಾಯಿತ್ವ ಬೆಳೆಸಿಕೊಳ್ಳುವುದನ್ನು ರೂಢಿಸಿ.
ಮಕ್ಕಳು ಯಾರ ಜೊತೆ ಬೆರೆಯುತ್ತಾರೆ, ಏನು ನೋಡುತ್ತಾರೆ (ಟಿವಿ, ಕಂಪ್ಯೂಟರ್‌ನಲ್ಲಿ) ಎಂಬುದನ್ನು ಸೂಕ್ಷö್ಮವಾಗಿ ಗಮನಿಸಿ.
ಗೆಳೆತನದ ಹೊಣೆಗಾರಿಕೆ
ತಂದೆತಾಯಿ, ಅಣ್ಣತಮ್ಮ, ಅಕ್ಕತಂಗಿಯರಿಗಿAತ ಸ್ನೇಹಿತರೊಂದಿಗೆ ಮನಬಿಚ್ಚಿ ಮಾತನಾಡುವವರು ಬಹಳಷ್ಟು ಮಂದಿ, ನೋವುನಲಿವು, ಯಶಸ್ಸು ವೈಫಲ್ಯ ಎಲ್ಲ ವಿಷಯಗಳನ್ನು ಗೆಳೆಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಹಲವು ಮಕ್ಕಳು ಇಚ್ಛಿಸುತ್ತಾರೆ. ಈ ಹಿನ್ನಲೆಯಲ್ಲಿ ಸ್ನೇಹಿತರ ಜವಾಬ್ದಾರಿ ದೊಡ್ಡದು. ತಮ್ಮ ಒಡನಾಡಿ ಸಂತೋಷದಿAದ ಇರಲು ಏನು ಮಾಡಬಹುದು? ಇಲ್ಲಿವೆ ಕೆಲವು ಸಲಹೆ, ಸೂಚನೆಗಳು:
ಕಷ್ಟಸುಖ ಹಂಚಿಕೊAಡ ಸ್ನೇಹಿತರನ್ನು ಅಡ್ಡದಾರಿಗೆಳೆಯುವದಕ್ಕಿಂತ ಅವರ ಜೀವನದಬಂಡಿ ಹಳಿ ತಪ್ಪುವಂತೆ ಮಾಡಬೇಡಿ.
ಗುಂಪಿನಲ್ಲಿರುವಾಗ ನಿರ್ದಿಷ್ಟ ಗೆಳೆಯರ ಬಗ್ಗೆ ಅಪಹಾಸ್ಯ ಮಾಡಬೇಡಿ.
ನಿಮ್ಮ ಗೆಳೆಯ(ತಿ) ಖಿನ್ನರಾಗಿದ್ದಲ್ಲಿ ಅವರ ಗಮನ ಬೇರೆಡೆಗೆ ಸೆಳೆದು ನಂತರ ಸಮಾಧಾನ ಪಡಿಸುವುದು ಸೂಕ್ತ.
ಗೆಳೆಯರನ್ನು ಖಿನ್ನತೆಯಿಂದ ಹೊರತರಲು ಪ್ರಯತ್ನಪಡಿ.
ಸೂಕ್ಷö್ಮವಾಗಿ ತಿಳಿಹೇಳಿ.
ಸಾಂತ್ವನದ ನುಡಿಗಳನ್ನಾಡಿ.
ಪರೀಕ್ಷಾ ಮಂಡಳಿಯ ವಿಳಾಸ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
ಮಲ್ಲೇಶ್ವರ, ಬೆಂಗಳೂರು-560003, ಫೋನ್: 080-23562264
ಕೆ.ಎಸ್. ವಿಜಯಕುಮಾರ್, ನಿವೃತ್ತ ಶಿಕ್ಷಕರು
6ನೇ ಅಡ್ಡರಸ್ತೆ, ಕೆ.ಹೆಚ್.ಬಿ ಕಾಲೋನಿ, ಯಲಹಂಕ ಉಪನಗರ, ಬೆಂಗಳೂರು-64
ಮೊ: 9243192802, 9740319857
E-Mail:
vikayakumar.kshamanna@gmail.com