ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಉಮ್ರಾಪಾಣಿ ಗೌಳಿವಾಡದಲ್ಲಿ ಶಾಲಾ ಮರಾಠಿ ಶಾಲೆಯನ್ನು ಕನ್ನಡ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ವಿಧಾನಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಶಾಂತಾರಾಮ್ ಬುಡ್ನ ಸಿದ್ದಿ ಅವರ ಪರವಾಗಿ ತಳವಾರ ಸಾಬಣ್ಣ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾನಾಪುರ ತಾಲ್ಲೂಕಿನ ಉಮ್ರಾಪಾಣಿ ಗ್ರಾಮದಲ್ಲಿ 32 ಕುಟುಂಬಗಳಿದ್ದು, 25 ಮಕ್ಕಳ ಸಂಖ್ಯೆ ಇರುತ್ತದೆ. ಸದರಿ 25 ಮಕ್ಕಳು ಕನ್ನಡ ಮಾಧ್ಯಮದವರಾಗಿದ್ದು, ಕನ್ನಡ ಆಭ್ಯಯಿಸುವ ಸಲುವಾಗಿ ಸುಮಾರು 4 ಕಿ.ಮೀ ದೂರದಲ್ಲಿರುವ ಜೋಯಿಡಾ ವಲಯದ ನಾನಾಕೇಸೂರಡಾ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದಾರೆ. ಉಮ್ರಾಪಾಣಿ ಗ್ರಾಮದಲ್ಲಿ ಮರಾಠಿ ಮಾಧ್ಯಮದ ಶಾಲೆಯಿದ್ದು, ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಲ್ಲದ ಕಾರಣ ಸದರಿ ಶಾಲೆಯನ್ನು ಕನ್ನಡ ಮಾಧ್ಯಮದ ಶಾಲೆಯನ್ನಾಗಿ ಪರಿವರ್ತಿಸುವ ಪ್ರÀ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದರು.