ಅಟ್ಟೂರು ಗ್ರಾಮ ದೇವತೆ ಶ್ರೀ ಆದಿಶಕ್ತಿ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಆಚರಣೆ

varthajala
0

ಬೆಂಗಳೂರಿನ ಯಲಹಂಕ ಸಮೀಪದ ಅಟ್ಟೂರು ಲೇಔಟ್ ನಲ್ಲಿರುವ ಗ್ರಾಮ ದೇವತೆ ಶ್ರೀ ಆದಿಶಕ್ತಿ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ''ಶರನ್ನವರಾತ್ರಿ ಮಹೋತ್ಸವ ಮತ್ತು ದಸರಾ ಸಾಹಿತ್ಯ ಸಂಗೀತ ನೃತ್ಯೋತ್ಸವ - 2023” ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಒಂಬತ್ತು ದಿನಗಳಲ್ಲಿಯೂ ಅಮ್ಮನವರಿಗೆ ಅಷ್ಟೋತ್ತರ ಸಹಸ್ರನಾಮ, ಗಾಯತ್ರಿಹೋಮ, ಪ್ರತಿದಿನ 108 ಆಹುತಿಯಂತೆ 10 ದಿನ (ಬೆಳಿಗ್ಗೆ 6.00 ರಿಂದ 8.00 ಗಂಟೆಯವರೆಗೆ) ನಿತ್ಯವೂ ಒಬ್ಬ ಯಜಮಾನ ದಂಪತಿಗಳ ಆಧ್ವರ್ಯದಲ್ಲಿ, ಪೂಜಾ ಕಾರ್ಯವನ್ನು ಹಮ್ಮಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

ಪ್ರತಿ ದಿನ ಸಂಜೆ 7.15 ರಿಂದ 8.30 ರ ವರೆಗೆ ಹಿಂದೂಸ್ತಾನಿ ಸಂಗೀತ ಮತ್ತು ಆಧ್ಯಾತ್ಮಿಕ ಸತ್ಸಂಗ ನಂತರ  ಸರಣಿ – ಮಾನವ ಜೀವನ ಲಕ್ಷ್ಯ ಕಾರ್ಯಕ್ರಮವನ್ನು ವಿದೂಷಿ ಶ್ರೀಮತಿ ಮಮತಾ ವಿಶ್ವಾಮಿತ್ರ ಹಾಗೂ ಆಚಾರ್ಯ ವಿಶ್ವಾಮಿತ್ರರವರಿಂದ ನಡೆಸಿಕೊಡಲಾಗುತ್ತಿದೆ.




ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಮಂದಗೆರೆ ಕಲೆ-ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಸಮಸ್ತ ಅಟ್ಟೂರು ಲೇಔಟ್ ನಿವಾಸಿಗಳು ಹಾಗೂ ಅಟ್ಟೂರು ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುತ್ತಿರುವ ಮಹೋತ್ಸವದಲ್ಲಿ, ಶುಕ್ರವಾರದಂದು ವಿಶೇಷವಾಗಿ ಅಮ್ಮನವರಿಗೆ ಶೇಂಗಾ ಬೀಜಗಳಿಂದ ಸೀರೆಯನ್ನು ಉಡಿಸಿ, ಬಳೆಗಳಿಂದ ಕಿರೀಟವನ್ನು ಮಾಡಿ ಅಲಂಕರಿಸಲಾಗಿತ್ತು. ಖ್ಯಾತ ಸಮಾಜ ಸೇವಕ ಹಾಗೂ ಗೋ ರಕ್ಷಾ ಸಂದೇಶವ ಸಾರುವ ಧೀಕ್ಷೆ ತೊಟ್ಟಿರುವ ಉದ್ಯಮಿ ಮಹೇಂದ್ರ ಮುನೋತ್ ಜೈನ್ ಮಕ್ಕಳಿಗೆ ನೋಟುಪುಸ್ತಕಗಳನ್ನು ವಿತರಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ನಿರ್ವಹಣಾಗಾರರು ವಿನೋದ್, ರಾಮ್ ಕುಮಾರ್, ಸಮಾಜ ಸೇವಕರುಗಳಾದ  ಶ್ರೀನಿವಾಸ್  ವಿ., ವಿದ್ಯಾರಣ್ಯಪುರ ಶ್ರೀಕಾಂತ್, ಶ್ರೀಮತಿ ರಾಧಾ ಅರುಣ, ಆಟೋ ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)