ವಿದ್ಯಾರ್ಥಿಗಳಿಗೆ ದೇಶ ಸೇವೆಯ ಗುಣಗಳನ್ನು ಕಲಿಯಬೇಕು : ಎಚ್.ಎಸ್.ರುದ್ರೇಶಮೂರ್ತಿ

varthajala
0

ವಾರ್ತಾಜಾಲ ಶಿಡ್ಲಘಟ್ಟ 

ಮಕ್ಕಳ ದಿಸೆಯಿಂದಲೇ ದೇಶಪ್ರೇಮ, ರಾಷ್ಟ್ರಭಕ್ತಿ, ಪ್ರಜಾಪ್ರಭುತ್ವದ ಅಂಶಗಳ ಅರಿವು ಬೆಳೆಯಬೇಕು. ಯುವ ಪೀಳಿಗೆಯೇ ದೇಶದ ಆಸ್ತಿ. ಸಮಗ್ರ ಭಾರತದಲ್ಲಿ ದೇಶವ್ಯಾಪಿ ಅನ್ವಯವಾಗಬಹುದಾದ, ರಾಷ್ಟ್ರಕ್ಕಿರುವ ಏಕರೂಪದ ಕಾನೂನನ್ನು ಎಲ್ಲರೂ ಗೌರವಿಸಬೇಕು, ದೇಶಭಕ್ತಿ, ಭಾವೈಕ್ಯತೆ ಯಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಬೆಳೆಯಬೇಕು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ, ಲೇಖನ ಪರಿಕರಗಳ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬ ನಾಗರೀಕನಲ್ಲಿಯೂ ಸಂವಿಧಾನದಡಿ ನಿಗದಿಯಾಗಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಇರಬೇಕು. ಯುವ ಪೀಳಿಗೆಯಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ, ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಹ ಗುಣಗಳನ್ನು ಕಲಿಸಬೇಕಿದೆ. ಭಾರತದ ಲಿಖಿತ ಸಂವಿಧಾನವು ಇಡೀ ಪ್ರಪಂಚದಲ್ಲಿಯೇ ಅಪೂರ್ವವಾದುದಾಗಿದೆ. ಅದ್ಬುತವಾದ ಪ್ರಜಾತಂತ್ರ ವ್ಯವಸ್ಥೆ, ವಿವಿಧತೆಯಲ್ಲಿ ಏಕತೆ, ಭಾತೃತ್ವದ ರಾಷ್ಟ್ರ ವೆಂಬುದೇ ನಮ್ಮ ಹೆಮ್ಮೆ ಎಂದರು.

ವಿದ್ಯಾರ್ಥಿಗಳಿಗೆ ಉಚಿತ ನೋಟ್‍ ಪುಸ್ತಕ, ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿಪತ್ರ, ಬಹುಮಾನಗಳನ್ನು ವಿತರಿಸಲಾಯಿತು.

ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯಿತಿ ಸದಸ್ಯ ಎಸ್.ಎ.ಸತೀಶ್‍ಕುಮಾರ್, ಎಂ.ನಾಗರಾಜು, ಶಿವಶಂಕರಪ್ಪ, ದೇವರಾಜು, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಭಾಗ್ಯಮ್ಮ ಅರುಣ್‍ಕುಮಾರ್, ಎಸ್‍ಡಿಎಂಸಿ ಸದಸ್ಯ ನಾಗರಾಜು, ಎಸ್.ಎಲ್.ನಾರಾಯಣಸ್ವಾಮಿ, ನಾಗೇಂದ್ರ, ನಾಗೇಶ್, ಸಂತೋಷ್, ಸದಸ್ಯೆ ಬಿ.ಎನ್.ಮಂಜುಳಾ, ಆರತಿ, ನಾಗವೇಣಿ, ಮಾಜಿ  ಸದಸ್ಯ ಎಸ್.ಆರ್.ನಾಗೇಶ್, ಚಿಕ್ಕಮುನಿ ವೆಂಕಟಶೆಟ್ಟಿ, ನಾರಾಯಣಸ್ವಾಮಿ, ಗ್ರಾಮಸ್ಥರು, ಶಿಕ್ಷಕ ವರ್ಗದವರು, ಮತ್ತಿತರರು ಇದ್ದರು.

Post a Comment

0Comments

Post a Comment (0)