ಸ್ವರತತ್ವ ಸಂಗೀತೋತ್ಸವ ಯಶಸ್ವಿ

varthajala
0

ಬೆಂಗಳೂರು :-ಕಲಾ ಸಂಗಮ ಕಲೆ ಮತ್ತು ಸಂಸ್ಕೃತಿ ಪರಿಷತ್ ಯಲಹಂಕದ ಆರ್ ಟಿ ಓ ಮೈದಾನದಲ್ಲಿ ಆಯೋಜಿಸಿದ್ದ ಸ್ವರತತ್ವ ಸಂಗೀತೋತ್ಸವ ಯಶಸ್ವಿಯಾಗಿ ನಡೆಯಿತು,

ಕಾರ್ಯಕ್ರಮದಲ್ಲಿ ಪ್ರಸಿದ್ದ ಕಥೆಗಾರ ಕಲ್ಲಪ್ಪ,ಗಾಯಕಿ ಹಾಗು ಶಿಕ್ಷಕಿ ಪ್ರಭಾ ಇನಾoಧರ್,ಜನಪದ ಗಾಯಕ ಕುಣಿಗಲ್ ರಾಮಚಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.






ಮುಖ್ಯಅಥಿತಿಗಳಾಗಿ ವಚನ ಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ,ಹಿರಿಯ ಪತ್ರಕರ್ತ ಎನ್. ಎಸ್.ಸುಧೀಂದ್ರ ರಾವ್.ದೂರದರ್ಶನ ಚಂದನ ವಾಹಿನಿಯ ಉಪ ನಿರ್ದೇಶಕ ಕೆ.ಸತೀಶ್, ಸಮಾಜ ಸೇವಕ ಹಾಗೂ ನಿರ್ಮಾಪಕ ಎಂ. ಎನ್.ನಾಗರಾಜ್,ಕೆಂಗೇರಿ ರೋಟರಿ ಅಧ್ಯಕ್ಷ ರವಿ ಇಗ್ಗಲೂರು, ನಿರ್ಮಲ ಶಾಸ್ತ್ರೀ, ವೆಂಕಟೇಶ್ ಸಾಗರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ದಾಸರ ಪದಗಳನ್ನು ಸಂತವಾಣಿ ಸುಧಾಕರ್, ಭಕ್ತಿಸಂಗೀತವನ್ನು ಗಾನಸಿರಿ ತಂಡದವರು, ಜನಪದ ಗಾಯನವನ್ನು ಭೀಮನ ಗೌಡ ತಂಡದವರು, ಭಾವಗೀತೆಯನ್ನು ಕವನ ಮತ್ತು ತಂಡ, ಸುಗಮ ಸಂಗೀತ ವನ್ನು ಸವಿಗಾನ ಮಂಜು ಮತ್ತು ತಂಡದವರು, ಭರತನಾಟ್ಯ ವನ್ನು ನವ್ಯ ಭರತನಾಟ್ಯ ಸಂಗಮದ ತಂಡದವರು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮವನ್ನು ಕಿರಣ್ ಮತ್ತು ಪುಣ್ಯಶ್ ಕುಮಾರ ಆಯೋಜಿಸಿದ್ದರು.

Post a Comment

0Comments

Post a Comment (0)