ರಾಜರಾಜೇಶ್ವರಿ ನಗರದಲ್ಲಿ ವಿದ್ಯಾರ್ಥಿಗಳಿಂದ ಸಂವಿಧಾನ ಜಾಗೃತಿ ಅಭಿಯಾನ

varthajala
0

ಬೆಂಗಳೂರು ಫೆ21: ಸಂವಿಧಾನ ರಚನೆಗೊಂಡು ೭೫ ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಪ್ರಯುಕ್ತ ನಡೆಯುತ್ತಿರುವ "ಸಂವಿಧಾನ ಜಾಗೃತಿ ರಥಯಾತ್ರೆಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಗೋಪಾಲನ್‌ ಆರ್ಕೇಡ್‌ನಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಆಚರಿಸಲಾಯಿತು

 

ಎಲ್ಲಾ ವಿದ್ಯಾರ್ಥಿಗಳು ಒಟ್ಟು ಸೇರಿ ಗೋಪಾಲನ್‌ ಆರ್ಕೇಡ್‌ನಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿದರುಸಂವಿಧಾನದಲ್ಲಿರುವ ನಮ್ಮ ಹಕ್ಕಿನ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಇದಷ್ಟೇ ಅಲ್ಲದೆಸಂವಿಧಾನ ನಮಗೆ ಏನೆಲ್ಲಾ ನೀಡುತ್ತಿದೆ ಎಂಬುದರ ಬಗ್ಗೆಯೂ ಸಹ ಬೀದಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಿದರುಇನ್ನೂ ಕೆಲ ವಿದ್ಯಾರ್ಥಿಗಳು ಇತರೆ ಸಾಂಸ್ಕೃತಿಕ ನೃತ್ಯಕಾರ್ಯಕ್ರಮದ ನಿರೂಪಣೆಮಾಡಿದರು. ಈ ಜಾಗೃತಿ ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿಸಂವಿಧಾನದ ಕುರಿತು ಭಾಷಣ ಮಾಡಿದರು. ಕೊನೆಯದಾಗಿ ಹ್ಯಾಲೊಜೆನ್‌ ಆಕಾಶ ಬುಟ್ಟಿಗಳನ್ನು ಆಕಾಶದಲ್ಲಿ ಹಾರಿ ಬಿಟ್ಟರು. ಒಟ್ಟಾರೆ ನಮ್ಮ ಸಂವಿಧಾನ ನಮಗೆ ಏನೆಲ್ಲಾ ನೀಡಿದೆ ಎಂಬುದರ ಬಗ್ಗೆ ಜನರಿಗೆ ತಿಳಿಸಲು ವೈವಿಧ್ಯವಾಗಿ ಕಾರ್ಯಕ್ರಮ ನಡೆಸಲಾಯಿತು.


ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಯುವ ಉದ್ದೇಶದಿಂದ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ 'ಸಂವಿಧಾನ ಜಾಗೃತಿ ಜಾಥಾ'ದ ಸ್ಥಬ್ಧಚಿತ್ರ ಮೆರವಣಿಗೆ ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರಗಳಿಂದ ಹೊರಡುವ ಈ ಜಾಥವು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಇತರೆ ಕಚೇರಿಗಳಿಗೆ ಭೇಟಿ ನೀಡಿ ಪ್ರತಿ ಜಿಲ್ಲೆಯ ಮೂಲೆ ಮೂಲೆಯಲ್ಲೂ ಸಂಚರಿಸುತ್ತಿದೆ,


ಈಗಾಗಲೇ ಹಾಸನಬೆಳಗಾವಿವಿಜಯಪುರಬೆಂಗಳೂರುಯಾದಗಿರಿತುಮಕೂರುಚಿತ್ರದುರ್ಗಚಿಕ್ಕಮಗಳೂರುವಿಜಯನಗರಚಿಕ್ಕಬಳ್ಳಾಪುರಕಲುಬುರ್ಗಿಶಿವಮೊಗ್ಗಗದಗಧಾರವಾಡಬಳ್ಳಾರಿಮೈಸೂರುಬಾಗಲಕೋಟೆರಾಯಚೂರುಉಡುಪಿಬೀದರ್‌ತುಮಕೂರು ಜಿಲ್ಲೆಗಳಲ್ಲಿ ರಥಯಾತ್ರೆ ಪೂರ್ಣಗೊಂಡಿದೆ.


ಈ ರಥಯಾತ್ರೆ ಸಂದರ್ಭದಲ್ಲಿ ಸಾವಿರಾರು ಜನಸಾಮಾನ್ಯರು ಪಾಲ್ಗೊಂಡುಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಘೊಷಣೆ ಕೂಗುತ್ತಾಯಾತ್ರೆ ಬರುತ್ತಿರುವ ಸ್ಥಳಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿವಿದ್ಯಾರ್ಥಿಗಳು ಸಂವಿಧಾನವನ್ನು ಓದುವ ಮೂಲಕ ಸಂವಿಧಾನವು ನಮಗೆ ನೀಡಿರುವ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಿದರು. ಇನ್ನೂ ಕೆಲವೆಡೆ ರಾಷ್ಟ್ರದ್ವಜದ ತ್ರಿವರ್ಣ ಬಣ್ಣಗಳ ಬಲೂನ್‌ಗಳನ್ನು ಹಾರಿಸಿದರು,

 

ಇನ್ನೂ ಕೆಲವೆಡೆ ಸಂವಿಧಾನ ಪೀಠಿಕೆಯ ಮುದ್ರಿತ ಪ್ರತಿಗಳ ವಿತರಣೆಬಸವಣ್ಣನವರ ಸಂದೇಶ ಹಾಗೂ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ತಜ್ಞರಿಂದ ಭಾಷಣಜಾನಪದ ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತು. ಜಾಥದಲ್ಲಿ ಸಂಚರಿಸಲಿರುವ ಎಲ್‌ಇಡಿ ವಾಹನಗಳ ಮೂಲಕ ವಿಡಿಯೊ ಪ್ರದರ್ಶನ ಮಾಡುವ ಮೂಲಕ ನಮ್ಮ ಪರಂಪರಯನ್ನು ಅನಾವರಣಗೊಳಿಸಗುತ್ತಿದೆ. ಹೀಗೆ ಪ್ರತಿ ಜಿಲ್ಲೆಯಲ್ಲೂ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಭಾರತದ ಪ್ರಜೆಗಳಾದ ನಾವುಸಂವಿಧಾನ ತಿಳಿಯೋಣಸಂವಿಧಾನ ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಜಾಥ ಸಾಗಿತು. ಜಾಥದಲ್ಲಿ ಪ್ರತಿಯೊಬ್ಬರು ಭಾಗಿಯಾದರುಇನ್ನೂ ಫೆ.23 ರವರೆಗೆ ಜಾಥ ಮುಂದುವರೆಯಲಿದೆ


Post a Comment

0Comments

Post a Comment (0)