ಗುಬ್ಬಿ :ಶ್ರೀಮತಿ ಟಿ ಎಸ್ ಜಾನಕಮ್ಮ ನವರು( 73 ವರ್ಷ )ಹೃದಯಘಾತ ದಿಂದ ನಿಧನ ಹೊಂದಿದ್ದು, ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಶಿಷ್ಯ ವೃಂದ ವನ್ನು ಅಗಲಿದ್ದಾರೆ.
ಜಾನಕಮ್ಮ ನವರು ಗುಬ್ಬಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎರಡು ದಶಕ ಗಳ ಕಾಲ ಶಿಕ್ಷಕಿ ಮತ್ತು ಮುಖ್ಯ ಶಿಕ್ಷಕಿ ಯಾಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರಿಗೆ ಮಕ್ಕಳನ್ನು ನೋಡಲು ಬಂದಿದ್ದರು. ಎರಡು ದಿನಗಳ ಹಿಂದೆ ಉಸಿರಾಟ ತೊಂದರೆ ಉಂಟಾಗಿ ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದರು, ಅವರ ಸ್ವಂತ ಊರಾದ ಗುಬ್ಬಿ ತಾಲೂಕಿನ ಮೂಗನಾಯಕನ ಕೋಟೆ ಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ದವರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಗುಬ್ಬಿ ತಾಲೂಕಿನ ಪ್ರಮುಖ ರು ಮತ್ತು ಅವರ ಅಪಾರ ಸಂಖ್ಯೆ ಯ ಶಿಷ್ಯ ವೃಂದ ಕಂಬನಿ ಮಿಡಿದಿದ್ದಾರೆ