1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದಾಗ ರಾಜ್ಯದ ಗಡಿ, ಅಧಿಕಾರಗಳಂತಹ ವಿಚಾರವನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಆದರೆ, ರಾಜ್ಯ ಭಾಷೆಗಳ ಸ್ಥಾನಮಾನ ವ್ಯಾಪ್ತಿಯ ಬಗ್ಗೆ ಸಂವಿಧಾನಕ್ಕೆ ಅಗತ್ಯ ಮಾರ್ಪಾಡು ಮಾಡಲಿಲ್ಲ. ಹಾಗಾಗಿ ಕನ್ನಡ ಶಿಕ್ಷಣ, ಆಡಳಿತ, ಸಾರ್ವಜನಿಕ ವಲಯಗಳ ಬಳಕೆಯ ಬಗ್ಗೆ ಗೊಂದಲವಿದೆ. ಇಂದು ಕನ್ನಡವೂ ಸೇರಿದಂತೆ ಎಲ್ಲ ರಾಜ್ಯದ ಭಾಷೆಗಳ ಉಳಿವಿಗೆ ಸಾಂವಿಧಾನಿಕವಾಗಿಯೇ ಬದಲಾವಣೆ ತರುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಡಾ.ಟಿ.ಎಸ್. ನಾಗಾಭರಣ ಅಭಿಪ್ರಾಯ ಪಟ್ಟರು.
ನಯನ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗ, ಕರ್ನಾಟಕ ಕಾರ್ಮಿಕಲೋಕ ಸಂಯುಕ್ತವಾಗಿ ಆಯೋಜಿಸಿದ್ದ ಪ್ರಶಸ್ತಿಗಳ ಪ್ರದಾನ, ಪುಸ್ತಕ ಬಹುಮಾನ ಮತ್ತು ಉತ್ತಮ ಸರ್ಕಾರಿ ಶಾಲೆಗೆ ಬಹುಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಯಾವುದೇ ವಿಷಯ, ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ ಅದರ ಮೂಲದಲ್ಲಿಯೇ ಅದನ್ನು ಮಾಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯಕ್ಕೆ ಸಂಬAಧಿಸಿದAತೆ ಸಂವಿಧಾನದಲ್ಲಿಯೇ ಕಾನೂನು, ಅವಕಾಶ ಮತ್ತು ಸವಲತ್ತುಗಳನ್ನು ಒದಗಿಸಲಾಗಿದೆ. ಆದರೆ, ನಮ್ಮ ನಮ್ಮ ರಾಜ್ಯಗಳ ಪ್ರದೇಶಿಕ ಬಾಷೆಯನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಭಾಷಾಶಿಸ್ತು, ನಿಯಮ, ಅವಕಾಶ, ಸವಲತ್ತುಗಳನ್ನು ಏಕೆ ಕಲ್ಪಿಸಲಿಲ್ಲ?’ ಎಂದು ಪ್ರಶ್ನಿಸಿದರು.
ಸಿಬಿಎಸ್ಇ ಪಠ್ಯಕ್ರಮದಲ್ಲಿ ಭಾಷಾ ವಿಷಯದ ಆಯ್ಕೆಯಲ್ಲಿ ಸ್ಪಾö್ಯನಿಷ್, ಜರ್ಮನ್ ಭಾಷೆಗಳ ಆಯ್ಕೆಗೆ ಅವಕಾಶವಿದೆ. ಆದರೆ, ಕನ್ನಡಕ್ಕೆ ಅವಕಾಶವಿಲ್ಲ ಎಂಬುದು ದೊಡ್ಡ ವ್ಯಂಗ್ಯವಾಗಿದೆ. 75 ವರ್ಷಗಳ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂತಹ ತಪ್ಪುಗಳನ್ನು ಸರಿ ಪಡಿಸುವ ಕೆಲಸ ಆಗಲೇ ಇಲ್ಲ, ಈಗಲೂ ಆಗದಿದ್ದರೆ, ನಮ್ಮ ಮಕ್ಕಳಿಗೆ ಇಂಗ್ಲಿಷ್ನಲ್ಲಿ ಕನ್ನಡ ಬರೆದು ಕಲಿಸಬೇಕಾದ ದುಸ್ಥಿತಿ ನಿರ್ಮಾಣವಾಗಲಿದೆ’ ಎಂಬ ಆತಂಕ ವ್ಯಕ್ತ ಪಡಿಸಿದರು.
ಇಂದು ಕನ್ನಡ ನಮ್ಮ ಮನೆ-ಮನಗಳಿಂದ ದೂರವಾಗುತ್ತಿದೆ-ದೊಡ್ಡರಂಗೇಗೌಡ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿ ದೊಡ್ಡರಂಗೇಗೌಡರು ಅಧ್ಯಕ್ಷ ನುಡಿಯಲ್ಲಿ “ಇಂದು ಕನ್ನಡ ನಮ್ಮ ಮನೆ-ಮನಗಳಿಂದ ದೂರವಾಗುತ್ತಿದೆ. ತಂದೆ-ತಾಯಿ ಮತ್ತು ಮನೆಯ ಹಿರಿಯರು ಮಕ್ಕಳಿಗೆ ಕನ್ನಡ ಕಲಿಸಬೇಕು. ಕನ್ನಡ ಶಾಲೆಗಳನ್ನುಉಳಿಸುವ ಪ್ರಯತ್ನಗಳಿಗೆ ಜನ ಸ್ಪಂದಿಸುತ್ತಿಲ್ಲ. ಇದಕ್ಕೆ ಖಾಸಗಿ ಶಾಲೆಗಳು ಸೃಷ್ಟಿಸಿರುವ ಭ್ರಮೆ ಕಾರಣವಾಗಿದೆ. ಖಾಸಗೀ ಶಾಲೆಗಳ ಲಾಬಿ ಕನ್ನಡ ಬೆಳೆಯಲುಬಿಡುತ್ತಿಲ್ಲ. ಹಾಗಾಗಿ ಕನ್ನಡದ ಕಾಯಕಲ್ಪಕ್ಕೆ ಮತ್ತುರೋಗಗ್ರಸ್ತ ಮನಸ್ಸುಗಳಿಗೆ ಚಿಕಿತ್ಸೆ ನೀಡಲು ‘ಗೋಕಾಕ್ ಚಳವಳಿ’ ಮಾದರಿಯಲ್ಲಿ ಒಂದು ದೊಡ್ಡ ಆಂದೋಲನ ನಡೆಯುವ ಅನಿವಾರ್ಯತೆಯಿದೆ. ಎಂದು ಅಭಿಪ್ರಾಯಪಟ್ಟು ಕನ್ನಡ ಶಾಸ್ತ್ರೀಯ ಭಾಷೆಯ ಸವಲತ್ತುಗಳನ್ನು ಬಳಸಿಕೊಳ್ಳಲು ನಮ್ಮ ವಿದ್ವಾಂಸರು ಸೂಕ್ತ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ಆರ್. ಶೇಷಶಾಸ್ತಿçಯವರು ಕನ್ನಡದ ಹಿತ ಕಾಪಾಡಲು, ಬೆಳಸಲು ಶ್ರಮಿಸಿದ ಇಂತಹ ಹಿರಿಯರ ನೆನಪಿನಲ್ಲಿ ನೀಡುವ ಪ್ರಶಸ್ತಿಗಳು ಮುಂದಿನ ಪೀಳಿಗೆಗೆ ಆ ಹಿರಿಯರ ಮೌಲ್ಯ, ಆದರ್ಶವನ್ನು ತಲುಪಿಸುವ ಪ್ರಕ್ರಿಯೆಯಾಗಿದ್ದು ಇಂತಹ ಕಾರ್ಯಕ್ರಮಗಳು ಯುವ ಜನಾಂಗಕ್ಕೆ ಅವರ ಪರಂಪರೆ ಮತ್ತು ಹೊಣಗಾರಿಕೆ ನಿರ್ವಹಿಸಲು ಸ್ಫೂರ್ತಿಯನ್ನು ನೀಡುತ್ತದೆ ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಹಿರಿಯ ವಿದ್ವಾಂಸ ಡಾ. ಎನ್.ಎಸ್. ತಾರಾನಾಥ ಅವರು ಕನ್ನಡಕ್ಕೆ ಶ್ರೇಷ್ಠ ಪರಂಪರೆಯಿದೆ, ಇಂದು ಕನ್ನಡದ ಹಿರಿಯ ಸಾಧಕರ, ನುಡಿ ಸೇವಕರ ಹೆಸರಿನಲ್ಲಿ ನೀಡಿರುವ ಪ್ರಶಸ್ತಿಗಳು, ಕನ್ನಡ ಪೂರ್ವಸೂರಿಗಳನ್ನು ನೆನಪಿಸಿಕೊಳ್ಳುವ ಸಂದರ್ಭ. ಈ ನೆನಪುಗಳು ನಮಗೆ ಕನ್ನಡ ಕೈಂಕರ್ಯವನ್ನು ಇನ್ನಷ್ಟು ನಿಷ್ಠೆಯಿಂದ ಮಾಡಲು ಸ್ಫೂರ್ತಿ ನೀಡುತ್ತದೆ. ಮೂರು ತಲೆಮಾರಗಳ ಸಂಗಮವಾಗಿರುವ ಈ ಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸುವ ಸೌಭಾಗ್ಯ ಕಲ್ಪಿಸಿದ ಸಂಘಟಕರಿಗೆ ಅಭಿನಂದನೆಗಳು.ಈ ಪ್ರಶ್ತಸಿಯನ್ನು ಸ್ವೀಕರಿಸಿದವರು ಪ್ರಶ್ತಸಿ ಫಲಕಗಳ ಜೊತೆಗೆ ಆ ಹಿರಿಯ ಸಾಧಕರ ಸಿದ್ಧಿ-ಸಾಧನೆಯ ನೆನಪಿನ ಬಳುವಳಿಯನ್ನು ಪಡೆದಿದ್ದೇವೆ ಎಂದರು.
ಪ್ರಾಸ್ತವಿಕ ಮಾತುಗಳನ್ನಾಡಿದ ರಾ.ನಂ. ಚಂದ್ರಶೇಖರ ‘ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಶಿಕ್ಷಣದಲ್ಲಿ ಉಳಿಯುತ್ತದೆ.ತನ್ಮೂಲಕ ಕನ್ನಡದ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿರುವ ಕನ್ನಡ ಗೆಳೆಯರ ಬಳಗ ಉತ್ತಮ ಸಾಧನೆ ಮಾಡಿದ ಕನ್ನಡ ಶಾಲೆಗಳಿಗೆ ಬಹುಮಾನ ನೀಡುತ್ತಿದೆ. ಕನ್ನಡ ಸಂಘಟನೆಗಳು ಕನ್ನಡ ಸಮಸ್ಯೆಗಳು ಉದ್ಭವಿಸಿದಾಗ ಹೋರಾಟ ಮಾಡುವುದರ ಜೊತೆಗೆ ಇಂತಹ ಕನ್ನಡ ಕಟ್ಟುವ ಕೆಲಸಕ್ಕೂ ಮುಂದಾಗಬೇಕೆAದು ಮನವಿ ಮಾಡಿದರು.
ಸಮಾರಂಭದಲ್ಲಿ ಡಾ.ಎನ್.ಎಸ್. ತಾರಾನಾಥ ಅವರಿಗೆ ‘ಡಾ.ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’, ಆರ್. ದೊಡ್ಡೆಗೌಡ ಕನ್ನಡ ಅರವಿಂದ ಪ್ರಶಸ್ತಿ, ನ. ನಾಗರಾಜಯ್ಯ ಅವರಿಗೆ ಕನ್ನಡ ಚಿರಂಜೀವಿ ಪ್ರಶಸ್ತಿಯನ್ನು ಪ್ರದಾನ ಮಾಡ¯ಯಿತು. ಸಂತೋಷಕುಮಾರ್ ಮೆಹೆಂದಳೆ ಅವರ ‘ವೈಜಯಂತಿಪುರ’ಕ್ಕೆ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ ಡಾ. ಸಂಧ್ಯಾ ಅವರ ‘ಪ್ರಾಚೀಚೀನ ಕರ್ನಾಟಕದ ಮಹಿಳಾ ಲೋಕ’, ಅಂಜನಾತನಯ ಅವರ ‘ಶ್ರೀ ತೆನ್ಮೋೞಿ ಕೈಸನ್’ ಪುಸ್ತಕಗಳಿಗೆ ಸಮಾಧನಕರ ಬಹುಮಾನ ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಹಟ್ಣ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಸರ್ಕಾರಿ ಶಾಲೆ ಬಹುಮಾನ ನೀಡಲಾಯಿತು, ಸಪ್ನದ ಮಾಲೀಕರಾದ ನಿತನ್ ಷಾ ಅವರನ್ನು ಗೌರವಿಸಲಾಯಿತು.
ಬಾ.ಹ. ಉಪೇಂದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಮ. ಚಂದ್ರಶೇಖರ ಸ್ವಾಗತಿಸಿದರು ಮತ್ತು ಕರ್ನಾಟಕ ಕಾರ್ಮಿಕಲೋಕದ ಬಿ.ವಿ.ರವಿಕುಮರ್ ವಂದಿಸಿದರು. ಹಿರಿಯ ವಿದ್ವಾಂಸ ಹಂಪನಾ, ಡಾ.ಮಲ್ಲೇಪುರಂ ವೆಂಕಟೇಶ್, ಡಾ. ವಿಜಯಾ, ಡಾ. ಡಿ.ವಿ. ಗುರುಪ್ರಸಾದ್, ಎಂ.ಎಸ್. ನರಸಿಂಹಮೂರ್ತಿ, ವ.ಚ.ಚನ್ನೇಗೌಡ ಸೇರಿದಂತೆ ಹಲವು ಸಾಹಿತಿಗಳು, ಕನ್ನಡ ಹೋರಾಟಗಾರರು ವಿವಿದ ಕ್ಷೇತ್ರದವರು ಇದ್ದರು.