*ಯಶವಂತಪುರ ಸರ್ಕಾರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ*

varthajala
0

ಬೆಂಗಳೂರು : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯಶವಂತಪುರ ರೈಲ್ವೆ ಸ್ಟೇಷನ್ ಸಮೀಪ, ಸಂತೆ ಬೀದಿಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ  ರಾಜ್ಯೋತ್ಸವವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

   ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ಉತ್ತರ ಬಿಜೆಪಿ ಕಾರ್ಯಕಾರಣಿ ಸದಸ್ಯರು ಹಾಗೂ ಸಮಾಜ ಸೇವಕರು ಆದ ಡಾ. ಜಿ. ಎಸ್. ಚೌಧರಿ, ಶ್ರೀ ಮಲೈ ಮಹದೇಶ್ವರ ಬೆಟ್ಟದ  ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಸ್ವಾಮಿ, ಸಿ ಜಿ ಐ  ಕಂಪನಿಯ ಪ್ರತಿನಿಧಿಗಳಾದ  ಸಿಎಸ್ಆರ್ ಟೀಮ್ ನ ಪ್ರಮುಖರು ರೂಪ ಎಸ್.,  ಕನ್ಸಲ್ಟೆಂಟ್ ಡೆಲಿವರಿ ಮ್ಯಾನೇಜರ್ ಸುವೆಂದು ಮಿಶ್ರಾ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಈ ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಣವನ್ನು ಕಲಿಸಲು   ಉಪಯುಕ್ತಕರವಾಗಿರಲಿ ಎಂಬ ಉದ್ದೇಶದಿಂದ ಮೂರು ಗ್ರೀನ್ ಬೋರ್ಡ್ ಗಳನ್ನು ಹಾಗೂ ಒಂದು ಸ್ಪೀಕರ್ ಸೆಟ್ ಅನ್ನು ಸಿ ಜಿ ಐ ಕಂಪನಿ ವತಿಯಿಂದ ಉಡುಗೊರೆಯಾಗಿ  ಪ್ರಯೋಜಿಸಲಾಯಿತು. ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಡಾ. ಜಿ.ಎಸ್. ಚೌಧರಿ ಅವರಿಂದ  ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. 

 ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರುಗಳಾದ ಮಹಾಲಕ್ಷ್ಮೀ, ಹಿರಿಯ ಶಿಕ್ಷಕರಾದ ನಾಗರತ್ನ, ಪ್ರಭಾ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)