ರಾಜ್ಯಾದ್ಯಂತ ಬರ ಪರಿಹಾರಕ್ಕೆ ಒತ್ತಾಯಿಸಿ ಕೂಲಿಕಾರರ ಪ್ರತಿಭಟನೆ.

varthajala
0

ರಾಜ್ಯದಲ್ಲಿ ಬರಪರಿಸ್ಥಿತಿ ತೀವ್ರವಾಗುತ್ತಿದೆ. 223 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ಬರಪರಿಹಾರಕ್ಕಾಗಿ 18 ಸಾವಿರ ಕೋಟಿ ರೂ. ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಮುಂದಾಗಲಿಲ್ಲ. ಕುಡಿಯಲು ಗ್ರಾಮೀಣ ಜನತೆಗೆ ನೀರು ಸಹ ಸಿಗದಂತಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿದೆ. ಗ್ರಾಮೀಣ ಕೆಲಸಗಾರರಿಗೆ ಕೆಲಸ ಸಿಗದಂತಾಗಿ ವಲಸೆ ಹೋಗುವುದು ಅನಿವಾರ್ಯವಾಗಿ ಹೆಚ್ಚಾಗಿದೆ.

ಆದ್ದರಿಂದ 08-01-2024 ರಂದು ರಾಜ್ಯಾದ್ಯಂತ ಸಿ.ಇ.ಓ.ಗಳ ಅಥವ ಜಿಲ್ಲಾಧಿಕಾರಿಗಳ ಕಛೇರಿಗಳ ಎದುರು ಅಥವ ತಾಲ್ಲೂಕು ತಹಶಿಲ್ದಾರರ ಕಛೇರಿಗಳ ಮುಂದೆ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು.
ಬರಗಾಲ ನಿಮಿತ್ತ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ವರ್ಷದಲ್ಲಿ 100 ದಿನಗಳ ಬದಲಾಗಿ 200 ದಿನಗಳ ಕೆಲಸ ಒದಗಿಸಬೇಕು. ಕನಿಷ್ಟ ದಿನಗೂಲಿಯನ್ನು ರೂ. 600 ಕ್ಕೆ ಹೆಚ್ಚಿಸಬೇಕು.
ಕೂಲಿಕಾರರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕು. ಮೈಕ್ರೋಫೈನಾನ್ಸ್ ಮೂಲಕ ಪಡೆದ ಸಾಲವನ್ನು ಮನ್ನಾ ಮಾಡಬೇಕು. ಬರಗಾಲದ ಸಮಯದಲ್ಲಿ ಯಂತ್ರಗಳ ಬಳಕೆಯನ್ನು ನಿಲ್ಲಿಸಿ ಕೂಲಿಕಾರರಿಗೆ ಕೆಲಸದ ಕೊರತೆ ಆಗದಂತೆ ನೋಡಿಕೊಳ್ಳಬೇಕು.

Post a Comment

0Comments

Post a Comment (0)