ಬೆಂಗಳೂರು: ಏರೋಸ್ಪೇಸ್ ಉದ್ಯಮದಲ್ಲಿ ಕಾರ್ಯಪ್ರವೃತ್ತರಾಗಿರುವ ಗೋಪಾಲನ್ ಏರೋಸ್ಪೇಸ್ ಸಂಸ್ಥೆಯು 54-ಟನ್ ಲೋಡ್ ಸಾಮರ್ಥ್ಯದ ಎರಡು ಘಟಕಗಳನ್ನು ಒಳಗೊಂಡಿರುವ ಮಹತ್ವದ ಮೋಟಾರ್ ಟ್ರಾನ್‌ಸ್ಪೋರ್ಟರ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಭಾರತೀಯ ರಕ್ಷಣಾ ವಲಯದ ಅಭಿವೃದ್ಧಿಗೆ ಸಹಕಾರ ನೀಡಿದೆ.
ಈ ಯೋಜನೆಯು 8 ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿದ್ದು, ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ.
ಭಾರತೀಯ ರಕ್ಷಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಫೆನ್ಸ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದಂತೆ ಟ್ರಾನ್ಸ್‌ಪೋರ್ಟರ್ ತಂತ್ರಜ್ಞಾನದಲ್ಲಿನ ಎಲ್ಲಾ ಸವಾಲುಗಳನ್ನು ಗೋಪಾಲನ್ ಏರೋಸ್ಪೇಸ್ ಸಂಸ್ಥೆಯು ಮೆಟ್ಟಿನಿಂತು ಈ ಯೋಜನೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ.
ಈ ಅತ್ಯಾಧುನಿಕ ತಂತ್ರಜ್ಞಾನವನ್ನು ರಕ್ಷಣಾ ಇಲಾಖೆಗೆ ಸಮರ್ಪಿಸುವ ಕಾರ್ಯ ಗೋಪಾಲನ್ ಏರೋಸ್ಪೇಸ್ ಕೇಂದ್ರ, ಹೊಸಕೋಟೆಯಲ್ಲಿ ನೆರವೇರಿದ್ದು, ಹೊಸಕೋಟೆಯ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಮತ್ತು ಗೋಪಾಲನ್ ಏರೋಸ್ಟೇಸ್‌ನ ನಿರ್ದೇಶಕರಾದ ಡಾ. ಸಿ ಪ್ರಭಾಕರ್ ಅವರು ಹಸಿರು ನಿಶಾನೆ ತೋರುವ ಮೂಲಕ ಮೋಟಾರ್ ಟ್ರಾನ್ಸ್ಪೋರ್ಟರ್‌ಗಳಿಗೆ ಚಾಲನೆ ನೀಡಿದರು.
ADVERTISEMENT
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಶರತ್ ಕುಮಾರ್ ಬಚ್ಚೇಗೌಡ, "ಗೋಪಾಲನ್ ಏರೋಸ್ಪೇಸ್ ತಂಡವು ಅಭಿವೃದ್ಧಿಪಡಿಸಿರುವ ಈ ಮೋಟಾರ್ ಟ್ರಾನ್ಸ್ಪೋರ್ಟರ್ ತಂತ್ರಜ್ಞಾನವು ವಿನೂತನವಾಗಿದ್ದು, ರಕ್ಷಣಾ ಇಲಾಖೆಯ ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾದ ತಂತ್ರಜ್ಞಾನವನ್ನು ಆವಿಷ್ಕರಿಸಿದೆ. ಈ ಯೋಜನೆಯಲ್ಲಿ ಪಾಲ್ಗೊಂಡವರು ಹೆಮ್ಮೆಯ ಕಾರ್ಯ ನಿರ್ವಹಿಸಿದ್ದಾರೆʻ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೋಟಾರ್ ಟ್ರಾನ್ಸ್ಪೋರ್ಟರ್ ಯೋಜನೆಯ ವೈಶಿಷ್ಟ್ಯವೆಂದರೆ ರಕ್ಷಣಾ ಅಪ್ಲಿಕೇಶನ್‌ಗಳಿಗೆ ಅನುಗುಣವಾಗಿ ರೋಬಸ್ಟ್ ಟ್ರೈಲರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹೈಡ್ರಾಲಿಕ್ ಸಸ್ಪೆಕ್ಷನ್ ಹೊಂದಿರುವ 4 ಆಕ್ಸೆಲ್ ಟ್ರೈಲರ್ ಅನ್ನು ಅಳವಡಿಸಲಾಗಿದೆ. ಸ್ಟೀರಬಲ್ ಟ್ರೈಲರ್ ಚಕ್ರಗಳನ್ನು ಸ್ವಯಂಚಾಲಿತ ಮತ್ತು ಹಸ್ತಚಾಲಿತ ಮೋಡ್‌ನಲ್ಲಿ ಅಳವಡಿಸಲಾಗಿದ್ದು, ಕಠಿಣ ಭೂಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯನ್ನು ನೀಡುತ್ತದೆ.
ಅಗ್ನಿ ಅನಾಹುತ ಅಥವಾ ಅಪಘಾತಗಳು ಎದುರಾದ ಸಂದರ್ಭದಲ್ಲಿ ಸುರಕ್ಷತೆಗಾಗಿ ಮೇಲ್ಪದರವನ್ನು ರಚಿಸಲಾಗಿದೆ. ಟ್ರಾನ್ಸ್‌ಪೋರ್ಟರ್‌ನಲ್ಲಿ ಎದುರಾಗುವ ಆಘಾತಗಳನ್ನು ನಿರ್ವಹಿಸುವ ಮತ್ತು ಪೇಲೋಡನ್ನು ರಕ್ಷಿಸಲು ವೈರ್ ರೋಪ್ ಐಸೊಲೇಟರ್ಗಳನ್ನು ಅಳವಡಿಸಲಾಗಿದೆ. STEC ಮಾನದಂಡಗಳಿಗೆ ಬದ್ಧವಾಗಿ ಟ್ರಾನ್ಸ್ಪೋರ್ಟರನ್ನು ವಿನ್ಯಾಸಗೊಳಿಸಲಾಗಿದೆ.
ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ಅಭಿವೃದ್ಧಿಯನ್ನು ತರುವಲ್ಲಿ ಗೋಪಾಲನ್ ಏರೋಸ್ಪೇಸ್‌ನ ಶ್ರಮ ಮತ್ತು ಬದ್ಧತೆಯನ್ನು ಈ ಯೋಜನೆಯು ಸಾಕ್ಷೀಕರಿಸುತ್ತದೆ. ಏರೋಸಿಸ್ಟಮ್ಸ್, ಏರೋಸ್ಟ್ರಕ್ಚರ್, ಶೀಟ್ ಮೆಟಲ್ ಫ್ಯಾಬ್ರಿಕೇಶನ್ ಮತ್ತು ಮುಂತಾದವುಗಳಲ್ಲಿ ಸೂಕ್ತ/ಅಗತ್ಯ ಅಳತೆಯಲ್ಲಿ ಯಂತ್ರವನ್ನು ಅಳವಡಿಸುವಿಕೆಯಲ್ಲಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ. ಭಾರತೀಯ ರಕ್ಷಣಾ ವಲಯಕ್ಕೆ ಸಕ್ರಿಯ ಮತ್ತು ನಿಷ್ಕ್ರಿಯ ರಡಾರ್, ವೈಮಾನಿಕ ಗುರಿಗಳು, ಡ್ರೋನ್ ಮತ್ತು UAV ಒದಗಿಸುವಲ್ಲಿ ಗೋಪಾಲನ್ ಏರೋಸ್ಪೇಸ್ ಸಂಸ್ಥೆಯು ಮುಂಚೂಣಿಯಲ್ಲಿದೆ. ಆದಾಗ್ಯೂ ಇಸ್ರೇಲ್ IAI, ರಫಾಲ್, DRDO, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಂತಹ ಘಟಕಗಳ ಸಹಯೋಗದೊಂದಿಗೆ ಗೋಪಾಲನ್ ಏರೋಸ್ಪೇಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಗೋಪಾಲನ್ ಏರೋಸ್ಪೇಸ್:
ಏರೋಸ್ಪೇಸ್ ವಲಯದಲ್ಲಿ ಗೋಪಾಲನ್ ಏರೋಸ್ಪೇಸ್ ಪ್ರವರ್ತಕ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿಗೆ ಅಗತ್ಯವಾದ ಅತ್ಯಾಧುನಿಕ ಆವಿಷ್ಕಾಗಳು ಮತ್ತು ಅದರೆಡೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಸ್ಥೆಯು ಹೆಸರುವಾಸಿಯಾಗಿದೆ. ಅದಲ್ಲದೆ ಏರೋಸಿಸ್ಟಮ್ಸ್, ಏರೋಸ್ಟ್ರಕ್ಚರ್, ಶೀಟ್ ಮೆಟಲ್ ಫ್ಯಾಬ್ರಿಕೇಶನ್, ಏರೋಸ್ಟ್ರಕ್ಚರ್ ಅಸೆಂಬ್ಲಿ, ಟೆಸ್ಟಿಂಗ್ ಮತ್ತು ಘಟಕಗಳ ಮೂಲಮಾದರಿಯಲ್ಲಿಅಗತ್ಯಕ್ಕೆ ತಕ್ಕಂತೆ ಯಂತ್ರ ಅಳವಡಿಕೆಯಲ್ಲಿ ಸಂಸ್ಥೆಯು ಸಮರ್ಥವಾಗಿ ತೊಡಗಿಕೊಂಡಿದೆ. ಮಾಧ್ಯಮ ವಿಚಾರಣೆಗಾಗಿ ಸಂಪರ್ಕಿಸಿ: 6364466240, 7975253201