ಸಕಲ ಸಂಕಷ್ಟ ನಿವಾರಕ ಶ್ರೀ ಅಣ್ಣಮ್ಮ ದೇವಿ ಮಹೋತ್ಸವ ಸಮಾರಂಭ

varthajala
0

ಶಿವನಗರ: ಶ್ರೀ ಅಣ್ಣಮ್ಮ ದೇವಿ ಭಕ್ತ ಮಂಡಳಿ ವತಿಯಿಂದ ಶಿವನಗರ ಮಹಾಗಣಪತಿನಗರದಲ್ಲಿ 50ನೇ ವರ್ಷದ ಶ್ರೀ ಅಣ್ಣಮ್ಮ ದೇವಿ ವಾರ್ಷಿಕೋತ್ಸವ ಸಮಾರಂಭವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು.


ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ವಿಜಯಕುಮಾರ್, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಮಂಜುಳ ವಿಜಯಕುಮಾರ್ ರವರ ಕುಟುಂಬವರ್ಗದವರು  ಶ್ರೀ ಅಣ್ಣಮ್ಮ ದೇವಿಗೆ ಪೂಜೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಿದರು.

ಸಮಾಜ ಸೇವಕರಾದ ದಿ.ಎಂ.ಹನುಮಂತಯ್ಯರವರು 49ವರ್ಷಗಳ ಹಿಂದೆ ಶಿವನಗರ, ಮಹಾಗಣಪತಿನಗರ, ಬೀರಂಗಿಪಾಳ್ಯ ಸುತ್ತಮುತ್ತಲು ವ್ಯವಸಾಯ ಮಾಡುತ್ತಿದ್ದರು ಸಕಾಲಕ್ಕೆ ಮಳೆ, ಬೆಳೆಯಾಗಲಿ, ರೋಗರುಜಿನ ಬಾರದಿರಲಿ ಎಂದು ನಗರ ದೇವತೆ ಶ್ರೀ ಅಣ್ಣಮ್ಮ ದೇವಿ ಪ್ರತಿಷ್ಠಾಪನೆ ಅಚರಣೆ ಪದ್ದತಿ ತಂದರು.

ಅಂದಿನಿಂದ ಇಂದಿನವರಗೆ ಪ್ರತಿವರ್ಷ ಶ್ರೀ ಅಣ್ಣಮ್ಮ ದೇವಿ ಮಹೋತ್ಸವ ಅಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದೇ, ನಮ್ಮ ಕುಟುಂಬದ ಸ್ವಂತ ವೆಚ್ಚದಲ್ಲಿ ಅಚರಣೆ ಮಾಡಿಕೊಂಡು ಬರುತ್ತಿದ್ದೇವೆ.

ಸುಖ, ಶಾಂತಿ ಮತ್ತು ನೆಮ್ಮದ್ದಿ ಎಲ್ಲರ ಬಾಳಿನಲ್ಲಿ ಲಭಿಸಲಿ ಶ್ರೀ ಅಣ್ಣಮ್ಮ ದೇವಿ ಕೃಪಾಶೀರ್ವಾದ ಎಲ್ಲರಿಗೂ ಸಿಗಲಿ ಎಂಬ ಆಶಯ ನಮ್ಮದು ಎಂದು ಹೆಚ್.ವಿಜಯಕುಮಾರ್ ರವರು ಹೇಳಿದರು.

ಎರಡು ದಿನಗಳ ಕಾಲ ಅಣ್ಣಮದೇವಿ ಮಹೋತ್ಸವ ಕಾರ್ಯದಲ್ಲಿ ವಾದ್ಯಗೋಷ್ಟಿ ರಸಸಂಜೆ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಹಾಗೂ ತಮಟೆವಾದ್ಯ,ಡೊಳ್ಳು ಕಂಸಾಳೆ, ವೀರಗಾಸೆ ತಂಡಗಳ ಜೊತೆಯಲ್ಲಿ ಶಿವನಗರ ರಾಜಬೀದಿಗಳಲ್ಲಿ ಶ್ರೀ ಅಣ್ಣಮ್ಮ ದೇವಿಯ ಮೆರವಣಿಗೆ ಸಾಗಲಿದೆ.

Post a Comment

0Comments

Post a Comment (0)