ಬೆಂಗಳೂರುನಗದ : ರಾಜಾಜಿನಗರದ ಶ್ರೀ ಅರೊಬಿಂದೋ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಮೆಡಿಸ್ಕೋಪ್ ರಕ್ತನಿಧಿಯ ವತಿಯಿಂದ ರಕ್ತದಾನ ಮತ್ತು ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ 60 ಯುನಿಟ್ ರಕ್ತ ಸಂಗ್ರಹವಾಯಿತು ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತು ಪೋಷಕರು ಸೇರಿದಂತೆ 350 ಕ್ಕೂ ಹೆಚ್ಚು ಸದಸ್ಯರು ವೈದ್ಯಕೀಯ ಶಿಬಿರದ ಉಪಯೋಗವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ರಾಜಾಜಿನಗರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಮೇಶ್ ಚಂದ್ರ ಹೊಂಗಲ್, ಖಜಾಂಚಿ ಗುರುರಾಜ್ ದೇಶಪಾಂಡೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ, ವೈದ್ಯಕೀಯ ಅಧಿಕಾರಿ ಡಾ.ಡೆಲ್ವಿ, ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಎಲ್ಲಾ ವಿಭಾಗದ ಮುಖ್ಯಸ್ಥರು ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಅಧಿಕಾರಿ ದುರ್ಗಾ ಪ್ರಸಾದ್ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಮತ್ತು ಬೃಹತ್ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.