- ಇಸ್ರೋದ ಚಂದ್ರಯಾನ ಯಶಸ್ಸಿನ ನಂತರ ಬಾಹ್ಯಾಕಾಶ ಶಿಕ್ಷಣಕ್ಕೆ ಹೆಚ್ಚಿದ ಬೇಡಿಕೆ

varthajala
0

 

ಬೆಂಗಳೂರು, 30; ಚಂದ್ರಯಾನ ಯಶಸ್ಸಿನ ನಂತರ ಇದೀಗ ಬಾಹ್ಯಾಕಾಶ ಶಿಕ್ಷಣಕ್ಕೆ ವ್ಯಾಪಕ ಬೇಡಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಸಂಚಾರಿ ತಾರಾಲಯ ಕಾರ್ಯಕ್ರಮವನ್ನು ಮತ್ತಷ್ಟು  ವಿಸ್ತರಿಸಲು ತಾರೇ ಜಮೀನ್ ಪರ್ ಎಂಬ ಹೆಸರಿನ ವರ್ಣಾಜ್ ಟೆಕ್ನಾಲಜೀಸ್ ಸಂಸ್ಥೆಗೆ ಅವಕಾಶ ಕಲ್ಪಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ಅವರಿಗೆ ವರ್ಣಾಜ್ ಟೆಕ್ನಾಲಜೀಸ್ ಸಂಸ್ಥೆ ಮನವಿ ಮಾಡಿದೆ. 

ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ಪೂರಕವಾಗಿ ಸಂಚಾರಿ ತಾರಾಲಯ ಕಾರ್ಯಕ್ರಮದ ಸಾಮರ್ಥ್ಯ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸಂಚಾರಿ ತಾರಾಲಯ ಮುನ್ನೆಡೆಸುತ್ತಿರುವ ವರ್ಣಾಜ್ ಟೆಕ್ನಾಲಜೀಸ್ ಸಂಸ್ಥೆ ಈ ಕುರಿತು ಸಮಗ್ರವಾದ ಪ್ರಸ್ತಾವನೆ ಸಲ್ಲಿಸಿದೆ. ತಾರೇ ಜಮೀನ್ ಪರ್ ಸಂಸ್ಥೆ ಈವರೆಗೆ 8,000 ಶಾಲೆಗಳಿಗೆ ತೆರಳಿ 17 ಲಕ್ಷ ಮಕ್ಕಳಿಗೆ ಖಗೋಳಶಾಸ್ತ್ರದ  ಬಗ್ಗೆ ಶಿಕ್ಷಣ ನೀಡಿದೆ. ಮಹಾನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಕುರಿತಾದ ಶಿಕ್ಷಣ ದೊರೆಯುತ್ತಿದ್ದುಇದನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ತಲುಪಿಸುವುದು ಅತ್ಯಂತ ಅಗತ್ಯವಾಗಿದೆ. ಸಂಚಾರಿ ತಾರಾಲಯವನ್ನು ನಮ್ಮ ಸಂಸ್ಥೆಯೇ ಸಿದ್ಧಪಡಿಸಲಿದ್ದುತಾರಾಲಯದ ಕಾರ್ಯಾಚರಣೆಗೆ ತಗಲುವ ಖರ್ಚು ವೆಚ್ಚಗಳನ್ನು ಮಾತ್ರ ಸರ್ಕಾರ ಭರಿಸಬೇಕು ಎಂದು ತಮ್ಮ ಪ್ರಸ್ತಾವನೆ ಯಲ್ಲಿ ಹೇಳಿದೆ.

 

ಪ್ರಸ್ತಾವನೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ವರ್ಣಾಜ್ ಟೆಕ್ನಾಲಜೀಸ್ ಸಂಸ್ಥೆಯ  ಸಿಇಒ ಮತ್ತು ಸಂಸ್ಥಾಪಕರಾದ ದಿನೇಶ ಬಾಡಗಂಡಿಸಚಿವರಾದ ಎನ್.ಎಸ್. ಬೋಸರಾಜ್ ಅವರು ಕಾರ್ಯಕ್ರಮದ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದುಈ ಕುರಿತು ಸಾಧಕ - ಬಾಧಕ ಪರಿಶೀಲಿಸಿ ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಚಂದ್ರಯಾನ ಯಶಸ್ಸಿನ ನಂತರ ಹೆಚ್ಚಿನ ಪ್ರಮಾಣದಲ್ಲಿ ಯುವ ಸಮೂಹ ಬಾಹ್ಯಾಕಾಶ ಶಿಕ್ಷಣದತ್ತ ಒಲವು ತೋರುತ್ತಿದೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಐದು ವರ್ಷಗಳ ಕಾಲ ಸಂಚಾರಿ ತಾರಾಲಯ ಕಾರ್ಯಕ್ರಮಕ್ಕೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೋರಲಾಗಿದೆ ಎಂದರು. 


 

 

ವರ್ಣಾಜ್ ಟೆಕ್ನಾಲಜೀಸ್ ಸಂಸ್ಥೆಯ ತಾರೇ ಜಮೀನ್ ಪರ್ ಸಂಚಾರಿ ತಾರಾಲಯ ಕಾರ್ಯಕ್ರಮ ಇಸ್ರೋದ ಅಧಿಕೃತ ಬೋಧಕರ ಪಟ್ಟಿಗೆ ಸೇರ್ಪಡೆಯಾಗಿದ್ದುಇಸ್ರೋ ಸಹಭಾಗಿತ್ವದಡಿ ಎಲ್ಲೆಡೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾಸಾ ಕೂಡ ಸಂಚಾರಿ ತಾರಾಲಯ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದೆ. ಇಡೀ ದೇಶದಲ್ಲಿಯೇ ಅತ್ಯಂತ ವಿನೂತನ ಕಾರ್ಯಕ್ರಮ ಇದಾಗಿದ್ದುಸರ್ಕಾರಿ ಶಾಲೆಯ ಅಂಗಳದಲ್ಲಿಯೇ ಟೆಂಟ್ ಒಳಗೆ ತಾರಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ತಾರಾಲಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಒಂದು ಬಾರಿಗೆ 50 ಮಕ್ಕಳು ಸಂಚಾರಿ ತಾರಾಲಯಲಯದಲ್ಲಿ ಕೂರಲು ಅವಕಾಶವಿದ್ದುಮಕ್ಕಳು ಚಂದ್ರನಲ್ಲಿ ಇಳಿಯುವ ಅನುಭವ ಪಡೆಯಬಹುದಾಗಿದೆ. ಈ ಕಾರ್ಯಕ್ರಮವನ್ನು ಗೇಮಿಂಗ್ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

 

ವಿದ್ಯಾರ್ಥಿಗಳು ಸ್ವತಃ ಅನುಭವಿಸಿ ಶಿಕ್ಷಣ ಕಲಿಯಲು ಇದು ಸಹಕಾರಿಯಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಾರಾಲಯ ಕುರಿತು ರಸಪ್ರಶ್ನೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗುತ್ತಿದೆ. ಧೂಮಕೇತು ಮತ್ತಿತರೆ ವಿಜ್ಞಾನ ವಿಷಯಗಳ ಬಗ್ಗೆ ಚಲನಚಿತ್ರ ಕೂಡ ಪ್ರದರ್ಶಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 

ರಾಜ್ಯದ 11 ಜಿಲ್ಲೆಗಳಲ್ಲಿ ತಾರಾಲಯದ ವ್ಯವಸ್ಥೆ ಇದ್ದುಉಳಿದ 20 ಜಿಲ್ಲೆಗಳಿಗೆ ಈ ಕಾರ್ಯಕ್ರಮ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ತಲಾ ಒಂದೊಂದು ಸಂಚಾರಿ ತಾರಾಲಯವನ್ನು ನಮ್ಮ ಸಂಸ್ಥೆಯೇ ನಿರ್ಮಾಣ ಮಾಡಲಿದೆ. ಸರ್ಕಾರ ಕಾರ್ಯಾಚರಣೆಯ ವೆಚ್ಛ ಭರಿಸಿದರೆ ಸಾಕು. ಹಳ್ಳಿಗಳಿಗೆ ತೆರಳಿ ನಭೋಮಂಡಲದ ಬಗ್ಗೆ ಮಾಹಿತಿ ನೀಡಲಾಗುವುದು. ಗ್ರಾಮೀಣ ಭಾಗದ ಇಂತಿಷ್ಟು ಹೆಣ್ಣು ಮಕ್ಕಳುಗ್ರಾಮೀಣ ವಿದ್ಯಾರ್ಥಿಗಳಿಗೆ  ಈ ಕಾರ್ಯಕ್ರಮ ತಲುಪಿಸುವಂತೆ ಸರ್ಕಾರ ನಿಗದಿ ಮಾಡುವ ಗುರಿಯನ್ನು ನಾವು ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತೇವೆ ಎಂದರು.


Post a Comment

0Comments

Post a Comment (0)