ಬೆಂಗಳೂರು : ಹರಿದಾಸ ಸಂಪದ ಟ್ರಸ್ಟ್ ನಡೆಸುತ್ತಿರುವ "ಹರಿದಾಸ ಹಬ್ಬ 2024" ಪ್ರಯುಕ್ತ 23ನೇ ವರುಷದ ಆಚರಣೆಯಲ್ಲಿ ಈ ವರ್ಷ ಭಜನಾ ಮಂಡಳಿಗಳು ಹಾಗೂ ಸಂಗೀತ ಶಾಲೆಗಳಿಗೆ ರಾಜ್ಯಮಟ್ಟದ ದಾಸರಪದಗಳ ಗಾಯನದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಹರಿದಾಸ ಸಾಹಿತ್ಯಕ್ಕೆ ಮೀಸಲಾದ ದಾಸನಮನ ಹಾಗೂ ದಾಸವಾಣಿ ಮುಖಪುಟ (Facebook) ಸಮೂಹಗಳ ಸಹಯೋಗದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದು, ಮಾರ್ಚ್ 2 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5 ರಿಂದ 7 ರವರೆಗೆ FB online live ಮೂಲಕ ಮೊದಲ ಎರಡು ಸುತ್ತುಗಳು ನಡೆದು, ಅಂತಿಮ ಸುತ್ತು ಹರಿದಾಸ ಹಬ್ಬದ ವೇದಿಕೆಯಲ್ಲಿ ನಡೆಯಲಿದೆ.
ವಿಶ್ವಸಂಸ್ಕೃತಿಗೆ ತನ್ನದೇ ಕೊಡುಗೆಯಿತ್ತಿರುವ ಕನ್ನಡದ ಹರಿದಾಸ ಸಂಸ್ಕೃತಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಜನತೆಗೆ ತಲುಪಿಸುತ್ತಿರುವ "ಹರಿದಾಸ ಹಬ್ಬ"ವನ್ನು ಸಮಾಜಕ್ಕೆ ಕೊಟ್ಟು, ಸೃಜನಶೀಲತೆಗೆ ಹೆಸರಾದ ಹಾಗೂ ದಾಸಸಾಹಿತ್ಯ ಸಂಸ್ಕೃತಿ ವೇದಿಕೆಗೆ ಹಲವು ಪ್ರಥಮಗಳನ್ನಿತ್ತ ಬೆಂಗಳೂರಿನ ಹರಿದಾಸ ಸಂಪದ ಟ್ರಸ್ಟ್ ಈ ಕಾರ್ಯಕ್ರಮ ಯೋಜನೆಯನ್ನು ಹಮ್ಮಿಕೊಂಡಿದೆ. 25 ಸಾವಿರಕ್ಕೂ ಹೆಚ್ಚು ಮೌಲ್ಯದ ಬಹುಮಾನ ಹೊಂದಿರುವ ಈ ಯೋಜನೆಯಿಂದ, ದಾಸಸಾಹಿತ್ಯವನ್ನು ಇನ್ನೂ ಪರಿಣಾಮಕಾರಿಯಾಗಿ ವಿಸ್ತರಿಸುವ ಆಶಯದೊಂದಿಗೆ ತಮ್ಮ ಮುಂದೆ ಇಡಲಾಗಿದೆ. ಕಾರ್ಯಕ್ರಮದ ಮಾರ್ಗದರ್ಶಕರಾಗಿ ಹೆಸರಾಂತ ದಾಸರಪದಗಳ ಪರಿಣಿತರು ಸಮಿತಿಯಲ್ಲಿದ್ದು ಶ್ರೀ ಪುತ್ತೂರು ನರಸಿಂಹನಾಯಕ್ ರವರು ಇದರ ನೇತೃತ್ವ ವಹಿಸಲಿದ್ದಾರೆ.
ಆಸಕ್ತರು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ : ಮಾರ್ಚ್ 1, ನೋಂದಣಿ ಶುಲ್ಕ : ಒಂದು ಸಾವಿರ ರೂಪಾಯಿ ಮಾತ್ರ.