ಬೆಂಗಳೂರು :-ಭಾರತಮಾತೇಗೆ ನೋವಾಗದಂತೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸೋಣ ಎಂದು ಗೊಸಂರಕ್ಷಕ ಸಮಾಜ ಸೇವಕ ಮಹೇಂದ್ರ ಮುನ್ನೊಥ್ ಕರೆ ನೀಡಿದರು,
ಅವರು ನಾಟ್ಯ ಸನ್ನಿಧಿ ಭರತನಾಟ್ಯ ಕಲಾ ಶಾಲೆ ಮತ್ತು ಶ್ರೀಸಾಯಿ ನಟರಾಜ ಆರ್ಟ್ಸ್ ಅಕಾಡೆಮಿ ತಿರುಪತಿ ಯ ಸಂಯುಕ್ತಾಶ್ರಯದಲ್ಲಿ ಮಲ್ಲತ್ತಹಳ್ಳಿ ಕಲಾಗ್ರಾಮದ ಬಯಲು ರಂಗಮಂದಿರದಲ್ಲಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ದಾಖಲೆಗಾಗಿ ಆಯೋಜಿಸಿದ್ದ ಪುರಂದರ ನೃತ್ಯ ನಿರಾoಜನಾ ಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ಒಬ್ಬ ಸಾಮಾನ್ಯ ವ್ಯಕ್ತಿಯು ಕೂಡ ತನ್ನ ಕರ್ತವ್ಯವನ್ನು ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಅದು ಕೂಡ ದೇಶ ಸೇವೆಯಾಗುತ್ತೆ ಎಂದರು,
ಗೋವಿನ ಹಾಲಿಗೆ ಯಾವುದೇ ಭೇದವಿಲ್ಲ, ಹಸುವೇ ಸತ್ಯ ಹಾಲೇ ನಿತ್ಯ ಎಂದರು ಗೋವಿನಿಂದಲೇ ಸಕಲ ಸೌಭಾಗ್ಯ ವೆಂದರು,
ನಾವೆಲ್ಲರೂ ಸೇರಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳಸೋಣವೆಂದರು.ಖ್ಯಾತ ಶಿಕ್ಷಣ ತಜ್ಞೆ ಡಾ, ಗೀತಾ ರಾಮಾನುಜಮ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪುರಂದರದಾಸರು ತಮ್ಮ ಸರ್ವಸ್ವವನ್ನು ದಾನಮಾಡಿ ಕಾಲಿಗೆ ಗೆಜ್ಜೆ ಕಟ್ಟಿ ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಆಡು ಭಾಷೆಯಲ್ಲಿ ದಾಸ ಸಾಹಿತ್ಯ ವನ್ನು ರಚಿಸಿ ಅದನ್ನು ಬೀದಿ ಬೀದಿಗಳಲ್ಲಿ ಹಾಡಿ ಭಗವಂತನ ಸಾಕ್ಷಾತ್ಕಾರ ಮಾಡಿಸಿದರು, ಕರ್ನಾಟಕ ಸಂಗೀತಕ್ಕೆ ಸಪ್ತಸ್ವರಗಳನ್ನು ನೀಡಿ ಕರ್ನಾಟಕ ಸಂಗೀತ ಪೀತಮಹರೇನಿಸಿದರು, ಸುಮಾರು 4ಲಕ್ಷದ 25ಸಾವಿರಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ ಹೆಗ್ಗಳಿಕೆ ಅವರದು bhavabdiaೃತ್ಯ ಗುರುಗಳಾದ ಡಾ, ಮೋನಿಷಾ ನವೀನ್ ಮತ್ತು ಡಾ, ಪಿ. ಶರತ್ ಚಂದ್ರ ಅವರ ನೇತೃತ್ವದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ನೃತ್ಯ ವಿದ್ಯಾರ್ಥಿಗಳು ಪುರಂದರದಾಸರ ತಂಬೂರಿ ಮೀಟಿದವಾ ಭವಾಬ್ಬದಿ ದಾಟಿದವ... ಗೀತೆಗೆ ನೃತ್ಯ ಮಾಡಿ ದಾಖಲೆ ನಿರ್ಮಿಸಿದರು.
ಹಿರಿಯ ಪತ್ರಕರ್ತ ಎನ್ ಎಸ್ ಸುಧೀಂದ್ರರಾವ್ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನೆಡೆಯಬೇಕು, ಪುರಂದರದಾಸರ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ರಾಜ್ಯದ ಯಾವುದಾದರು ಒಂದು ವಿಶ್ವ ವಿದ್ಯಾಲಯದಲ್ಲಿ ಪುರಂದರ ಅಧ್ಯಯನ ಮತ್ತು ಸಂಶೋಧನ ಕೇಂದ್ರವನ್ನು ಆರಂಭಿಸಬೇಕು ಎಂದರು.
ಸಮಾರಂಭದಲ್ಲಿ ದೂರದರ್ಶನ ಚಂದನ ವಾಹಿನಿಯ ಉಪನಿರ್ದೇಶಕ ಕೆ. ಸತೀಶ್, ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷ್ ರಾವ್,ಅಂಬಿಕಾ ಪಂಚಾಟೆ ಸೇರಿದಂತೆ ಅಂದ್ರ ತೆಲೆಂಗಾಣ ಮತ್ತು ರಾಜ್ಯದ ನಾನಾ ಬಾಗಗಳಿಂದ ಬಂದ ನೃತ್ಯ ತಂಡಗಳು ಪಾಲ್ಗೊಂಡಿದ್ದರು.