ELGI - ಎಲ್ಜಿ ಭಾರತದಲ್ಲಿ ವ್ಯಾಕ್ಯೂಮ್ ಉತ್ಪನ್ನಗಳನ್ನು ಹೆಚ್ಚಿಸುವ ಮೂಲಕ ಪೋರ್ಟ್ ಫೋಲಿಯೊ ವಿಸ್ತರಣೆ

varthajala
0

ಡಿ.ವಿ.ಪಿ ವ್ಯಾಕ್ಯೂಮ್ ಟೆಕ್ನಾಲಜಿ ಎಸ್.ಪಿ.ಎ ಇಟಲಿಯೊಂದಿಗೆ ಬಹು-ವರ್ಷದ ತಂತ್ರಜ್ಞಾನ ಪರವಾನಗಿ ಒಪ್ಪಂದವನ್ನು ಘೋಷಿಸಿದ ಎಲ್ಜಿ ಭಾರತದಲ್ಲಿ ವ್ಯಾಕ್ಯೂಮ್ ಉತ್ಪನ್ನಗಳನ್ನು ಹೆಚ್ಚಿಸುವ ಮೂಲಕ ಪೋರ್ಟ್ ಫೋಲಿಯೊ ವಿಸ್ತರಣೆ


 

ಭಾರತಫೆಬ್ರವರಿ 19, 2024: ವಿಶ್ವದ ಪ್ರಮುಖ ಏರ್ ಕಂಪ್ರೆಸರ್ ತಯಾರಕರಲ್ಲಿ ಒಂದಾಗಿರುವ ಎಲ್ಜಿ ಈಕ್ವಿಪ್‌ಮೆಂಟ್ಸ್‌ (ಬಿ.ಎಸ್..: 522074 ಎನ್ಎಸ್ಇಎಲ್ಜೀಈಕ್ವೀಪ್ಭಾರತದಲ್ಲಿ ಡಿವಿಪಿ ಸ್ವಾಮ್ಯದ ವ್ಯಾಕ್ಯೂಮ್ ಉತ್ಪನ್ನಗಳನ್ನು ತಯಾರಿಸಲುಜೋಡಿಸಲುಪರೀಕ್ಷಿಸಲು ಮತ್ತು ಮಾರಾಟ ಮಾಡಲು ಇಂದು ಡಿ.ವಿ.ಪಿ ವ್ಯಾಕ್ಯೂಮ್ ಟೆಕ್ನಾಲಜಿ ಎಸ್.ಪಿ.ಎ ಇಟಲಿಯೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. ಈ ಒಪ್ಪಂದದೊಂದಿಗೆಎಲ್ಜಿ ವ್ಯಾಕ್ಯೂಮ್ ಉತ್ಪನ್ನಗಳನ್ನು ತಯಾರಿಸಿ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊ ವಿಸ್ತರಣೆ ಮಾಡಲಿದೆ. ವ್ಯಾಕ್ಯೂಮ್ ಪಂಪ್‌ಗಳ ತಯಾರಕರಾದ ಡಿ.ವಿ.ಪಿ. ವ್ಯಾಕ್ಯೂಮ್ ಟೆಕ್ನಾಲಜಿ ಎಸ್.ಪಿ.ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆ ಪ್ರವೇಶಿಸುವಾಗ ಎಲ್ಜೀಯ ಬಲವಾದ ಉತ್ಪಾದನಾ ಸಾಮರ್ಥ್ಯ ಮತ್ತು ಭಾರತದಲ್ಲಿರುವ ವಿಸ್ತಾರವಾದ ಮಾರಾಟ ಮತ್ತು ಸೇವಾ ಜಾಲದ ಪ್ರಯೋಜನ ಪಡೆಯುತ್ತಾರೆ. ಜಾಗತಿಕ ವ್ಯಾಕ್ಯೂಮ್ ಪಂಪ್ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಲ್ಲಿ ನಿರಂತರ ಬೆಳವಣಿಗೆಯನ್ನು ಕಂಡಿದೆ ಮತ್ತು 2024ರಲ್ಲಿ 6-7 ಬಿಲಿಯನ್ ಯುಎಸ್ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.

 

"ವ್ಯಾಕ್ಯೂಮ್, ಕಂಪ್ರೆಸ್ಡ್ ಏರ್ ನ ಸಮಾನಾರ್ಥಕವಾಗಿದೆ, ಅದರ ಲಾಭದಾಯಕತೆಯನ್ನು ಏರ್ ಕಂಪ್ರೆಸರ್ ಗಳೊಂದಿಗೆ ಹೋಲಿಸಬಹುದಾಗಿದೆ. ಇದು ನಮ್ಮ ಉತ್ಪನ್ನಗಳ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು, ಹೆಚ್ಚಿನ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು  ಮತ್ತು ಅರ್ಥಪೂರ್ಣ ತಾಂತ್ರಿಕ, ಉತ್ಪಾದನೆ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ನಿಯಂತ್ರಿಸಲು ಒಂದು ಉತ್ತಮ ಕ್ರಮವಾಗಿದೆ. ನಾವು ಮೊದಲು ಭಾರತದಲ್ಲಿ ವ್ಯವಹಾರವನ್ನು ಪ್ರಾರಂಭಿಸುತ್ತೇವೆ ಮತ್ತು ನಂತರ ಜಾಗತಿಕವಾಗಿ ವಿಸ್ತರಿಸುತ್ತೇವೆ. ಡಿ.ವಿ.ಪಿ.ಯೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ. ಕುಟುಂಬ-ಮಾಲೀಕತ್ವದ ಕಂಪನಿ ಆಗಿರುವ ವ್ಯಾಕ್ಯೂಮ್ ಟೆಕ್ನಾಲಜಿ, 1973ರಿಂದ ವ್ಯಾಕ್ಯೂಮ್ ಬಿಸಿನೆಸ್ ನಲ್ಲಿದೆ. ಡಿ.ವಿ.ಪಿ ತಂಡವು ನಮ್ಮ ಮೌಲ್ಯಗಳಿಗೆ ಹೊಂದಿಕೊಳ್ಳುತ್ತದೆ ಮತ್ತು ಅವರ ಉತ್ಪನ್ನಗಳು ಕಾರ್ಯಕ್ಷಮತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ" ಎಂದು ಎಲ್ಜಿ ಈಕ್ವಿಪ್‌ಮೆಂಟ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೈರಾಮ್ ವರದರಾಜ್ ಹೇಳಿದ್ದಾರೆ.
ಡಿ.ವಿ.ಪಿ ವ್ಯಾಕ್ಯೂಮ್ ಟೆಕ್ನಾಲಜಿ ಎಸ್.ಪಿ.ಎಯ ಅಧ್ಯಕ್ಷ ಮತ್ತು ಸಿಇಓ ರಾಬರ್ಟೊ ಝುಚಿನಿ,ಈ ಒಪ್ಪಂದವು ಡಿ.ವಿ.ಪಿ ಕಂಪನಿಯು, ಎಲ್ಜಿಯ ಉತ್ಪಾದನಾ ಸೌಲಭ್ಯ ಮತ್ತು ವಿತರಣಾ ಜಾಲವನ್ನು ಬಳಸಿಕೊಂಡು ಸ್ಪರ್ಧಾತ್ಮಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ, ಪರಸ್ಪರ ಕೊಡುಕೊಳ್ಳುವಿಕೆಯ ಅವಕಾಶಗಳಿವೆ ಮತ್ತು ಅದರ ಪರಿಣಾಮವಾಗಿ, ಪರಸ್ಪರ ವ್ಯಾಪಾರ ಅಭಿವೃದ್ಧಿಯನ್ನು ಸಾಧಿಸಲಿದ್ದೇವೆ" ಎಂದು ಹೇಳಿದರು.
60 ವರ್ಷಗಳಿಂದ, ಎಲ್ಜಿಯ ಪ್ರವರ್ತಕ ಉತ್ಪನ್ನಗಳು ಮತ್ತು ಕಂಪ್ರೆಸ್ಡ್ ಏರ್ ಉತ್ಪನ್ನಗಳು 120+ ದೇಶಗಳಲ್ಲಿ ಉತ್ಪಾದನೆ, ಆಹಾರ ಮತ್ತು ಪಾನೀಯ, ನಿರ್ಮಾಣ, ಔಷಧಗಳು ಮತ್ತು ಜವಳಿಗಳಿಂದ ಹಿಡಿದು ಅನೇಕ ಕೈಗಾರಿಕೆಗಳಿಗೆ ವಿವಿಧ ಅಪ್ಲಿಕೇಶನ್‌ಗಳನ್ನು ಒದಗಿಸಿವೆ. 400+ ಉತ್ಪನ್ನಗಳ ಪೋರ್ಟ್‌ಫೋಲಿಯೊವನ್ನು ಹೊಂದಿದ್ದು, ಮೂರು ಖಂಡಗಳಲ್ಲಿ ವ್ಯಾಪಿಸಿರುವ ಎಲ್ಜಿಯ ಅತ್ಯಾಧುನಿಕ ಜಾಗತಿಕ ಉತ್ಪಾದನಾ ಸೌಲಭ್ಯಗಳು ಇಂಗಾಲದ ತಟಸ್ಥತೆ, ನೀರಿನ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಗೆ ಬದ್ಧವಾಗಿವೆ.

Tags

Post a Comment

0Comments

Post a Comment (0)