ರಾಮರಾಜ್ಯದ ಪ್ರತಿಜ್ಞೆಯೊಂದಿಗೆ ದೇಶದಾದ್ಯಂತ ದೇವಸ್ಥಾನಗಳ ಸ್ವಚ್ಛತೆ ಉಪಕ್ರಮ

varthajala
0

 ಬೆಂಗಳೂರು - `ನೂರಾರು ವರ್ಷಗಳ ಪ್ರತೀಕ್ಷೆಯ ನಂತರ ಜನವರಿ ೨೨ ರಂದು ಅಯೋಧ್ಯೆಯ ಪವಿತ್ರ ಶ್ರೀ ರಾಮಜನ್ಮಭೂಮಿಯಲ್ಲಿ ಭಗವಾನ ಶ್ರೀರಾಮನು ಪುನಃ ಅವತರಿಸುತ್ತಿದ್ದಾನೆ. ಇದು ರಾಮಭಕ್ತರಿಗೆ ಅತ್ಯಂತ ಆನಂದ ಹಾಗೂ ಹರ್ಷದ ಕ್ಷಣ. ಈ ಸಮಯದಲ್ಲಿ ಪ್ರಭು ಶ್ರೀರಾಮನ ನಾಮಜಪ ಮಾಡಿ ಅವರ ಭಕ್ತಿಯನ್ನು ಮಾಡುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ ರಾಮರಾಜ್ಯದ ಪ್ರತಿಜ್ಞೆಯೊಂದಿಗೆ ದೇವಸ್ಥಾನಗಳ ಸ್ವಚ್ಛತೆಯ ಉಪಕ್ರಮಗಳನ್ನು ನಡೆಸಲಾಗುವುದು’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ತಿಳಿಸಿದ್ದಾರೆ.


ಲಕ್ಷಾಂತರ ಹಿಂದೂಗಳ ಬಲಿದಾನದ ನಂತರ ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಇದು ಒಂದು ಐತಿಹಾಸಿಕ ಕ್ಷಣವಾಗಿದೆ. ಈ ಶ್ರೀ ರಾಮಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಿದವರ ಮತ್ತು ತಮ್ಮ ಪ್ರಾಣದ ಬಲಿದಾನ ಮಾಡಿದ ರಾಮಭಕ್ತರನ್ನು ಸಮಿತಿಯು ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ.

ಕಳೆದ ಅನೇಕ ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಬಾರಿ ಸ್ವಯಂ ದೇಶದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯಾರಿಂದಲೂ ದೇವಸ್ಥಾನಗಳಲ್ಲಿ ಸ್ವಚ್ಛತೆಯ ಅಭಿಯಾನ ನಡೆಸಲು ಜನತೆಗೆ ಆವಾಹನೆ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಸಮಿತಿಯ ಮೂಲಕ ದಿನಾಂಕ 15 ರಿಂದ 21 ಜನವರಿ 2024 ರ ಅವಧಿಯಲ್ಲಿ ಸ್ಥಳೀಯ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು. ದೇವಸ್ಥಾನಗಳ ಸ್ವಚ್ಛತೆಯ ನಂತರ ಎಲ್ಲ ಹಿಂದೂಗಳನ್ನು ಒಂದು ಕಡೆ ಸೇರಿಸಿ ರಾಮರಾಜ್ಯ ಹಾಗೂ ಹಿಂದೂ ರಾಷ್ಟ್ರದ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುವುದು. ಇದರ ನಂತರ ಪ್ರಭು ಶ್ರೀರಾಮನ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆಗಳನ್ನು ವ್ಯಕ್ತಪಡಿಸಲಾಗುತ್ತದೆ.
ಮನೆ-ಮನೆಯಲ್ಲಿ ದೀಪ ಹಾಗೂ ಕೇಸರಿ ಧ್ವಜ !
22 ಜನವರಿಯಂದು ಸಮಿತಿಯ ಎಲ್ಲಾ ಕಾರ್ಯಕರ್ತರು, ಶ್ರೀರಾಮಭಕ್ತರು ಹಾಗೂ ಸಮಸ್ತ ಹಿಂದೂ ಬಾಂಧವರು ತಮ್ಮ ಮನೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಮೆಯ ಪೂಜೆ ಮಾಡುವುದು, ದೀಪಾವಳಿಯಂತೆ ಮನೆಯ ಬಾಗಿಲಿನಲ್ಲಿ ದೀಪ ಹಚ್ಚುವುದು, ಮನೆಯ ದ್ವಾರದಲ್ಲಿ ಸಾತ್ವಿಕ ರಂಗೋಲಿ ಬಿಡಿಸುವುದು ಮತ್ತು ಮನೆಯ ಮೇಲೆ ಕೇಸರಿ ಧ್ವಜ ಹಾರಿಸುವುದು ಇತ್ಯಾದಿ ಆಚರಿಸಲಾಗುವುದು. ಅದೇ ರೀತಿ ಹಿಂದೂ ಸಂಘಟನೆಗಳ ಮೂಲಕ ನಡೆಸಲಾಗುತ್ತಿರುವ ಕಲಶ ಯಾತ್ರೆ, ಅಕ್ಷತೆ ವಿತರಣಾ ಯಾತ್ರೆ, ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ವಿವಿಧ ಉಪಕ್ರಮಗಳಲ್ಲಿ ಸಹಭಾಗ ಮಾಡಲಾಗುವುದು’ ಎಂದು ಶ್ರೀ. ಮೋಹನ್ ಗೌಡ ತಿಳಿಸಿದರು.

Post a Comment

0Comments

Post a Comment (0)