TUMKURU : ನಡೆದಾಡುವ ದೇವರು, ಶತಾಯುಷಿ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳವರ ಪುಣ್ಯ ಸ್ಮರಣೆಯನ್ನು ರಾಜ್ಯಾದ್ಯಂತ ಜೀವಂತವಾಗಿಡುವ ಏಕೈಕ ಉದ್ದೇಶದಿಂದ ಏಪ್ರಿಲ್ 1 ರಂದು ಮಹಾಸ್ವಾಮಿಗಳವರ 117ನೇ ಹುಟ್ಟುಹಬ್ಬದಂದು ಶ್ರೀ ಸಿದ್ದಗಂಗಾ ಮಠದಲ್ಲಿ 117 ನವಜಾತ ಮಕ್ಕಳಿಗೆ ಶ್ರೀಗಳ ಹೆಸರಿಡುವ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅನ್ನದಾಸೋಹ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 117 ನವಜಾತ ಮಕ್ಕಳ ನಾಮಕರಣ ಹೊಂದುವ ಮಗುವಿಗೆ ಉಚಿತವಾಗಿ ತೊಟ್ಟಿಲು. ಹೊಸ ಉಡುಪು, ತೊಟ್ಟಿಲಿಗೆ ಹಾಸಿಗೆ ವಿತರಣೆ ಮಾಡಲಾಗುವುದು, ಮಗುವಿಗೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಾದ ಮಾಡುವರು.
ಮಗು ಹುಟ್ಟಿದ ದಿನದಿಂದ 1 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿರುತ್ತದೆ. ಮಕ್ಕಳ ಪೋಷಕರು ಅರ್ಜಿ ನಮೂನೆಯಲ್ಲಿ ವಿವರ ಸಲ್ಲಿಸುವುದು, ಪೋಷಕರ ವಿಳಾಸದ ಪುರಾವೆ ಮತ್ತು ಭಾವಚಿತ್ರ ನೀಡಬೇಕು, ಮಗುವಿನ ಜನನ ಪ್ರಮಾಣ ಪತ್ರ, ಈಗಾಗಲೇ ನಾಮಕರಣ ಮಾಡಿರುವ ಮಕ್ಕಳಿಗೆ ಮರುನಾಮ ಕರಣಕ್ಕೆ ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಮಾರ್ಚ್ 31 ರೊಳಗೆ ಅರ್ಜಿ ಸಲ್ಲಿಸಬೇಕು. ಪೋಷಕರು ಹೆಚ್ಚಿನ ವಿವರಗಳಿಗೆ 9343319781 ಮತ್ತು 7348853276 ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಜಯಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.