ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

varthajala
0

ಬೆಂಗಳೂರು, ಜನವರಿ 25, (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಗರ ಯೋಜಕರು 50+10(ಹೈ.ಕ), ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರ ಸಭೆ/ ಪುರಸಭೆ/ಪಟ್ಟಣ ಪಂಚಾಯಿತಿ) ಇಲಾಖೆಯಲ್ಲಿನ ಕಿರಿಯ ಅಭಿಯಂತರರು (ಸಿವಿಲ್) 74+15(ಹೈ.ಕ),  ಗ್ರೂಪ್ ‘ಸಿ’ ವೃಂದದ ಹುದ್ದೆಗಳ ನೇಮಕಾತಿಗಳ ಸಂಬಂಧ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್‍ಆಪ್ ಅಂಕಗಳನ್ನು ಜನವರಿ 22 ರಂದು ಆಯೋಗದ ಜಾಲತಾಣ http://kpsc.kar.nic.in/Lists ನಲ್ಲಿ ಪ್ರಕಟಿಸಿದೆ.

ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಕುರಿತಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಆಯ್ಕೆಪಟ್ಟಿ ಪ್ರಕಟಿಸಿದ ದಿನಾಂಕದಿಂದ 07 ದಿನಗಳೊಳಗಾಗಿ (29-01-2024 ರಂದು ಸಂಜೆ 5 ಗಂಟೆಯೊಳಗಾಗಿ) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001 ಇವರಿಗೆ ಸಂಬಂಧಿತ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಿ ಲಿಖಿತ ರೂಪದಲ್ಲಿ ಸಲ್ಲಿಸಬೇಕು.

ಈ ಹುದ್ದೆಗಳಿಗೆ ಆಯ್ಕೆಯಾಗಲು ಇಚ್ಛಿಸದ ಅಭ್ಯರ್ಥಿಗಳು ಸ್ವ-ಇಚ್ಛಾ ಹೇಳಿಕೆಯನ್ನು ಆಯ್ಕೆಪಟ್ಟಿ ಪ್ರಕಟಿಸಿದ 7 ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001 ಇವರಿಗೆ ಲಿಖಿತವಾಗಿ ಸಲ್ಲಿಸಬೇಕು. ಆ ನಂತರ ಸಲ್ಲಿಸಲಾಗುವ ಆಕ್ಷೇಪಣೆ /    ಸ್ವ-ಇಚ್ಚಾ ಹೇಳಿಕೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಲತಾ ಕುಮಾರಿ ಕೆ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)