ಕೋಲಾರ ಜಿಲ್ಲೆ:ಮುಳುಬಾಗಿಲು:ಕೆ.ಸಿ.ರೆಡ್ಡಿ ಸರೋಜಮ್ಮ ಫೌಂಡೇಶನ್ ವತಿಯಿಂದ ಇಂದು ಮುಳಬಾಗಿಲು ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಗಳಿಗೆ ವಿಜ್ಞಾನ ಕಿಟ್ ಗಳನ್ನು ಶ್ರೀ ಮಾರುತಿ ಪ್ರೌಢ ಶಾಲೆಯಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಂಗರಾಮಯ್ಯು ರವರು,ನಗರ ಸಭಾ ಸದಸ್ಯರಾದ ಶ್ರೀ ರಾಜಶೇಖರ್, ಕೆ.ಸಿ.ರೆಡ್ಡಿ ಸರೋಜಮ್ಮ ಸಂಸ್ಥೆಯ ವತಿಯಿಂದ ಶ್ರೀಮತಿ ವಸಂತ ಕವಿತ ರವರು,ಗೋಪಾಲ್,ರಮೇಶ್,ಚಂಗಪ್ಪ ರವರು ಭಾಗವಹಿಸಿದ್ದರು.ಮಾರುತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕದಾದ ಶ್ರೀಧರ್ ಬಾಬು,ಶಿಕ್ಷಣ ಸಂಯೋಜಕರಾದ ಶ್ರೀ ಕಾರ್ತಿಕ್,ಬಿ.ಆರ್.ಪಿ ನಾರಾಯಣಸ್ವಾಮಿ ಹಾಗೂ ವಿವಿಧ ಶಾಲೆಗಳಿಂದ ಶಿಕ್ಷಕರು ಭಾಗವಹಿಸಿದ್ದರು.
ಕೆ.ಸಿ.ರೆಡ್ಡಿ ಸರೋಜಮ್ಮ ಫೌಂಡೇಷನ್ ಅಧ್ಯಕ್ಷೆ ಶ್ರೀಮತಿ ವಸಂತ ಕವಿತರವರು ಮಾತನಾಡಿ ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ ಸಾಧ್ಯ .
ಗ್ರಾಮಿಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅವರಿಗೂ ಸಹ ಉತ್ತಮ ಶಿಕ್ಷಣ ಸೌಲಭ್ಯ ಲಭಿಸಬೇಕು ಅದ್ದರಿಂದ ಕೆ.ಸಿ.ರೆಡ್ಡಿ ಸರೋಜಮ್ಮ ಫೌಂಡೇಷನ್ ವತಿಯಿಂದ ವಿಜ್ಞಾನ ಕಿಟ್ ಗಳನ್ನು ವಿತರಿಸಲಾಗಿದೆ.
ದೇಶದ ಬಹುತೇಕ ವಿಜ್ಞಾನಿಗಳು ಗ್ರಾಮಿಣ ಪ್ರದೇಶದಿಂದ ಬಂದಿದ್ದಾರೆ. ರಾಜ್ಯದಲ್ಲಿ ಕೋಲಾರ ಜಿಲ್ಲೆ ವಿಜ್ಞಾನಿಗಳ ತವರೂರು ಎಂದರೆ ತಪ್ಪಾಗಲಾರದು ಎಂದು ಹೇಳಿದರು
ಈ ಸಂದರ್ಭದಲ್ಲಿ BEO ರವರಾದ ಶ್ರೀ ಗಂಗ ರಾಮಯ್ಯ ನವರು ಮಾತನಾಡಿ ವಿಜ್ಞಾನ ವಿಷಯವನ್ನು ಪ್ರಯೋಗಗಳ ಮೂಲಕ ಬೋಧಿಸಿದರೆ ಮಾತ್ರ ಪರಿಕಲ್ಪನೆಗಳು ಮಕ್ಕಳಿಗೆ ಅರ್ಥವಾಗುತ್ತದೆ ಹಾಗೂ ಕಲಿಕರ ಆಸಕ್ತಿದಾಯಕವಾಗಿಯೂ ಇರುತ್ತದೆ ಎಂದು ಹೇಳಿದರು. ಎಲ್ಲಾ ಶಿಕ್ಷಕರು ಈ ಕಿಟ್ ಗಳ ಸದುಪಯೋಗ ಪಡಿಸಿಕೊಂಡು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು.