BIG NEWS : Upgradation of 554 Stations nationwide ನೈರುತ್ವ ರೈಲ್ವೆಯ 15 ರೈಲು ನಿಲ್ದಾಣ ಮೇಲ್ದರ್ಜೆಗೆ ಪ್ರಧಾನಿ ಚಾಲನೆ: ಸಾಕ್ಷಿಯಾದ ರಾಜ್ಯಪಾಲರು

varthajala
0

ಬೆಂಗಳೂರು 26.02.2024: ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ದೇಶಾದ್ಯಂತ 554 ರೈಲ್ವೆ ಲ್ದಾಣಗಳ ಪುನರಾಭಿವೃದ್ಧಿ ಮತ್ತು 1500 ರಸ್ತೆ ಮೇಲಸೇತುವೆಗಳು ಮತ್ತು ಅಂಡರ್ ಪಾಸ್ ಗಳ ಶಂಕುಸ್ಥಾಪನೆ ನೆರವೇರಿಸಿದರು, ಈ  ಕಾರ್ಯಕ್ರಮದಲ್ಲಿ ವರ್ಚವಲ್ ಮೂಲಕ ಭಾಗವಹಿಸಿದರು.

ನಗರದ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿದ ರಾಜ್ಯಪಾಲರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ನೈರುತ್ವ ರೈಲ್ವೆಯ 15 ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿಸುವ ಯೋಜನೆಗೆ ಚಾಲನೆ ನೀಡಿದರು.






ನಂತರ ಮಾತನಾಡಿದ ರಾಜ್ಯಪಾಲರು, ಸುಗಮ ಮತ್ತು ಸಂಘಟಿತ ರೈಲು ಸಾರಿಗೆ ವ್ಯವಸ್ಥೆಯು ದೇಶದ ನಿರಂತರ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದೆ. ಭಾರತೀಯ ರೈಲ್ವೇದೇಶದ ಪ್ರಮುಖ ಸಾರಿಗೆ ವಿಧಾನವಾಗಿದ್ದುದೇಶದ ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ 41 ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳನ್ನು ದೇಶವಾಸಿಗಳಿಗೆ ಸಮರ್ಪಿಸಿರುವುದು ಸಂತಸ ತಂದಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ554 ರೈಲು ನಿಲ್ದಾಣಗಳ ಶಂಕುಸ್ಥಾಪನೆ ಸಮಾರಂಭ ಮತ್ತು ಉದ್ಘಾಟನೆ ಮತ್ತು 1500 ROB/ಅಂಡರ್ ಪಾಸ್‌ಗಳು ಮತ್ತು ವಿವಿಧ ರೈಲ್ವೆ ಯೋಜನೆಗಳನ್ನು ದೇಶಾದ್ಯಂತ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಕಾಮಗಾರಿಗಳಲ್ಲಿನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ 34 ರೈಲು ನಿಲ್ದಾಣಗಳು ಮತ್ತು 30 ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣವನ್ನು ರೂ 1192.86 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತದೆ. ಬೆಂಗಳೂರು ವಿಭಾಗದಲ್ಲಿ 15 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಪುನರ್ವಸತಿ ಆಧುನೀಕರಣಕ್ಕಾಗಿ 326 ಕೋಟಿ ರೂ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳ ಮಾರ್ಗದರ್ಶನದಲ್ಲಿಪ್ರಯಾಣಿಕರಿಗೆ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರೈಲ್ವೆ ಸಚಿವಾಲಯವು ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣದ ಕೆಲಸವನ್ನು ಮಾಡುತ್ತಿದೆ. ಇದು ವ್ಯಾಪಾರವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.

ಸ್ವಾವಲಂಬಿ ಭಾರತ ಅಭಿಯಾನದ ಮೂಲಕ ರೈಲ್ವೆಯ ಹಲವು ಪ್ರಮುಖ ಮೂಲಸೌಕರ್ಯ ಮತ್ತು ಉತ್ಪಾದನಾ ಯೋಜನೆಗಳನ್ನು ಆರಂಭಿಸಲಾಗಿದೆ. ಇದರಲ್ಲಿ ವಂದೇ ಭಾರತ್ ರೈಲುಗಳ ಸ್ವದೇಶಿ ತಯಾರಿಕಾ ಕೆಲಸ ಪ್ರಮುಖವಾಗಿದೆ. ಪ್ರಸ್ತುತ ರಾಜ್ಯದಲ್ಲಿ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡುತ್ತಿವೆ. ಕರ್ನಾಟಕದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಫ್ಲ್ಯಾಗ್ ಆಫ್ ಮಾಡಲಾಯಿತು. ನೈಋತ್ಯ ರೈಲ್ವೇಯಲ್ಲಿ 85 ಪ್ರತಿಶತಕ್ಕೂ ಹೆಚ್ಚು ರೈಲು ಜಾಲವು ವಿದ್ಯುದೀಕರಣಗೊಂಡಿದೆ. ಕರ್ನಾಟಕದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸ್ಟೇಷನ್ ಭಾರತದ ಮೊದಲ ಹವಾನಿಯಂತ್ರಿತ ನಿಲ್ದಾಣವಾಗಿದ್ದುವಿಮಾನ ನಿಲ್ದಾಣದಂತಹ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ. ಕಳೆದ 8-10 ವರ್ಷಗಳಲ್ಲಿಭಾರತೀಯ ರೈಲ್ವೇ ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಅಭಿವೃದ್ಧಿ ಹೊಂದಿದ್ದುದೇಶದ ಆರ್ಥಿಕತೆಯ ಅಭಿವೃದ್ಧಿ ಮತ್ತು ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶದ ಅಭಿವೃದ್ಧಿಯಲ್ಲಿ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ನಾನು ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ಸಮಾರಂಭದಲ್ಲಿ ಸಂಸದರಾದ ಪಿ ಸಿ ಮೋಹನ್, ರೈಲ್ವೆ ಡಿವಿಷನಲ್ ಮ್ಯಾನೇಜರ್ ಯೋಗೇಶ್ ಮೋಹನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. 

Prime Minister Initiates Upgradation of 554 Stations nationwide: Karnataka Governor Witnesses Historic Moment


BANGALORE, 26.02.2024: Karnataka Governor Thaawarchand Gehlot, joined virtually from Bangalore, witnessed a momentous occasion as Prime Minister Narendra Modi spearheaded the redevelopment of 554 railway stations nationwide. The event also marked the laying of the foundation for 1500 road overpasses and underpasses under the Amrit Bharat Station Project.

At a function near Whitefield Railway Station, the Hon'ble Prime Minister launched the ambitious project to upgrade 15 railway stations of the South Western Railway through virtual means. Speaking to the audience, Governor Thaawarchand Gehlot emphasized the pivotal role of a well-organized rail transport system in fostering the country's continuous development. He lauded the Prime Minister's dedication of 41 thousand crore rupees worth of railway projects to the nation via video conference, highlighting the significance of the Amrit Bharat Station Project in bolstering trade, commerce, and economic activities.

Governor Gehlot outlined the extensive plans under the Amrit Bharat Station Scheme, including the redevelopment and modernization of 34 railway stations and 30 road over-bridges and under-bridges within the South Western Railway sector, amounting to Rs 1192.86 crore. Additionally, he detailed the earmarked budget of Rs 326 crore for the redevelopment and rehabilitation of 15 railway stations in the Bangalore division. Under the visionary leadership of Prime Minister Modi, the Ministry of Railways is committed to enhancing passenger experiences by providing modern amenities at railway stations, thus catalyzing economic growth.

Highlighting the strides made in indigenous manufacturing through initiatives like Swavalambi Bharat Abhiyan, Governor Gehlot commended the development of Vande Bharat Express trains, with Karnataka witnessing the inauguration of its first Amrit Bharat Express between Malda Town and Sir M Visvesvaraya Terminal. He further noted significant achievements such as the electrification of over 85 percent of the rail network in the South Western Railway region and the establishment of the first air-conditioned station in India at Sir M Visvesvaraya Terminal in Karnataka.

The ceremony, graced by dignitaries including MP PC Mohan and Railway Divisional Manager Yogesh Mohan, underscored the transformative impact of railway infrastructure development on India's economy. Governor Gehlot extended his sincere appreciation to Prime Minister Modi for his visionary leadership in driving the nation's progress.


Post a Comment

0Comments

Post a Comment (0)