ಬೆಂಗಳೂರು, ಮಾರ್ಚ್ 01, 2024: ಸೃಜನಾತ್ಮಕ ಲಾಭರಹಿತ ಟ್ರಸ್ಟ್ ಆಗಿರುವ ಗೋಯಿಂಗ್ ಟು ಸ್ಕೂಲ್, ಕರ್ನಾಟಕ ಸರ್ಕಾರ ಮತ್ತು ಬಿಟಿ ಗ್ರೂಪ್ ಸಹಭಾಗಿತ್ವದಲ್ಲಿ ನಮ್ಮ ಕಾಲದ ಅತಿದೊಡ್ಡ ಸವಾಲಾದ ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಹರಿಸುವ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ನೆರವಾಗುವ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ಡಿಜಿಟಲ್, ಜೀವನ ಕೌಶಲ್ಯ ಮತ್ತು ಆಟದ ಕೌಶಲ್ಯ ಒದಗಿಸುವ ಕಾರ್ಯಕ್ರಮ ಆರಂಭಿಸಿದೆ. ಆ ನಿಟ್ಟಿನಲ್ಲಿ ಕ್ರೀಡಾ ಶಕ್ತಿಯನ್ನು ಸಂಭ್ರಮಿಸಲು 'ಮ್ಯಾಚ್ ಡೇ 2024' ಅನ್ನು ಆಯೋಜಿಸಿದೆ.
ಗೋಯಿಂಗ್ ಟು ಸ್ಕೂಲ್ ಬಾಲಕಿಯರ ಹೊರಾಂಗಣ ಶಾಲೆ, ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗಾಗಿ ಕ್ರೀಡಾ ಶೈಕ್ಷಣಿಕ ಕೌಶಲ್ಯ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಿದೆ.
ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿರುವ 11 ಮಂದಿ ಹೆಣ್ಣು ಮಕ್ಕಳ ಜೊತೆಗಿನ ಸಂವಾದದ ಮೂಲಕ ದಿನ ಆರಂಭವಾಯಿತು. ಆಟದ ಶಕ್ತಿಯಿಂದ ಹಿಡಿದು ಕೌಶಲ್ಯಗಳ ಕಲಿಯುವಿಕೆ ಮತ್ತು ಭಾರತದಲ್ಲಿ ಫುಟ್ ಬಾಲ್ ಆಡಲು ಹುಡುಗಿಯರನ್ನು ಹೇಗೆ ಸಿದ್ಧಗೊಳಿಸುವುದು, ಹವಾಮಾನ ಬದಲಾವಣೆಗೆ ಪರಿಹಾರ ಕಂಡುಕೊಳ್ಳುವ ಡಿಜಿಟಲ್ ಕೌಶಲ್ಯಗಳನ್ನು ಹೇಗೆ ಕಲಿಯುವುದು ಎಂಬುದರ ಕುರಿತ ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಗೋಯಿಂಗ್ ಟು ಸ್ಕೂಲ್, ಬಿಟಿ ಗ್ರೂಪ್ ಪ್ರತಿನಿಧಿಗಳು, ಸರ್ಕಾರಿ ಶಾಲೆಗಳ ಪ್ರಾಂಶುಪಾಲರು ಮತ್ತು ನಗರದ 500ಕ್ಕೂ ಹೆಚ್ಚು ಬಾಲಕಿಯರು ಉಪಸ್ಥಿತರಿದ್ದರು. ಹೆಚ್ಚುವರಿಯಾಗಿ, ಬೆಂಗಳೂರು ಎಫ್‌ಸಿ ಮುಖ್ಯ ಕೋಚ್ ಶ್ರೀ ಜೆರಾರ್ಡ್ ಜರಗೋಜಾ, ಸಹಾಯಕ ಕೋಚ್ ಮತ್ತು ಮಾಜಿ ಇಂಡಿಯಾ ಇಂಟರ್‌ನ್ಯಾಶನಲ್ ಶ್ರೀ ರೆನೆಡಿ ಸಿಂಗ್, ತಂಡದ ಆಟಗಾರರಾದ ಅಲೆಕ್ಸಾಂಡರ್ ಜೊವಾನೊವಿಕ್, ನಮ್ಗ್ಯಾಲ್ ಭುಟಿಯಾ, ಆಶಿಶ್ ಝಾ, ಫುಟ್‌ಬಾಲ್ ನಿರ್ದೇಶಕ ಶ್ರೀ ಡಾರೆನ್ ಕ್ಲೇಡೈರಾ ಮತ್ತು ಬೆಂಗಳೂರು ಎಫ್‌ಸಿಯ ಅಂಡರ್ 15 ಮಹಿಳಾ ತಂಡದ ಹುಡುಗಿಯರು ಭಾಗವಹಿಸಿದ್ದರು.
ಇದು ಒಂದು 'ಪ್ಲಾಸ್ಟಿಕ್ ರಹಿತ' ಕಾರ್ಯಕ್ರಮವಾಗಿದ್ದು, ಬೀದಿ ಬದಿಯ ಅಂಗಡಿಗಳು ಎಲೆಯ ತಟ್ಟೆಗಳಲ್ಲಿ ತಿಂಡಿಗಳನ್ನು ಮತ್ತು ಜ್ಯೂಸ್ ಒದಗಿಸಿದವು. ತಾಳೆ ಮರದಿಂದ ತಯಾರಿಸಿದ ಕೊಡೆಯ ಮಾದರಿಯ ಫೋಟೋ ಬೂತ್ ಎಲ್ಲರನ್ನೂ ಆಕರ್ಷಿಸಿತು, ಅಲ್ಲಿ ಫೋಟೋಗಳನ್ನು ತಗೆದುಕೊಳ್ಳಲು ಬಹುತೇಕರು ಉತ್ಸುಕರಾದರು. ಮಕ್ಕಳು ಅಲ್ಲಿ ಹಾಜರಿದ್ದ ಮಾಧ್ಯಮ ಮತ್ತು ಪ್ರತಿನಿಧಿಗಳೊಂದಿಗೆ ಸಂವಾದಿಸಿದರು.
ಬಾಲಕಿಯರಿಗಾಗಿ ಹೊರಾಂಗಣ ಶಾಲೆ ಯೋಜನೆಯು ಭಾರತದಲ್ಲಿನ ಸರ್ಕಾರಿ ಶಾಲೆಗಳಲ್ಲಿನ ಹುಡುಗಿಯರಿಗೆ ಸಮಗ್ರ ಪಠ್ಯಕ್ರಮದ ಮೂಲಕ ಡಿಜಿಟಲ್, ಜೀವನ, ಸ್ಟೆಮ್ ಮತ್ತು ಸುಸ್ಥಿರ ಉದ್ಯಮಶೀಲ ಕೌಶಲ್ಯ ಒದಗಿಸುವುದರೊಂದಿಗೆ ಆಟವನ್ನು (ಫುಟ್‌ಬಾಲ್) ಕಲಿಸುತ್ತದೆ. 5-10ನೇ ತರಗತಿಗಳ ಹುಡುಗಿಯರು ಶಾಲಾ ಸಮಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅಗತ್ಯವಿರುವ ಕೌಶಲ್ಯಗಳನ್ನು ಪಡೆಯಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಗೋಯಿಂಗ್ ಟು ಸ್ಕೂಲ್ ಟ್ರಸ್ಟ್ 2.7 ಮಿಲಿಯನ್ ಹುಡುಗಿಯರನ್ನು ಫುಟ್‌ಬಾಲ್, ಜೀವನ, ಸುಸ್ಥಿರ ಮತ್ತು ಉದ್ಯಮ ಕೌಶಲ್ಯಗಳೊಂದಿಗೆ ಸಿದ್ಧಗೊಳಿಸುವ ಗುರಿಯನ್ನು ಹೊಂದಿದೆ. ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಮತ್ತು ಕ್ರೀಡೆಗಳಿಂದ ಹಿಡಿದು ನಗರದ ಪ್ರಮುಖ ಉದ್ಯಮಗಳನ್ನು ಪಡೆಯಲಿದ್ದಾರೆ ಮತ್ತು ಆ ಮೂಲಕ ಹವಾಮಾನ ಬದಲಾವಣೆ ಸಮಸ್ಯೆ ಪರಿಹಾರ ಕಾಣಲಿದೆ, ಉದ್ಯೋಗಗಳ ಸೃಷ್ಟಿ ಆಗಲಿದೆ.
ಬಿಟಿ ಗ್ರೂಪ್‌ನ ಸಹಭಾಗಿತ್ವದಲ್ಲಿ ಈಕ್ವಿನಿಕ್ಸ್ ಫೌಂಡೇಶನ್ ಕೂಡ ಹುಡುಗಿಯರು ತಮ್ಮ ಡಿಜಿಟಲ್ ಕೌಶಲ್ಯಗಳನ್ನು ಪಡೆಯಲು ಮತ್ತು ಹವಾಮಾನ ಬದಲಾವಣೆ ಪರಿಹಾರಗಳನ್ನು ವಿನ್ಯಾಸಗೊಳಿಸಲು ಬಳಸುವ ಡಿಜಿಟಲ್ ಕಲಿಕಾ ವೇದಿಕೆಯ ಅಭಿವೃದ್ಧಿಗೆ ಫಂಡ್, ಮಾರ್ಗದರ್ಶನ, ಸ್ವಯಂಸೇವಕ ಸೇವೆ ಮತ್ತು ಪರಿಣತಿಯನ್ನು ಒದಗಿಸುವ ಮೂಲಕ ಬಾಲಕಿಯರಿಗಾಗಿ ಹೊರಾಂಗಣ ಶಾಲೆ ಕಾರ್ಯಕ್ರಮವನ್ನು ಬೆಂಬಲಿಸುತ್ತಿದೆ.
ಭಾರತದ ಬಿಟಿ ಗ್ರೂಪ್ ನ ರೆಸ್ಪಾನ್ಸಿಬಲ್ ಬ್ಯುಸಿನೆಸ್ ಹೆಡ್ ಇಯಾನ್ ಮೆಕ್‌ಬ್ರೈಡ್, “ನಾವು ಗೋಯಿಂಗ್ ಟು ಸ್ಕೂಲ್ ಜೊತೆಗೆ ದೀರ್ಘಾವಧಿಯ ಪಾಲುದಾರಿಕೆಯನ್ನು ಹೊಂದಿದ್ದೇವೆ ಮತ್ತು ಬಾಲಕಿಯರಿಗಾಗಿ ಹೊರಾಂಗಣ ಶಾಲೆ ಕಾರ್ಯಕ್ರಮವು ಕ್ರೀಡೆಯ ಮೂಲಕ ಡಿಜಿಟಲ್ ಕೌಶಲ್ಯಗನ್ನು ಕಲಿಯುವ ಅಪೂರ್ವ ಅವಕಾಶವಾಗಿದೆ, ಅದು ಎಲ್ಲರಿಗೂ ತಂತ್ರಜ್ಞಾನ ಒದಗಿಸುವುದು ಒಳಗೊಂಡು ಎಲ್ಲರಿಗೂ ಪ್ರಯೋಜನವಾಗುವಂತೆ ನೋಡಿಕೊಳ್ಳುವ ಬಿಟಿ ಗ್ರೂಪ್‌ನ ಜಾಗತಿಕ ಪ್ರಣಾಳಿಕೆ ಗುರಿಗೆ ಪೂರಕವಾಗಿದೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ಇಂದು ‘ಮ್ಯಾಚ್ ಡೇ 2024’ ಅನ್ನು ಪ್ರಾರಂಭಿಸಲು ನಾವು ಸಂತೋಷ ಹೊಂದಿದ್ದೇವೆ. ಹೆಣ್ಣು ಮಕ್ಕಳಿಗೆ ಡಿಜಿಟಲ್ ಕೌಶಲ್ಯ, ಕ್ರೀಡಾ ಕೌಶಲ್ಯ ಒದಗಿಸುವ ಯೋಜನೆಗೆ ಅವಿರತ ಬೆಂಬಲ ನೀಡಿದ ಬಿಟಿ ಗ್ರೂಪ್ ಗೆ, ರಾಜ್ಯದ ಶಾಲೆಗಳಲ್ಲಿ ಕೆಲಸ ಮಾಡಲು ನಮಗೆ ಅವಕಾಶ ನೀಡಿದ ಕರ್ನಾಟಕ ಸರ್ಕಾರಕ್ಕೆ ನಾವು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ಈಗಾಗಲೇ ಈ ಹುಡುಗಿಯರ ಸಾಮರ್ಥ್ಯದಿಂದ ವಿಸ್ಮಯಗೊಂಡಿದ್ದೇವೆ ಮತ್ತು ಶಾಲೆಯಿಂದ ಸವಾಲುಗಳ ಜಗತ್ತಿನೆಡೆಗೆ ಬಂದ ಮೇಲೆ ಅವಳು ಏನನ್ನು ಸಾಧಿಸುತ್ತಾಳೆ ಎಂಬುದನ್ನು ನೋಡಲು ಕಾತರರಾಗಿದ್ದೇವೆ” ಎಂದು ಗೋಯಿಂಗ್ ಟು ಸ್ಕೂಲ್ ಸಿಇಓ ಲಿಸಾ ಹೆಡ್ಲಾಫ್ ಹೇಳಿದರು.
ಶಾಲಾ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗಾಗಿ ಹೊರಾಂಗಣ ಶಾಲೆ ಕಾರ್ಯಕ್ರಮವನ್ನು ಜಾರಿಗೆ ತರಲು ಗೋಯಿಂಗ್ ಟು ಸ್ಕೂಲ್ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳೊಂದಿಗೆ ಸಹಿ ಹಾಕಿದೆ. ಅವರು ಸ್ಟಾರ್ಟ್-ಅಪ್ ಉದ್ಯಮಿಗಳೊಂದಿಗೆ ಸೇರಿಕೊಂಡು 18+ ವಯಸ್ಸಿನ ಯುವತಿಯರಿಗೆ ಸುಸ್ಥಿರ ಉದ್ಯಮ ಕೌಶಲ್ಯಗಳನ್ನು ಕಲಿಸಲು ಎಕ್ಸ್‌ಪೀರಿಯೆನ್ಷಿಯಲ್ ಬ್ಯುಸಿನೆಸ್ ಸ್ಕೂಲ್ ಕ್ರ್ಯಾಶ್ ಕೋರ್ಸ್‌ಗಳನ್ನೂ ನಡೆಸುತ್ತಾರೆ. ಹವಾಮಾನ ಬದಲಾವಣೆ ಸಮಸ್ಯೆ ಪರಿಹರಿಸುವ ಬಿಸಿನೆಸ್ ಸಂಶೋಧನೆ ಪ್ರಾರಂಭಿಸಲು ಡಾಯ್ಚ(Deutsche) ಬ್ಯಾಂಕ್‌ನಿಂದ ಸ್ಟಾರ್ಟ್-ಅಪ್ ಸೀಡ್ ಕ್ಯಾಪಿಟಲ್ ಅನುದಾನಕ್ಕೆ ಅರ್ಜಿ ಸಲ್ಲಿಸಬಹುದು.