ಕರ್ನಾಟಕ ವೈಜ್ಞಾನಿಕ ಅಕಾಡೆಮಿ ಸ್ಥಾಪಿಸಿ ... ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ

varthajala
0

ಜನಸಾಮಾನ್ಯರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ತುಂಬಲೂ ಹಾಗೂ ಮೌಢ್ಯಗಳನ್ನು ದೂರಮಾಡುವ ಸಲುವಾಗಿ ಕರ್ನಾಟಕ ವೈಜ್ಞಾನಿಕ ಅಕಾಡೆಮಿ ಸ್ಥಾಪಿಸುವಂತೆ ಸರ್ಕಾರ ಮುಂದಾಗಬೇಕು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಅವರು ಇಲ್ಲಿಗೆ ಸಮೀಪದ ಕೋರಮಂಗಲದ ಎನ್.ಜಿ.ವಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಇವರು ಆಯೋಜಿಸಿದ್ದ ವೈಜ್ಞಾನಿಕ ಬದುಕು ಬೆಸುಗೆ ರಾಜ್ಯಮಟ್ಟದ ಸಾಹಿತಿಗಳು, ಚಿಂತಕರು ಹಾಗೂ ಹೋರಾಟಗಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಆಧುನಿಕತೆ ಬೆಳದಂತೆ ಜನರಲ್ಲಿ ಮೌಢ್ಯಾಚರಣೆ ಹೆಚ್ಚಾಗುತ್ತಿದೆ ಅದರಲ್ಲೂ ವಿದ್ಯಾವಂತರಲ್ಲಿ ಈ ಆಚರಣೆಗಳು ಮನೆಮಾಡಿವೆ. ಇಂತಹ ಆಚರಣೆಗಳಿಂದಾಗಿ ಸಾಮಾನ್ಯ ಜನರು ಹಾಗೂ ಕುಟುಂಬಗಳ ಬದುಕು ಹಾಳಾಗುತ್ತಿವೆ. ಗೊಡ್ಡು ಆಚರಣೆಗಳಾದ ಕಂದಚಾರ, ಮೂಢನಂಭಿಕೆ, ವಾಮಾಚಾರ. ಮಾಟ ಮಂತ್ರ ಹಾಗೂ ಜ್ಯೋತಿಷ್ಯಗಳ ಹೆಸರಿನಲ್ಲಿ ಮನಸ್ಸುಗಳನ್ನು ಹಾಳು ಮಾಡಲಾಗುತ್ತಿದೆ, ಸಮಾಜ ದಿಕ್ಕು ತಪ್ಪುತ್ತಿದೆ ಇಂತಹ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದರಿಂದ ಅನೇಕ ಕುಟುಂಬಗಳು ತಮ್ಮ ಬದುಕನ್ನು ನಾಶಮಾಡಿಕೊಳ್ಳುತ್ತಿರುವುದು ವಿಷಾದನಿಯ ಸಂಗತಿಯಾಗಿದೆ. ಜನರು ಇಂತಹ ಮೌಢ್ಯಚಾರಣೆಗಳಿಂದ ದೂರವಾಗಬೇಕಾಗಿದೆ. ಹಿಂದೆ ಸಿದ್ದರಾಮಯ್ಯನವರು ಮೌಢ್ಯವಿರೋಧಿ ಕಾನೂನನ್ನು ಜಾರಿಗೆ ತಂದಿದ್ದರು ಆದರೆ ಅವುಗಳನ್ನು ಜಾರಿಗೆ ಮಾಡಲಾಗಲಿಲ್ಲ ಹಾಗಾಗಿ ಈ ಸಂದರ್ಭದಲ್ಲಿ ಕರ್ನಾಟಕ ವೈಜ್ಞಾನಿಕ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಇಂತಹ ಅನಿಷ್ಠ ಪದ್ದತಿಗಳನ್ನು ದೂರಮಾಡುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಬೇಕು ಅದಕ್ಕೆ ಕ್ರಿಯಾಶೀಲವಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸುವ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತಾಗಲಿ. ಇದು ಅತ್ಯಂತ ತುರ್ತು ಕಾರ್ಯ ಆಗಬೇಕಾಗಿದೆ. 


ಉತ್ತಮ ಸಮಾಜ ನಿರ್ಮಾಣಕ್ಕೆ ವೈಜ್ಞಾನಿಕ ಚಿಂತನೆಗಳು ಬೇಕಾಗಿದೆ ಇಂತಹ ಅಂಶಗಳನ್ನು ಮನೆ ಮನಗಳಿಗೆ ತಲುಪಿಸುವಂತಹ ಕೆಲಸ ಆಗಬೇಕಾಗಿದೆ.ಇಂತಹ ಕಾರ್ಯವನ್ನು ಹುಲಿಕಲ್ ನಟರಾಜ್ ಕಳೆದ ಅನೇಕ ದಶಕಗಳಿಂದ ನಡೆಸುತ್ತ ಬಂದಿರುವುದು ಅಭಿನಂದನಿಯವಾಗಿದೆ ಇಂದು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯಾಧ್ಯಾಂತ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದ ಮೂಲೆ ಮೂಲೆಗಳಲ್ಲಿ ವೈಜ್ಞಾನಿಕ ಚಿಂತನೆಗಳ ಚಟುವಟಿಕೆಗಳು ನಡೆಸಲಾಗುತ್ತಿದೆ ಈ ಸಂಸ್ಥೆಗೆ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸದಸ್ಯರಾಗಿರುವುದು ಆಶಾದಾಯಕವಾಗಿದೆ. ಪ್ರಸ್ತುತ ಸಿದ್ದರಾಮಯ್ಯನವರ ಸರ್ಕಾರ ಈ ಬಗ್ಗೆ ವಿಶೇಷವಾದ ಗಮನ ಹರಿಸಿ ಶಿಘ್ರವಾಗಿ ವೈಜ್ಞಾನಿಕ ಅಕಾಡೆಮಿ ಸ್ಥಾಪಿಸುವಂತೆ ಒತ್ತಾಯಿಸಿದರು.

ಖ್ಯಾತ ಮನೋವಿಜ್ಞಾನಿ ಡಾ.ಶ್ರೀಧರ ಮಾತನಾಡಿ ಆಧುನಿಕತೆಯ ಇಂದಿನ ದಿನಗಳಲ್ಲಿ ಮನಸ್ಸುಗಳು ಕಲುಷಿತವಾಗುತ್ತಿವೆ ಅದಕ್ಕೆ ನಾವೆ ಕಾರಣವಾಗಿದ್ದೇವೆ. ಅನಾಧಿಯಿಂದ ಬಂದAತಹ ಪರಿಸರ ಪ್ರಿಯವಾದ ಬದುಕನ್ನು ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ಈ ಎಲ್ಲಾ ಅಯೋಮಯಗಳಿಗೆ ನಮ್ಮ ಮನಸ್ಸುಗಳೆ ಕಾರಣವಾಗಿವೆ. ಆಧುನಿಕತೆಯ ಧಾವಂತದಲ್ಲಿ ನಾವು ನಮ್ಮ ಸುಂದರವಾದ ಬದುಕನ್ನು ದುರಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಆ ನಿಟ್ಟಿನಲ್ಲಿ ನಾವು ಮೊದಲು ಮನಸ್ಸುಗಳನ್ನು ಶುದ್ಧಮಾಡಿಕೊಳ್ಳಬೇಕಾಗಿದೆ. ಭಾವುಕತೆಯಿಂದ ದೂರವಾದಲ್ಲಿ ಮಾತ್ರ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲೂ ನಾವು ನಮ್ಮ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲರಾದ ಸ್ಥಿತಿಗೆ ತೆಗೆದುಕೊಂಡು ಹೋಗಿದ್ದೇವೆ ಹಾಗಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ವೈಜ್ಞಾನಿಕ ಬೀಜಗಳನ್ನು ಬಿತ್ತುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ನಿರಂತರವಾಗಿ ಶ್ರಮಿಸಬೇಕಾಗಿದೆ ಎಂದರು.

ಖ್ಯಾತ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ ಮೌಢ್ಯಗಳಿಂದ ಸಮಾಜ,ಮನಸ್ಸುಗಳು ಹಾಳಾಗಿವೆ ಅಂತಹ ಆಚರಣೆಗಳಿಂದ ದೂರವಾದಲ್ಲಿ ಮಾತ್ರ ಸಮಾಜ ಸುಧಾರಿಸಲು ಸಾಧ್ಯವಾಗುತ್ತದೆ. ಎಲ್ಲಾರನ್ನೂ ಪ್ರೀತಿಯಿಂದ ಕಾಣುವ ಮನಸ್ಸುಗಳು ಬೇಕಾಗಿದೆ ಬಸವಣ್ಣನವರು ಹೇಳಿದಂತೆ ಇವನಾರವ ಎನ್ನುವದಕ್ಕಿಂತ ಇವ ನಮ್ಮವ ಎಂದರೆ ಸಾಕು ಇದರಿಂದ ಉತ್ತಮ ಸಮಾಜ ಕಾಣಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೈಜ್ಞಾನಿಕ ಚಿಂತಕ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಮಾತನಾಡಿ ನಾವು ಯಾರ ವಿರೋಧಿಗಳು ಅಲ್ಲ, ಮೂಢನಂಬಿಕೆಗಳನ್ನು ದೂರ ಮಾಡಿ ಮೂಲ ನಂಭಿಕೆಗಳನ್ನು ಹತ್ತಿರವಾಗಿಸಿಕೊಳ್ಳೋಣ. ಮೌಢ್ಯಗಳ ಹೆಸರಿನಲ್ಲಿ ಮನಸ್ಸುಗಳು ಛಿದ್ರವಾಗುತ್ತಿವೆ ಇದರಿಂದ ಸಾಮಾಜಿಕ ಸ್ಥಿತಿ ದುಸ್ತರವಾಗುತ್ತಿದೆ ಹಾಗಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ದುಡಿಯೊಣ ನಾವು ಯಾರನ್ನೂ ವಿರೋಧಿಸುವುದಿಲ್ಲ ಮನಸ್ಸು ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಮಾಡುತ್ತೇವೆ. ಕಂದಚಾರದ ಹೆಸರಿನಲ್ಲಿ ಕಂದಕ ಸೃಷ್ಠಿಸುವವರ ವಿರುದ್ಧ ಹೋರಾಡುತ್ತೇವೆ ಇದೆ ನಮ್ಮ ದ್ಯೇಯವಾಗಿದೆ. ಮೌಢ್ಯದ ಹೆಸರಿನಲ್ಲ ಮುಗ್ಧ ಮಕ್ಕಳ ಮನಸ್ಸುಗಳನ್ನು ಹಾಳು ಮಾಡಲಾಗುತ್ತಿದೆ ಇಂತಹ ವಿಷಮ ಸ್ಥಿತಿಯಿಂದ ಹೊರ ತರುವ ಕೆಲಸ ಮಾಡಬೇಕಾಗಿದೆ ಎಂದರು.

ಪ್ರಗತಿಪರ ಚಿಂತಕ ನೂರು ಶ್ರೀಧರ್ ಮಾತನಾಡಿ ಸಮತೆ, ಮಮತೆ ಹಾಗೂ ವೈಜ್ಞಾನಿಕತೆಯನ್ನು ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಆಗಬೇಕು ಎಂದರು.

ಪ್ರಮುಖರಾದ ಸಿರಿಮನೆ ನಾಗರಾಜ್, ಡಾ.ಜಯಲಕ್ಷಿö್ಮÃ ಪಾಟೀಲ್, ಕೆ.ಷರೀಪಾ, ಡಾ.ಶಾಜಿಯ ಅಂಜುA, ಷಕೀರಾಭಾನು, ಡಾ.ಆನಂದಕುಲರ್ಣಿ, ರಾಜೇಂದ್ರ ಹಂಪಿಕೆರೆ, ಡಾ.ರಾಜಶೇಖರಪ್ಪ, ಗೀತಾ, ಅರಕಲಗೋಡು ಮಧುಸೂದನ್, ಕೆ.ಮಾಯಿಗೌಡ, ಡಾ.ಸಂಗಮೇಶ್ ತಮ್ಮನ ಗೌಡ, ಮೋಹನ್ ಜನಚಿಂತನ, ಡಾ.ಆಂಜನಪ್ಪ, ಡಾ.ಶಿವಕುಮಾರ್ ಮಾಲಿಪಾಟೀಲ್, ಪಳಿನಿಸ್ವಾಮಿ, ಹಾದಿಮನಿ,ಚಿಕ್ಕ ಹನುಮಂತೇಗೌಡ, ಸುರೇಶ್ ಚಿಕ್ಕಮಗಳೂರು, ಮಹಾದೇವ್ ಕೊಳ್ಳೆಗಾಲ, ಡಾ.ಮಂಜುನಾಥ ಬಾರಕೇರ, ರೇಣುಕಾ ಪ್ರಸಾದ್, ಶಿವಲಿಂಗಯ್ಯ ಮಂಡ್ಯ, ಮಲ್ಲಿಕಾರ್ಜುನ ಹಾಸನ, ಮುನಿಕೆಂಪಣ್ಣ,ಬಾಬಾ ಸಾಹೇಬ್ ಜಿನರಾಳಕರ್, ಶರತ್ ಹುಲಕಲ್, ಸಿದ್ದಲಿಂಗಮ್ಮ, ಕೃಷ್ಣ ತಿಪಟೂರು, ಮೊದಲಾದವರು ಉಪಸ್ಥಿತರಿದ್ದರು ವಿ.ಟಿ.ಸ್ವಾಮಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಸ್ಟೀಸ್ ನಾಗಮೋಹನ್ ದಾಸ್, ವಿಜ್ಞಾನಿ ಡಾ.ಎ.ಎಸ್.ಕಿರಣ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಹಾಗೂ ಡಾ.ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ನಡೆಸುತ್ತ ಬಂದಿರುವ ಸಂಸ್ಥೆಯು ಈಗಾಗಲೇ ರಾಜ್ಯದ ಉದ್ದಗಲಕ್ಕೂ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ, ಪ್ರತಿ ವರ್ಷ ಕುವೆಂಪು ಜನ್ಮದಿದಂದು ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ, ಮೇ 1ರಂದು ಕಾಯಕ ದಿನಾಚರಣೆ, ಅಕ್ಟೋಬರ್‌ನಲ್ಲಿ ನಾಯಕತ್ವ ಶಿಬಿರ, ಪ್ರತಿ ತಿಂಗಳು ಅಮೃತಾ ಅಮವಾಸೆ ಕಾರ್ಯಕ್ರಮ, ತಿಂಗಳ ಕಾರ್ಯಕ್ರಮಗಳನ್ನು ನಡಸುತ್ತ ಬಂದಿದ್ದು ಈ ಸಂಸ್ಥೆಯು ರಾಜ್ಯದ ಎಲ್ಲಾ ಜಿಲ್ಲೆ ತಾಲ್ಲೂಕು ಹಂತದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಸದಸ್ಯತ್ವವನ್ನು ಹೊಂದಿದೆ.

ವೈಜ್ಞಾನಿಕ-ಬದುಕು-ಬೆಸುಗೆ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ನಡೆಸಲಾಗುವುದು ಇದು ಜನರಲಿ ಸಮತೆ-ಮಮತೆ-ವೈಜ್ಞಾನಿಕತೆಯನ್ನು ಮೂಡಿಸುವ ಪ್ರಮುಖವಾದ ಉದ್ದೇಶವಾಗಿದ್ದು ಅದರಲ್ಲೂ ಮಕ್ಕಳಿಗೆ ಹೆಚ್ಚಿನದಾಗಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವುದಾಗಿದೆ. ಮೊದಲ ಹಂತದಲ್ಲಿ ರಾಜ್ಯಮಟ್ಟದಲ್ಲಿ ನೂರು ಜನರಿಗೆ ತರಬೇತಿಯನ್ನು ನಂತರ ನಾಲ್ಕು ವಿಭಾಗ ಮಟ್ಟದಲ್ಲಿ ನೂರು ಜನರಂತೆ ನಾಲ್ಕುನೂರು ಜನರಿಗೆ ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು ನಂತರ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಅಧಿಕಾರಿಗಳಿಗೆ ಪ್ರಮುಖವಾದ ಸಂಘಟನೆಗಳಿಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ನಂತರ ಆಯ್ದ ಶಿಕ್ಷಕರಿಗೆ, ಸ್ವಯಂ ಸೇವಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಜನ ಸಾಮಾನ್ಯರ ಸಂಪರ್ಕದಲ್ಲಿರುವವರಿಗೆ ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು ಅವರು ತಮ್ಮ ತಳ ಹಂತದಲ್ಲಿ ಜನರಲ್ಲಿ ಉಪನ್ಯಾಸ, ರಂಗರೂಪಕ, ನಾಟಕ, ಸಾಂಸ್ಕೃತಿಕ, ಸಂಗೀತ, ಮೊದಲಾದ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ವೈಜ್ಞಾನಿಕ ವಿಚಾರಗಳನ್ನು ಪ್ರಚುರಪಡಿಸಲಾಗುವುದು ಇದು ಒಂದು ವರ್ಷದ ಯೋಜನೆಯಾಗಿದ್ದು ರಾಜ್ಯದ ಎಲ್ಲಾ ಕಡೆಯಲ್ಲೂ ಈ ಕಾರ್ಯಕ್ರಮ ಆಯೋಜನೆಯಾಗಲಿದೆ.

Post a Comment

0Comments

Post a Comment (0)