ಪುರಂದರನಮನ ಮತ್ತು 5 ನೇ ವರ್ಷದ ವಾರ್ಷಿಕೋತ್ಸವ

varthajala
0

 ದಾಸವಾಣಿ  ಕರ್ನಾಟಕ ಸಂಸ್ಥೆ ದಿನಾಂಕ 11-02-2024  ರಂದು ಶ್ರೀ ರಾಮ ಮಂದಿರ, ರಾಜಾಜಿನಗರ ಬೆಂಗಳೂರಿನಲ್ಲಿ   ಪುರಂದರನಮನ ಮತ್ತು 5 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೆ ಸಂದರ್ಭದಲ್ಲಿ ದಾಸಸಾಹಿತ್ಯ  ಕ್ಷೇತ್ರ , ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಪ್ರಸಿದ್ದ ಕೀರ್ತನೆಕಾರರಾದ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ದಾಸಸಾಹಿತ್ಯದಲ್ಲಿನ ಸಾಧನೆಗೆ 2024 ನೇ ಸಾಲಿನ ಮಂಗಳಾಂಗಹರಿ ವಿಠಲ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲ್ಲಾಯಿತು. 

ಸಂಗೀತ ಕ್ಷೇತ್ರದಲ್ಲಿ ಶ್ರೀ ಶ್ಯಾಮಸುಂದರ ದಾಸರ ಮರಿಮಗಳಾದ ಶ್ರೀಮತಿ ಮಾನಸ ಕುಲಕರ್ಣಿ ಅವರಿಗೆ  ಮಂಗಳಾಂಗಹರಿ ವಿಠಲ ಅನುಗ್ರಹ ಪ್ರಶಸ್ತಿಗೆ ನೀಡಿ ಗೌರವಿಸಲ್ಲಾಯಿತು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ದಾಸವಾಣಿ ಕರ್ನಾಟಕ ಸಂಸ್ಥೆ ನೀಡುವ ದಾಸಪುರಂದರ ಪ್ರಶಸ್ತಿಗೆ ವಿದುಷಿ ವಿಜಯ ಭಟ್, ಶ್ರೀಮತಿ ಮಾಲಿನಿ ರಾಮ್ ಪ್ರಸಾದ್ ಹಾಗು ವಾದ್ಯ ಸಂಗೀತ(ತಬಲಾ) ದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಅವರು ಭಾಜಿನರಾದರು. ಇದಲ್ಲದೆ ಅನೇಕ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರಂದರದಾಸರ ಹಾಡಿನ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಡಾ ವಿಜಯಲಕ್ಷ್ಮಿ, ಶ್ರೀ ಕಾಕೋಳು ನಾರಾಯಣಮೂರ್ತಿ, ದಾಸವಾಣಿ ಹರಿ (ಜಯರಾಜ್ ಕುಲಕರ್ಣಿ), ಶ್ರೀಮತಿ ಪದ್ಮ ಆಚಾರ್ಯ, ಶ್ರೀಮತಿ ಪದ್ಮಜಾ ಪುರಾಣಿಕ್, ಶ್ರೀಮತಿ ಶ್ರುತಿ ಯೋಗೀಶ್, ಶ್ರೀಮತಿ ವಿಜಯಲಕ್ಷ್ಮಿ M , ಶ್ರೀಮತಿ ಗೌರಿ ಕುಲ್ಕರ್ಣಿ  ಮತ್ತು ನೂರಾರು ದಾಸವಾಣಿ ಕರ್ನಾಟಕ ಸದಸ್ಯರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Post a Comment

0Comments

Post a Comment (0)