ಬೆಂಗಳೂರು, ಫೆಬ್ರವರಿ 12 (ಕರ್ನಾಟಕ ವಾರ್ತೆ): ವಿಧಾನ ಸಭೆಯ ಸಭಾಂಗಣದ ಮೊಗಸಾಲೆಗಳಲ್ಲಿ ಮತ್ತು ವಿಕಾಸ ಸೌಧದಲ್ಲಿ ನೆಟ್‍ವರ್ಕ್ ಸಮಸ್ಯೆಯನ್ನು ಹೋಗಲಾಡಿಸಲು 5ಜಿ ಸಂಪರ್ಕ ವ್ಯವಸ್ಥೆಯ ಅತಿ ವೇಗದ ಇಂಟರ್‍ನೆಟ್ ಸೇವೆಗೆ ವಿಧಾನಸೌಧದ ಮೇಲ್ಮಾಡಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಚಾಲನೆ ನೀಡಿದರು.
ಈ ವೇಳೆ, ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಶ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.