ಬೆಂಗಳೂರು | ಫೆಬ್ರವರಿ 29, 2024: ಇಂದಿನ ಡಿಜಿಟಲ್ ಯುಗದಲ್ಲಿ ತಪ್ಪು ಮಾಹಿತಿಯ ವಿರುದ್ಧ ಹೋರಾಡುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೆಟಾ 'ನಿಜವಾದದ್ದನ್ನು ತಿಳಿಯಿರಿ' (‘Know What’s Real’) ಎಂಬ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಡಿಜಿಟಲ್ ಜಗತ್ತಿನಲ್ಲಿನ ಉತ್ತಮ ಅಭ್ಯಾಸಗಳನ್ನು ಪ್ರಚಾರ ಮಾಡುತ್ತದೆ ಮತ್ತು ಲಭ್ಯವಿರುವ ಸುರಕ್ಷತಾ ಸಾಧನಗಳ ಕುರಿತು ತಿಳಿಸುತ್ತದೆ. ವಾಟ್ಸಪ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ತಪ್ಪು ಮಾಹಿತಿಯನ್ನು ಗುರುತಿಸುವ ಮತ್ತು ಪರಿಹರಿಸುವ ಕುರಿತು ಬಳಕೆದಾರರಿಗೆ ಶಿಕ್ಷಣ ನೀಡಲಿದೆ.
8 ವಾರಗಳ ಅವಧಿಯ ಈ ಅಭಿಯಾನವು ವಾಟ್ಸಪ್ ನಲ್ಲಿರುವ ಬ್ಲಾಕ್, ರಿಪೋರ್ಟ್, ಫಾರ್ವರ್ಡ್ ಲೇಬಲ್ ನಂತಹ ಫೀಚರ್ ಮತ್ತು ಸುರಕ್ಷತಾ ಕ್ರಮಗಳ ಪ್ರಾಮುಖ್ಯತೆ ತಿಳಿಸುತ್ತದೆ. ಅದರೊಂದಿಗೆ ತಪ್ಪು ಮಾಹಿತಿಯನ್ನು ಗುರುತಿಸಲು ಮತ್ತು ಅದನ್ನು ಫಾರ್ವರ್ಡ್ ಮಾಡುವುದನ್ನು ತಡೆಗಟ್ಟಲು ಪ್ರೋತ್ಸಾಹಿಸುತ್ತದೆ. ವಾಟ್ಸಪ್ ಚಾನಲ್ ಗಳಲ್ಲಿ ಫ್ಯಾಕ್ಟ್ ಚೆಕಿಂಗ್ ಸಂಸ್ಥೆಗಳ ಮೂಲಕ ಬಂದಿರುವ ಅನುಮಾನಾಸ್ಪದ ಮಾಹಿತಿಯನ್ನು ಪರಿಶೀಲನೆ ಮಾಡಲು ಉತ್ತೇಜಿಸುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿಯನ್ನು ಪರಿಶೀಲಿಸಲು ಮೆಟಾ ಫ್ಯಾಕ್ಟ್ ಚೆಕರ್‌ಗಳ ದೃಢವಾದ ನೆಟ್‌ವರ್ಕ್ ಕಾರ್ಯನಿರತವಾಗಿದೆ. ಡೀಪ್‌ಫೇಕ್‌ಗಳಂತಹ ತಪ್ಪುಗಳು ಕಂಡುಬಂದರೆ, ಅದು ಸರಿಯಲ್ಲ ಎಂದು ಜನರಿಗೆ ತಿಳಿಸಲು ಅವರು ಆಪ್ ನಲ್ಲಿ ಎಚ್ಚರಿಕೆ ಲೇಬಲ್‌ಗಳನ್ನು ಹಾಕುತ್ತಾರೆ. ನಮ್ಮ ಫ್ಯಾಕ್ಟ್ ಚೆಕರ್ ಗಳು "ಫಾಲ್ಸ್(ಸುಳ್ಳು)" ಎಂದು ಲೇಬಲ್ ಮಾಡಿದ ವಿಷಯದ ತಲುಪುವಿಕೆಯ ವ್ಯಾಪ್ತಿಯನ್ನು ನಾವು ಕಡಿಮೆಗೊಳಿಸುತ್ತೇವೆ. ಕೇವಲ ಕೆಲವೇ ಜನರು ಮಾತ್ರ ಅದನ್ನು ನೋಡಬಹುದಾಗಿದೆ. ಅಭಿಯಾನದ ಮೂಲಕ, ಮೆಟಾ ಯಾವುದೇ ಅನಧಿಕೃತ ವಿಷಯವನ್ನು ಫಾರ್ವರ್ಡ್ ಮಾಡದಂತೆ ಅಥವಾ ಹಂಚಿಕೊಳ್ಳದಂತೆ ಜನರನ್ನು ಪ್ರೋತ್ಸಾಹಿಸುತ್ತದೆ ಮತ್ತು ಅದರ ಬದಲಿಗೆ ಮಾಹಿತಿಯನ್ನು ಪರಿಶೀಲಿಸಲು ಕುಂದುಕೊರತೆ ಅಧಿಕಾರಿ(ಗ್ರೀವನ್ಸ್ ಆಫೀಸರ್) ಅಥವಾ ಯಾವುದೇ ಸ್ವತಂತ್ರ ಫ್ಯಾಕ್ಟ್ ಚೆಕ್ ಪಾಲುದಾರರಿಗೆ ರಿಪೋರ್ಟ್ ಮಾಡಲು ತಿಳಿಸುತ್ತದೆ.
ಭಾರತದಲ್ಲಿನ ಮೆಟಾದ ಸತ್ಯ-ಪರಿಶೀಲನಾ(ಫ್ಯಾಕ್ಟ್ ಚೆಕಿಂಗ್) ಕಾರ್ಯಕ್ರಮವು 11 ಸ್ವತಂತ್ರ ಸತ್ಯ-ಪರಿಶೀಲನಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಇದು ಜಾಗತಿಕವಾಗಿಯೇ ಸತ್ಯ-ಪರಿಶೀಲಿಸುವ ಪಾಲುದಾರರ ಅತಿದೊಡ್ಡ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ಈ ಪಾಲುದಾರರು ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ 15 ಭಾರತೀಯ ಭಾಷೆಗಳಲ್ಲಿ ವಿಷಯವನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ತಂಡ ಜನರು ತಪ್ಪು ಗುರುತಿಸಲು, ವಿಮರ್ಶಿಸಲು, ಮಾಹಿತಿಯನ್ನು ಪರಿಶೀಲಿಸಲು ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಅಭಿಯಾನದ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಮೆಟಾ ಇಂಡಿಯಾದ ಪಬ್ಲಿಕ್ ಪಾಲಿಸಿ ನಿರ್ದೇಶಕ ಶಿವನಾಥ್ ತುಕ್ರಾಲ್, “ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಮೆಟಾ ಬದ್ಧವಾಗಿದೆ. ಸುಳ್ಳು ಮಾಹಿತಿಗಳನ್ನು ತೊಡೆದುಹಾಕಲು ಮತ್ತು ಎಐ-ರಚಿತ ಸುಳ್ಳು ಮಾಹಿತಿಯನ್ನು ನಿಗ್ರಹಿಸಲು ಎಂಸಿಎ ಸಹಯೋಗದೊಂದಿಗೆ ವಾಟ್ಸಪ್ ಟಿಪ್‌ಲೈನ್ ಅನ್ನು ಪ್ರಾರಂಭಿಸಿರುವುದು ಸೇರಿದಂತೆ ನಾಗರಿಕರು ವಿಶ್ವಾಸಾರ್ಹ ಮಾಹಿತಿಯನ್ನು ಮಾತ್ರ ಪಡೆಯಲು ಸಹಾಯ ಮಾಡುವ ಸ್ವತಂತ್ರ ಸತ್ಯ-ಪರೀಕ್ಷಕರ ದೃಢವಾದ ನೆಟ್‌ವರ್ಕ್ ಅನ್ನು ಹೊಂದಿದ್ದೇವೆ. ಅಭಿಯಾನವು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟಲು ನಾವು ಮಾಡುತ್ತಿರುವ ಪ್ರಯತ್ನಗಳ ವಿಸ್ತರಣೆಯಾಗಿದೆ. ಜನರು ಈ ವಿಚಾರವನ್ನು ಹೇಗೆ ಎದುರಿಸಬಹುದು, ಅವರು ಯಾವ ಪಾತ್ರ ನಿರ್ವಹಿಸಬಹುದು ಎಂಬುದರ ಕುರಿತು ಶಿಕ್ಷಣ ನೀಡುವ ಸರಳ ಸುರಕ್ಷತಾ ಮಾರ್ಗದರ್ಶಿಯಾಗಿ ಈ ಅಭಿಯಾನ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು.