ಭಾರತ್ ಎಲೆಕ್ಟ್ರಾನಿಕ್ಸ್ ನ ಸಪ್ತ ಶಿಕ್ಷಣ ಸಂಸ್ಥೆ - ನೂತನ ವಿದ್ಯಾ ಕಟ್ಟಡಗಳ ಉದ್ಘಾಟನೆ

varthajala
0

ಬೆಂಗಳೂರಿನ ಜಾಲಹಳ್ಳಿಯಲ್ಲಿರೋ ಪ್ರತಿಷ್ಟಿತ ನವರತ್ನ ಕಂಪನಿಗಳಲ್ಲಿ ಒಂದಾದ ಭಾರತ್ ಎಲೆಕ್ಟ್ರಾನಿಕ್ಸ್ ಸಪ್ತ ಶಿಕ್ಷಣ ಸಂಸ್ಥೆ ಗಳಲ್ಲಿ ಇರುವಂತಹ ಪ್ರಥಮ ದರ್ಜೆ ಕಾಲೇಜಿನ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡ ಹಾಗೂ ಸಿ ಬಿ ಎಸ್ ಸಿ ಶಾಲೆಯ ಪದವಿ ಪೂರ್ವ ಶಿಕ್ಷಣಕಾಗಿ ನಿರ್ಮಾಣವಾಗಿರುವ ಎರಡು ಕಟ್ಟಡಗಳ ಉದ್ಘಾಟನೆ ದಿನಾಂಕ 28-12-2023 ರ ಗುರುವಾರ ಶುಭ ದಿನ ಬೆಳಗ್ಗೆ ಸುಮಾರು 9:30 ರಿಂದ 10:30 ಕ್ಕೆ ಸಮಾರಂಭವು ಅದ್ಧುರಿಯಾಗಿ ನೆರೆವೇರಿಸಲಾಯಿತು.




ಈ ಸಮಾರಂಭದಲ್ಲಿ ಬಿ ಇ ಎಲ್ ಸಂಕೀರ್ಣದ ಹೆಚ್ಚುವರಿ ನಿರ್ದೇಶಕರಾದ ಶ್ರೀ ಯುತ ಮನೋಜ್ ಜೈನ್  (ಆರ್ ಅಂಡ್ ಡಿ )ಬಿ ಜಿ ಕಾಂಪ್ಲೆಕ್ಸ್ ಬೆಂಗಳೂರು, ಬಿ ಇ ಎಲ್ ಶಿಕ್ಷಣ ಸಂಸ್ಥೆಗಳ  ಅಧ್ಯಕ್ಷರು ಶ್ರೀ ಯುತ ಬಿ ಪಿ ಪಹುಜ ಜನರಲ್ ಮ್ಯಾನೇಜರ್ (ಎಂಜಿನಿಯರಿಂಗ್ ಸರ್ವಿಸ್ )ಉಪಸ್ಥಿತರಿದ್ದರು, ಬಿ ಇ ಎಲ್ ನ ಎಲ್ಲಾ ವಿಭಾಗೀಯ ಜನರಲ್ ಮ್ಯಾನೇಜರ್ ಗಳು .ಹಾಗೂ ಬಿ ಇ ಇ ಐ ನ ಕಾರ್ಯದರ್ಶಿಗಳಾದ ಶ್ರೀ ಯುತ ನರಸಿಂಹ ಕುಮಾರ್ ಎಸ್ ವಿ ಎನ್, ಹಾಗೂ ಸದಸ್ಯರುಗಳಾದ ಧೀರಜ್ ಕುಮಾರ್ ಠಾಕರೆ,  ಮತ್ತು ಬಿ ಇ ಇ ಐ ನ ಆಡಳಿತ ಅಧಿಕಾರಿಳಾದ ಶ್ರೀ ಯುತ ರಘುಪತಿ ಎಂ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮ ವು ಎಲ್ಲಾ ರೀತಿಯಲ್ಲಿ ಸುಸೂತ್ರವಾಗಿ,ಯಶಸ್ವಿಯಾಗಿ ಪೂರ್ಣಗೊಂಡಿತು.

Post a Comment

0Comments

Post a Comment (0)