ವಾರ್ತಾಜಾಲ, ಶಿಡ್ಲಘಟ್ಟ : ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ಕೆ ಮಾಡಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. 2023ನೇ ಸಾಲಿನಲ್ಲಿ ಒಟ್ಟು15 ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಕಾಚನಾಯಕನಹಳ್ಳಿ ಗ್ರಾಮದ ರೈತ ನಿವಾಸಿಗಳಾದ ಚಿಕ್ಕಪ್ಪಯ್ಯ ಮತ್ತು ವೆಂಕಟಮ್ಮ ನವರ ಮಗನಾದ ಬಾಲಚಂದ್ರ ಕೆಸಿ ಅವರು ಸುಮಾರು ಏಳು ವರ್ಷಗಳಿಂದ ಇಂಡೋ ಏಷಿಯನ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿತ್ತಿದ್ದು, ಇವರ ಸಾಹಿತ್ಯದ ಕ್ಷೇತ್ರದ ಕೊಡುಗೆಯನ್ನು ಗುರ್ತಿಸಿ ಕಲಾ ಸಿರಿ ಬಳಗದ ವತಿಯಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ವಿತರಿಸುತ್ತಿದ್ದಾರೆ.