ಬೆಂಗಳೂರು, ಜನವರಿ 03 (ಕರ್ನಾಟಕ ವಾರ್ತೆ): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ವಜ್ರ ಸೇವೆಗಳಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ವಂಡರ್-ಲಾ ಮನರಂಜನಾ ಉದ್ಯಾನವನಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಅವತಾರ್ ತಂತ್ರಾಂಶದಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಜನವರಿ 15 ರಿಂದ ಅನುಷ್ಠಾನಗೊಳಿಸಲಾಗುವುದು.
ನಗರದ ವಿವಿಧ ಭಾಗಗಳಿಂದ ವಂಡರ್-ಲಾ ಮನರಂಜನಾ ಉದ್ಯಾನವನಕ್ಕೆ 4 ಮಾರ್ಗಗಳಲ್ಲಿ 10 ಅನುಸೂಚಿಗಳಿಂದ 20 ಏಕಮುಖ ಸುತ್ತುವಳಿಗಳ ಮೂಲಕ ಹವಾನಿಯಂತ್ರಿತ ವಜ್ರ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಮುಂಗಡ ಬುಕ್ಕಿಂಗ್ ಸೌಲಬ್ಯ ಕಲ್ಪಿಸಿರುವ ಮಾರ್ಗ ಸಂಖ್ಯೆ – ವಿ-226 ಕೆಬಿಎಸ್, ಕೆಂಪೇಗೌಡ ಬಸ್ ನಿಲ್ದಾಣದಿಂದ ವಂಡರ್ ಲಾ ಮನರಂಜನಾ ಉದ್ಯಾನವನಕ್ಕೆ ಕಾಟನ್‍ಪೇಟೆ ಆಸ್ಪತ್ರೆ, ಸಿರ್ಸಿ ಸರ್ಕಲ್, ಮೈಸೂರು ರಸ್ತೆ ಬಸ್ ನಿಲ್ದಾಣ, ನಾಯಂಡಹಳ್ಳಿ , ಕೆಂಗೇರಿ ಮಾರ್ಗವಾಗಿ ಹೊರಡಲಿದೆ.
ವಂಡರ್- ಲಾ ಗೆ ಕಾರ್ಯಾಚರಿಸುವ ವಜ್ರ ಸಾರಿಗೆಗಳಲ್ಲಿ ಟಿಕೇಟ್ ಖರೀದಿಸಿ ಪ್ರಯಾಣ ಮಾಡಿದ ಪ್ರತಿ ಪ್ರಯಾಣಿಕರಿಗೆ ವಂಡರ್ ಲಾ ಸಂಸ್ಥೆಯ ಪ್ರವೇಶ ಶುಲ್ಕದಲ್ಲಿ ಶೇ. 15 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಾಲತಾಣ www.ksrtc.in, ಗೆ ಸಂಪರ್ಕಿಸುವುದು.
ಮುಂಗಡವಾಗಿ ಆಸನಗಳನ್ನು ಕೆಎಸ್‍ಆರ್‍ಟಿಸಿ ಬುಕ್ಕಿಂಗ್ ಕೌಂಟರ್‍ಗಳು, ಆನ್‍ಲೈನ್ www.ksrtc.in, ಕೆಎಸ್‍ಆರ್‍ಟಿಸಿ ಮೊಬೈಲ್ ಆಪ್ ಹಾಗೂ ಅಧಿಕೃತ ಖಾಸಗಿ ಏಜೆನ್ಸಿಗಳ ಮೂಲಕ ಕಾಯ್ದಿರಿಸಬಹುದು.
ಒಂದೇ ಗುಂಪಿನ 4 ಅಥವಾ ಅಧಿಕ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿದಲ್ಲಿ, ಪ್ರಯಾಣ ದರದಲ್ಲಿ ಶೇ. 5 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ವಹಿವಾಟಿನಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ, ಮೂಲ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.