ಸದನದ ಇತರ ಸದಸ್ಯರು ಸಹ ನಿಧನ ಹೊಂದಿದ ಗಣ್ಯರಿಗೆ ಸಂತಾಪ

varthajala
0

ವಿಧಾನ ಪರಿಷತ್ ನೂರ ಐವತ್ತೆರಡನೆಯ ಅಧಿವೇಶನದಲ್ಲಿ  ಇತ್ತೀಚೆಗೆ ನಿಧನರಾದ ಮಾಜಿ ಶಾಸಕರುಗಳಾಗಿದ್ದ ಮಾರುತಿರಾವ್ ಡಿ ಮಾಲೆ ಹಾಗೂ ಎಸ್.ಎ.ಜಿದ್ದಿ, ಹಿರಿಯ ಗಾಂಧಿವಾದಿ ಹಾಗೂ ಸರ್ವೋದಯ ಕಾರ್ಯಕರ್ತೆ ಶ್ರೀಮತಿ ಚನ್ನಮ್ಮ ಹಳ್ಳಿಕೇರಿ, ಜಾನಪದ ವಿದ್ವಾಂಸರಾದ ಡಾ:ಅಮೃತ ಸೋಮೇಶ್ವರ ಹಾಗೂ ಕರಡಿ ಮಜಲು ಕಲಾವಿದರಾದ ಗುರುಲಿಂಗಪ್ಪ ವೀರಸಂಗಪ್ಪ ಕರಡಿ ಅವರುಗಳಿಗೆ ಸಭಾಪತಿಗಳಾದ ಬಸವರಾಜ ಹೊರಟ್ಟಿ ಸಂತಾಪ ಸೂಚನೆಯನ್ನು ಮಂಡಿಸಿದರು. ಸಬಾನಾಯಕರಾದ ಭೋಸರಾಜು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.


ಮಾರುತಿರಾವ್ ಡಿ. ಮಾಲೆ:

ವಿಧಾನ ಪರಿಷತ್ತಿನ ಮಾಜಿ ಶಾಸಕರಾಗಿದ್ದ ಮಾರುತಿರಾವ್ ಡಿ. ಮಾಲೆ ಅವರು ದಿನಾಂಕ:26.12.2023ರಂದು ನಿಧನ ಹೊಂದಿರುತ್ತಾರೆ.

1939ರ ಏಪ್ರಿಲ್, 27ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಘಾಟ್ಟೋರಲ್ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ಬಿ.ಎ. ಹಿಂದಿ ಸಾಹಿತ್ಯ ರತ್ನ ವಿದ್ಯಾರ್ಹತೆ ಹೊಂದಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. ಗುಲ್ಬರ್ಗಾ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ, ಹೈದರಾಬಾದ್ ಕರ್ನಾಟಕ ಎಸ್.ಸಿ/ಎಸ್.ಟಿ. ಯೂನಿಯನ್ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಯೂನಿಯನ್ ಕಾರ್ಯದರ್ಶಿಯಾಗಿ, ರಾಜ್ಯ ಪಟ್ಟಣ ಯೋಜನಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಶ್ರೀ ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ರಾಷ್ಟ್ರ ಏಕೀಕರಣ ಸಂದರ್ಭದಲ್ಲಿ ಏಕೀಕರಣ ವಿರೋಧಿಸಿದ ನಿಜಾಮರ ವಿರುದ್ಧ ಹೋರಾಟ ನಡೆಸಿದ್ದರು. 2000-2006ರ ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗಾದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಶಾಸನ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದ ಶ್ರೀಯುತರು ಅವರ ಪ್ರತಿಮೆಯನ್ನು ಗುಲ್ಬರ್ಗಾದಲ್ಲಿ ಸ್ಥಾಪಿಸಿದರು.
ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ರಾಜಕಾರಣಿ ಹಾಗೂ ಸಮಾಜ ಸೇವಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.

ಎಸ್.ಎ. ಜಿದ್ದಿ:

ವಿಧಾನ ಪರಿಷತ್ತಿನ ಮಾಜಿ ಶಾಸಕರಾಗಿದ್ದ ಎಸ್.ಎ. ಜಿದ್ದಿ ಅವರು ದಿನಾಂಕ:10.02.2024ರಂದು ನಿಧನ ಹೊಂದಿರುತ್ತಾರೆ.

1944ನೇ ಜೂನ್, 06ರಂದು ಬಿಜಾಪುರ ಜಿಲ್ಲೆಯ ಕೋಟ್ಯಾಳದಲ್ಲಿ ಜನಿಸಿದ್ದ ಶ್ರೀಯುತರು ಎಂ.ಎಸ್ಸಿ, ಪದವೀಧರರಾಗಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿದ್ದ ಶ್ರೀಯುತರು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಶಕ್ತಿಯನ್ನು ತುಂಬುವಲ್ಲಿ ಶ್ರಮಿಸಿದ್ದರು. 1994ರಲ್ಲಿ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸೇವೆಯನ್ನು ಸಲ್ಲಿಸಿದ್ದ ಶ್ರೀಯುತರು ಶೈಕ್ಷಣಿಕ ರಂಗದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ವಿಜಯಪುರ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಶಾಲೆ, ಕಾಲೇಜು, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ ಕೀರ್ತಿಗೆ ಭಾಜನರಾಗಿದ್ದರು.

ಇವರ ನಿಧನದಿಂದಾಗಿ ರಾಜ್ಯವು ಹಿರಿಯ ರಾಜಕಾರಣಿ ಹಾಗೂ ಹಿಂದುಳಿದ ವರ್ಗಗಳ ನೇತಾರರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.

ಚನ್ನಮ್ಮ ಹಳ್ಳಿಕೇರಿ:


ಹಿರಿಯ ಗಾಂಧಿವಾದಿ ಹಾಗೂ ಸರ್ವೋದಯ ಕಾರ್ಯಕರ್ತೆಯಾದ ಚನ್ನಮ್ಮ ಹಳ್ಳಿಕೇರಿ ಅವರು ದಿನಾಂಕ:20.12.2023ರಂದು ನಿಧನ ಹೊಂದಿರುತ್ತಾರೆ.

1931ರಲ್ಲಿ ಹಾವೇರಿ ಜಿಲ್ಲೆ, ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಜನಿಸಿದ್ದ ಶ್ರೀಯುತರು ವಿನೋಭಾ ಭಾವೆ ಮತ್ತು ಮಹಾತ್ಮ ಗಾಂಧಿಯವರ ಆದರ್ಶಗಳಿಂದ ಪ್ರಭಾವಿತರಾಗಿದ್ದು, ಭೂದಾನ ಚಳುವಳಿ, ಸರ್ವೋದಯ ವಿಚಾರ ಪ್ರಸಾರ, ಅಸ್ಪೃಶ್ಯತೆ ನಿವಾರಣೆ, ಗ್ರಾಮೀಣ ನೈರ್ಮಲ್ಯ, ಹರಿಜನೋದ್ಧಾರ, ಮಹಿಳಾ ಸಬಲೀಕರಣ ಮುಂತಾದ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಶ್ರೀಯುತರು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇವರ ನಿಧನಿದಿಂದಾಗಿ ರಾಜ್ಯವು ಹಿರಿಯ ಗಾಂಧೀವಾದಿ ಹಾಗೂ ಹೋರಾಟಗಾರ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.

ಡಾ: ಅಮೃತ ಸೋಮೇಶ್ವರ:


ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಅನನ್ಯ ಸಾಧಕರಾಗಿದ್ದ ಡಾ: ಅಮೃತ ಸೋಮೇಶ್ವರ ಅವರು 06.01.2024ರಂದು ನಿಧನ ಹೊಂದಿರುತ್ತಾರೆ.

1935ರ ಸೆಪ್ಟೆಂಬರ್ 27ರಂದು ಮಂಗಳೂರು ಸಮೀಪದ ಕೋಟೆಕಾರು ಗ್ರಾಮದ ಅಡ್ಕ ಎಂಬಲ್ಲಿ ಜನಿಸಿದ್ದ ಶ್ರೀಯುತರು ಕೋಟೇಕಾರಿನ ಸ್ಟೆಲ್ಲಾ ಮೇರೀಸ್ ಕಾನ್ವೆಂಟ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದಿದ್ದರು. ಮಾತೃ ಭಾμÉ ಮಲಾಯಳಂ ಆಗಿದ್ದರೂ ಕನ್ನಡ ಮತ್ತು ತುಳು ಸಾಹಿತ್ಯದಲ್ಲಿ ಕೃಷಿ ಮಾಡಿ, ಆಲೋಷಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ, ಪುತ್ತೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದ ಶ್ರೀಯುತರು ಮಂಗಳೂರು ವಿಶ್ವವಿದ್ಯಾಲಯದ ಆಹ್ವಾನಿತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಕನ್ನಡ ಮತ್ತು ತುಳು ಭಾμÉಯ ಉನ್ನತಿಗಾಗಿ ಸಮರ್ಪಿಸಿಕೊಂಡಿದ್ದರು.
 
ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ 100ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದರು. ತುಳುವಿನಲ್ಲಿ ಕವನ ಸಂಗ್ರಹ, ನಾಟಕ, ಭಕ್ತಿಗೀತೆ, ಭಾವಗೀತೆಗಳನ್ನು ರಚಿಸುವುದರ ಜೊತೆಗೆ ಕನ್ನಡ ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಅಪಾರ ಕೊಡುಗೆಗಳನ್ನು ನೀಡಿದ್ದರು. ಕನ್ನಡ ಸಂಘ, ಯಕ್ಷಗಾನ ಸಂಘಗಳನ್ನು ಆರಂಭಿಸಿ ಭಾμÉಗಳ ಬೆಳವಣಿಗೆಗಾಗಿ ಶ್ರಮಿಸಿದ್ದ ಶ್ರೀಯುತರು ಭಾμÁ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ 30ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಇವರ ನಿಧನದಿಂದಾಗಿ ರಾಜ್ಯವು ಹಿರಿಯ ಸಾಹಿತಿ ಒಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.

 ಗುರುಲಿಂಗಪ್ಪ ವೀರಸಂಗಪ್ಪ ಕರಡಿ:


ಹಿರಿಯ ಜಾನಪದ ಹಾಗೂ ಕರಡಿ ಮಜಲು ಕಲಾವಿದರಾದ ಗುರುಲಿಂಗಪ್ಪ ವೀರಸಂಗಪ್ಪ ಕರಡಿ ಅವರು ದಿನಾಂಕ:09.01.2024 ರಂದು ನಿಧನ ಹೊಂದಿರುತ್ತಾರೆ.

1939ರ ಆಗಸ್ಟ್, 01 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರದಲ್ಲಿ ಜನಿಸಿದ್ದ ಶ್ರೀಯುತರು ಕುಲಕಸುಬಾದ ನೇಕಾರಿಕೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದರು. ಜಾನಪದ ಕಲೆಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು, ಡೊಳ್ಳಿನ ಕಲೆ ಮತ್ತು ಕರಡಿ ಮಜಲು ಕಲಾವಿದರಾಗಿದ್ದ ಇವರು ರಾμÁ್ಟ್ರದ್ಯಂತ ವಿವಿಧ ಸ್ಥಳಗಳಲ್ಲಿ ತಿಂಗಳುಗಟ್ಟಲೆ ಕಾರ್ಯಕ್ರಮ ನೀಡಿದ ಕೀರ್ತಿ ಇವರದ್ದಾಗಿರುತ್ತದೆ. ಅದು ದಶಕಗಳ ಕಾಲ ತಮ್ಮ ಜೀವನವನ್ನು ಕಲಾ ಸೇವೆಗಾಗಿ ಮುಡುಪಾಗಿಟ್ಟಿದ್ದ ಶ್ರೀಯುತರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಇವರ ನಿಧನದಿಂದಾಗಿ ರಾಜ್ಯವು ಹಿರಿಯ ಜಾನಪದ ಹಾಗೂ ಕರಡಿ ಮಜಲು ಕಲಾವಿದರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸುತ್ತಾ, ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆಯನ್ನು ಮೃತ ಗಣ್ಯರ ಕುಟುಂಬ ವರ್ಗದವರಿಗೆ ಕಳುಹಿಸಲಾಗುವುದು ಎಂದು ಸಭಾಪತಿಗಳು ತಿಳಿಸಿದರು.

ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಸಭಾಪತಿಗಳು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸಭೆಯಲ್ಲಿ ಓದಿದರು. ಸಂವಿಧಾನಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುವ ಕುರಿತು ಸದನದ ಸದಸ್ಯರು ದನಿಗೂಡಿಸಿದರು.
ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತರಕರಾಗಿ ಎನ್.ರವಿಕುಮಾರ್ ಹಾಗೂ ಉಪನಾಯಕರಾಗಿ ಸುನಿಲ್ ವಲ್ಯಾಪುರೆ ಅವರು ಆಯ್ಕೆಯಾಗಿದ್ದು, ಸದನದ ಸದಸ್ಯರು ಇವರಿಗೆ ಶುಭವಾಗಲೆಂದು ಹಾರೈಸಿದರು.

Post a Comment

0Comments

Post a Comment (0)