ಎ.ಆರ್.ಸಿ. ಆಲೂಗಡ್ಡೆ ಕ್ಷೇತ್ರೋತ್ಸವ

varthajala
0

ಬೆಂಗಳೂರು, ಜನವರಿ 03 (ಕರ್ನಾಟಕ ವಾರ್ತೆ): ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಅಂಗ ಸಂಸ್ಥೆಯಾದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬೆಂಗಳೂರು, ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಬೆಂಗಳೂರು, ಜಿ. ಐ. ಝಡ್, ಭಾರತ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಹಾಗೂ ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ಜನವರಿ 4 ರಂದು ಬೆಳಿಗ್ಗೆ 10.30 ಗಂಟೆಗೆ “ಎ.ಆರ್.ಸಿ. ಆಲೂಗಡ್ಡೆ ಕ್ಷೇತ್ರೋತ್ಸವ”ವನ್ನು ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಶ್ವವಿದ್ಯಾಲಯ ಆವರಣ, ದೊಡ್ಡಬೆಟ್ಟಹಳ್ಳಿ ಬಸ್ ನಿಲ್ದಾಣದ ಎದುರು, ವಿದ್ಯಾರಣ್ಯಪುರ  ಯಲಹಂಕ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.

ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಡಿ. ಎಸ್. ರಮೇಶ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ.ಹೆಚ್.ಪಿ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಲಕ್ಷ್ಮಿನಾರಾಯಣ ಹೆಗ್ಡೆ ಬಾಗಲಕೋಟೆ, ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಲಕ್ಷ್ಮಿನಾರಾಯಣ ಹೆಗ್ಡೆ,  ಬೆಂಗಳೂರು, ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ. ಜಿ. ಎಸ್. ಕೆ. ಸ್ವಾಮಿ, ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರದÀ ಅಧಿಕಾರಿಗಳು, ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಉಪಸ್ಥಿತರಿರುವರು.

ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಸುಮಾರು 120ಕ್ಕೂ ಹೆಚ್ಚು ಆಲೂಗಡ್ಡೆ ಬೆಳೆಗಾರ ರೈತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎ.ಆರ್.ಸಿ. ಆಲೂಗಡ್ಡೆಯಲ್ಲಿ ಉತ್ಪಾದನಾ ತಾಂತ್ರಿಕತೆ, ಸ್ಥಳೀಯವಾಗಿ ಬೀಜೋತ್ಪಾದನೆಯ ಅವಶ್ಯಕತೆ, ನರ್ಸರಿ ನಿರ್ವಹಣೆ ಮತ್ತು ನರ್ಸರಿಯಲ್ಲಿ ವಾಣಿಜ್ಯ ಅವಕಾಶಗಳು, ಎ.ಆರ್.ಸಿ. ಆಲೂಗಡ್ಡೆ ಕುರಿತಾದ ಪ್ರಯೋಗಗಳು ಮತ್ತು ಫಲಿತಾಂಶಗಳು, ತೋಟಗಾರಿಕೆ ಇಲಾಖೆಯಲ್ಲಿ ಎ.ಆರ್.ಸಿ. ಆಲೂಗಡ್ಡೆ ಉತ್ಪಾದನೆಗೆ ಪ್ರೋತ್ಸಾಹ ಯೋಜನೆಗಳ ಕುರಿತು ತಾಂತ್ರಿಕ ಗೋಷ್ಠಿಗಳನ್ನು ಹಾಗೂ ಎ.ಆರ್.ಸಿ. ಆಲೂಗಡ್ಡೆ ಬೆಳೆ ಪ್ರಯೋಗ ಕ್ಷೇತ್ರ ಮತ್ತು ಎ.ಆರ್.ಸಿ. ಆಲೂಗಡ್ಡೆ ನರ್ಸರಿ ಭೇಟಿ ಏರ್ಪಡಿಸಲಾಗಿದೆ ಎಂದು ಬೆಂಗಳೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು, ಡಾ. ಎಸ್. ಎಲ್. ಜಗದೀಶ್ ಅವರು ಪ್ರÀಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)