ಅಬ್ಭಾ! ಅದುಅದ್ಭುತ ಗಾಲಿ ನೃತ್ಯ ಪ್ರದರ್ಶನ ಪಾಶ ನೃತ್ಯ ನಿರ್ದೇಶನ

varthajala
0

ಅಬ್ಬಾ! ಅದೊಂದುಅದ್ಭುತ ಗಾಲಿ ನೃತ್ಯ ಪ್ರದರ್ಶನ. ನಡೆದಿದ್ದುಹಾಸನದಕಲಾಭವನದಲ್ಲಿ.ಹಾಸನಕ್ಕೆ ಪಾಶಾ ಅವರತಂಡ ಕರೆಸಿದ್ದವರು ನಮ್ಮಹಾಸನ ಚಾರಿಟಬಲ್ ಟ್ರಸ್ಟ್ನಹರೀಶ್‌ಕೆ.ಆರ್.ಅದುಅವರಟ್ರಸ್ಟ್ನ 3ನೇ ವರ್ಷದವಾರ್ಷಿಕೋತ್ಸವಕ್ಕೆ, ಆನೇಕಲ್‌ನಸಯ್ಯದ್ ಸಲ್ಲಾವುದ್ದಿನ್ ಪಾಶ ಮೂರು ದಶಕಗಳಿಗೂ ಹೆಚ್ಚು ಕಾಲ ವಿಕಲ ಚೇತನರಿಗೆ ನೃತ್ಯಕಲೆಯತರಬೇತಿನೀಡಿತಮ್ಮ ಕಲಾಸೇವೆಗೆ 2007ರಲ್ಲಿ ರಾಷ್ಟçಪತಿಗಳಿಂದ ಪ್ರಶಸ್ತಿ ಪಡೆದ ನೃತ್ಯಪಟು. ಮೂರುಗಂಟೆಗೆ ಇದ್ದ ಕಾರ್ಯಕ್ರಮ ಆರ0ಭವಾಗಿದ್ದು ಆರಕ್ಕೆ. 




ವೇದಿಕೆ ಭಾಷಣ ಸನ್ಮಾನ ಮುಗಿದುಗಣಪತಿ ವಂದನಕಾರ್ಯಕ್ರಮದೊAದಿಗೆಆರ0ಭಗೊ0ಡಿತು ಪಾಶಾ ತಂಡದವರಶಾಸ್ತಿçಯ ಭರತನಾಟ್ಯ, ಶಿವ ತಾಂಡವ ನೃತ್ಯದಲ್ಲಿಡಿಜಿಟಲ್ ಪರದೆಯ ಮೇಲೆ ಜಗದ ಅವಿಷ್ಕಾರದೃಶ್ಯ.! ಸುಮಾರು 25 ನಿಮಿಷಗಳ ಭಗವದ್ಗೀತೆ ನೃತ್ಯರೂಪಕದಲ್ಲಿ ಮಹಾಭಾರತಯುದ್ಧದ ದೃಶ್ಯಾವಳಿ.ದಕ್ಷಿಣ ಭಾರತದ ಭರತನಾಟ್ಯಉತ್ತರ ಭಾರತದಕಥಕ್ ನಡುವಣಜುಗಲ್ ಬಂದಿ. ಮಂಡ್ಯ ಭಾಗದಲ್ಲಿ ಹೆಸರಾದಜನಪದ ನೃತ್ಯ ಪ್ರಕಾರಪೂಜಾ ಪಟಕುಣಿತ, ಕನ್ನಡ ನಾಡು ನುಡಿಅಭಿಮಾನ ಉಕ್ಕಿಸುವ ಹುಟ್ಟಿದರೆಕನ್ನಡ ನಾಡಲ್ಲಿ ಹುಟ್ಟಬೇಕು (ಪಾಶಾ ಹುಟ್ಟಿದ್ದು ದಿ. 15-6-1968ರಲ್ಲಿ) ಸಿನಿಮಾ ಹಾಡಿಗೆ ನೃತ್ಯ, ಕಡೆಯಲ್ಲಿ ಭಾರತರಕ್ಷಕರುವೀರಯೋಧರದೇಶ ಸೇವೆಯರ‍್ಮಿಇನ್ ವ್ಹಿಲ್ಸ್.. ಎಲ್ಲವೂವಿಭಿನ್ನ ವೈಶಿಷ್ಟö್ಯ ನೃತ್ಯ ಪ್ರಕಾರಗಳ ಸಮಾಗಮ. ಹರೀಶ್ ಮೂಲಕ ಪಾಶರನ್ನು ಸಂಪರ್ಕಿಸಿ ಮಾತನಾಡಿಸಿದೆ. ಅವರು ಹೇ

ಳುತ್ತಾ ಹೋದರುತಾಸುಗಟ್ಟಲೇ. 

ತುಸುಕಟ್ ಮಾಡಿ ಮೊದಲುಅವರನ್ನು ಪರಿಚಯಿಸುವುದಾದರೇನಾಟ್ಯ ಶಾಸ್ತದ ಕಲೆಯನ್ನುಕರಗತ ಮಾಡಿಕೊಳ್ಳಲು ಪಾಶಾರುಶ್ರೀಮತಿ ಮಾಯಾರಾವ್‌ ಅವರ ಮಾರ್ಗದರ್ಶನದಲ್ಲಿ ನೃತ್ಯ ಸಂಯೋಜನೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದವರು. ನಾಟ್ಯಇನ್ಸ್ಟ್ಯೂಟ್‌ಆಫ್‌ ಕಥಕ್‌ ಅಂಡ್‌ ಕೊರಿಯೋಗ್ರಫಿ ಸಂಸ್ಥೆಯಲ್ಲಿ 3 ವರ್ಷಡಿಪ್ಲೋಮ ಪದವಿಗಳಿಸಿದ್ದಾರೆ. ಮಾಯಾರಾವ್‌ಸಂಯೋಜಿಸಿದ ಅನೇಕ ನೃತ್ಯ ರೂಪಕಗಳಲ್ಲಿ ಪ್ರಧಾನ ಭೂಮಿಕೆಯಲ್ಲಿ ನರ್ತಿಸಿರುವರು.ಇವುಗಳಲ್ಲಿ ಹೊಯ್ಸಳ ವೈಭವ, ವಿಜಯನಗರ ವೈಭವ, ಅಮಿರ್‌ಖುಸ್ರೋ, ರಾಮಾಯಣದರ್ಶನಂಪ್ರಮುಖವಾಗಿವೆ. ಇಂದು ಇವರು ಅ0ತಾರಾಷ್ಟಿçಯಖ್ಯಾತಿವೆತ್ತ ನೃತ್ಯಪಟುವಾಗಿ ಬೆಳೆದಿರುವರು. ನೃತ್ಯ ಸಂಯೋಜಕರು. 

ವಿಶೇಷವಾಗಿ ವಿಕಲಚೇತನರ ಶಾಸ್ತಿçಯ ನೃತ್ಯ ಅವಿಷ್ಕಾರದಲ್ಲಿಪ್ರಯೋಗಶೀಲತೆಯಿಂದ ಖ್ಯಾತಿವೆತ್ತರು. ಅನಂತರಾಜುಅವರೇ, ನಾನು ಒಂದು ಕಾಲು ಇಲ್ಲದವರಿಗೆ ವೀಲ್‌ಚೇರ್ ಮೇಲೆ ನೃತ್ಯ ಕಲಿಸಲು ಸ್ವತ: ನಾನೇ ಕಾಲು ಮಡಿಚಿ ಬಟ್ಟೆಕಟ್ಟಿಕೊಂಡುಅದನ್ನುಕಲಿಯುವುದು ಎಷ್ಟು ಕಷ್ಟ ಎಂಬುದನ್ನುಅಭ್ಯಾಸ ಮಾಡಿಅರಿತ್ತಿದ್ದೇನೆ. ಎಂದರು. ತಮ್ಮ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾಕಲಿಸುವ ಸಾಹಸಿ ತಮ್ಮ ನಾಟ್ಯಗುರುಗಳ ಹೆಸರನ್ನು ಹೇಳಿದರು. ಭರತ ನಾಟ್ಯವನ್ನುಶ್ರೀಮತಿ ನರ್ಮದಾ, ಶ್ರೀಮತಿ ಪದ್ಮಿನಿ ರಾವ್, ಶ್ರೀ ಕಿಟ್ಟಪ್ಪ ಪಿಳ್ಳೆö, ಶ್ರೀಮತಿ ಮೀನಲ್ ಪ್ರಭುಅವರಲ್ಲಿ ಪಡೆದಿರುವರು.ಅಭಿನಯ ಶಿಕ್ಷಣವನ್ನು ಪದ್ಮಭೂಷಣ ಶ್ರೀಮತಿ ಮಾಯಾರಾವ್‌ಅವರಲ್ಲಿಕರ್ನಾಟಕ ಸಂಗೀತವನ್ನುಶ್ರೀಮತಿ ರಮಾಮಣಿಅವರಲ್ಲಿ ಮತ್ತುಮೃದಂಗವನ್ನು ಟಿ.ಎ.ಎಸ್.ಮಣಿಅವರಲ್ಲಿಕಲಿತ್ತಿರುವರು. ಬಾಲ್ಯದಿಂದಲೇ ಸಂಸ್ಕೃತರಾಮಾಯಣ, ಮಹಾಭಾರತ, ಭಗವದ್ಗೀತಾ, ಯೋಗ ಶಾಸ್ತçಅಧ್ಯಯನವನ್ನುಆನೇಕಲ್‌ಅಷ್ಟಾಕ್ಷರಮ್ ನಾರಾಯಣಅಯ್ಯಂಗಾರ್ ಮತ್ತು ವಿದ್ಯಾಲಂಕಾರ ಶಾಸ್ತçಚೂಡಾಮಣಿ ಪ್ರೊ.ಎಸ್.ಕೆ.ರಾಮಚಂದ್ರರಾವ್,ಕಲಾ ಇತಿಹಾಸ ಸೌಂದರ್ಯ ಶಾಸ್ತçವನ್ನುಡಾ.ಚೂಡಾಮಣಿ ನಂದಗೋಪಾಲ್‌ರಲ್ಲಿಅಭ್ಯಾಸ ಮಾಡಿದ್ದಾರೆ.ಇವರು ಪ್ರಪಂಚದಲ್ಲೇ ಪ್ರಥಮ ಬಾರಿಗೆ ನಾಟ್ಯ ಶಾಸ್ತçಆನ್ ವೀಲ್ಸ್ ಶೀರ್ಷಿಕೆಯಲ್ಲಿ ವಿಕಲಚೇತನ ಶಿಷ್ಯರಿಗೆ ಗಾಲಿ ಕುರ್ಚಿಯ ಮೇಲೆ ಭರತ ನಾಟ್ಯ ಸಂಯೋಜನೆಗಳನ್ನು ಸೃಷ್ಟಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಬೆರಗುಗೊಳಿಸಿದ್ದಾರೆ. ಭರತ ನಾಟ್ಯ ಕೂಚಿಪುಡಿ ಕಲಾವಿದರಿಗೆ ನಟ್ಟುವಾಂಗ ಸಹಕಾರ ನೀಡಿದ್ದಾರೆ. ಸರ್ಕಾರಿಕನ್ನಡ ಶಾಲೆಯಲ್ಲಿಓದಿದಇವರು ಕನ್ನಡದಲ್ಲಿ ಅನೇಕ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಕುವೆಂಪು ಅವರರಾಮಾಯಣದರ್ಶನಂರೂಪಕವನ್ನು ಕುವೆಂಪುಅವರ ಸಮ್ಮುಖದಲ್ಲೇ ಪ್ರದರ್ಶಿಸಿದ್ದಾರೆ. 



ಬಸವಣ್ಣನವರ ವಚನಗಳಿಗೆತಾವೇಏಕ ವ್ಯಕ್ತ್ತಿ ನೃತ್ಯರೂಪಕದಲ್ಲಿ ವಿಶ್ವಾದ್ಯಂತ ಸ0ಚರಿಸಿದ್ದಾರೆ. ಬಸವಣ್ಣ, ಅಲ್ಲಮ ಪ್ರಭು, ಗಾನಯೋಗಿ ಪಂಚಾಕ್ಷರಿ ಗವಾಯಿ, ರಾಮ ಲಕ್ಷö್ಮಣರಾವಣ, ಹನುಮಂತ, ಕೃಷ್ಣ ಅರ್ಜುನ, ಶಿವ, ಭಸ್ಮಾಸುರ, ಹೊಯ್ಸಳ ವಿಷ್ಣುವರ್ಧನ, ಶ್ರೀ ಕೃಷ್ಣ ದೇವರಾಯ, ಭರತ ಬಾಹುಬಲಿ ಪಾತ್ರಗಳ ಪರಕಾಯ ಪ್ರವೇಶಿಸಿ ಮನೋಜ್ಞಅಭಿನಯದಿಂದಜೀವತುAಬಿದ್ದಾರೆ. ವಿಶ್ವದಲ್ಲೇ ಪ್ರಥಮ ಬಾರಿಗೆ ಗಾಲಿ ಕುರ್ಚಿ ಮೇಲೆ ಏಳು ಭಾಷೆಗಳಲ್ಲಿ ಭಗವದ್ಗೀತಾ ನೃತ್ಯರೂಪಕ ಪ್ರದರ್ಶಿಸಿರುವುದು ಇವರ ಸಾಧನೆ. ವಿಕಲ ಚೇತನರಿಗೆ ಸಮರ ಕಲೆಗಳಲ್ಲಿ ತರಭೇತಿ ನೀಡಿಸಾಹಸಿ. ಇವರ ಗಾಲಿ ಕುರ್ಚಿಯ ಮೇಲೆ ಕುಳಿತದುರ್ಗಾಆನ್ ವೀಲ್ಸ್ ನೃತ್ಯ ಪರಿಕಲ್ಪನೆರೋಚಕ! ಎಂ.ಎಸ್.ಸತ್ಯುಅವರಕೈರ್ ಹಿಂದಿ ಧಾರಾವಾಹಿಯಲ್ಲಿಚಂದನ ವಾಹಿನಿಯಲ್ಲಿ ಪ್ರಸಾರವಾದಈಶ್ವರಅಲ್ಲಾ ನೀನೆ ಎಲ್ಲಾಧಾರಾವಾಹಿಯಲ್ಲಿ ನೂರಕ್ಕೂ ಹೆಚ್ಚು ಕಂತುಗಳಲ್ಲಿ ಅಭಿನಯಿಸಿ ನರ್ತಿಸಿದ ಇವರಶಿಶುನಾಳ ಶರೀಫರ ಪಾತ್ರ ನಾಡಿನಜನಮನ ಸೆಳೆದಿದೆ. 



 ಗೊರೂರುಅನಂತರಾಜು, ಹಾಸನ. ಮೊ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರದೇವಸ್ಥಾನರಸ್ತೆ,  ಹಾಸನ-573201

Post a Comment

0Comments

Post a Comment (0)