ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ ಮತ್ತು ಬೆಂಗಳೂರಿನ ಅರಳುಮಲ್ಲಿಗೆ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರಾಧ್ಯಾಪಕ- ಲೇಖಕ- ಸಂಘಟಕ ಡಾ. ಆರ್. ವಾದಿರಾಜರವರ ಅವರ ಸಾಹಿತ್ಯಕ ಸೇವೆಯನ್ನು ಗುರುತಿಸಿ ಮತ್ತು ಅವರ 50ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಕ್ತಿ ಸಾಹಿತ್ಯ ಪ್ರಶಸ್ತಿ 2023 ಪ್ರಧಾನವನ್ನು ನಗರದ ಜೆಸಿ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಶ್ರೀಯುತರು ರಚಿಸಿರುವ ಹಯವದನ ಕೃತಿಯನ್ನು ಖ್ಯಾತ ಹರಿದಾಸ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಡಾ. ಆರ್. ವಾದಿರಾಜು ಅವರು ಅಧ್ಯಯನ ಅಧ್ಯಾಪನದಿಂದ ಜನಪ್ರಿಯರಾದವರು.ಸಹೃದಯತೆ ಅವರ ಒಂದು ಗುಣ ವಿಶೇಷ. ದಾಸ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರ .ವಾದಿರಾಜರ ಕುರಿತು ಕುಪ್ಪಂನ ದ್ರಾವಿಡ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಹಲವಾರು ಕೃತಿ ರಚನೆ ನಡೆಸಿರುವ ಶ್ರೀಯುತರು ಟಿಟಿಡಿ ಸಪ್ತಗಿರಿ ಪತ್ರಿಕೆಯ ಸಂಪಾದಕ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿದೆ .ಸಂಘಟಕರಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಾಂಸ್ಕೃತಿಕ ವಲಯದಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿರುವ ವಾದಿರಾಜರಿಗೆ ಇದೀಗ 50ರ ಹುಟ್ಟು ಹಬ್ಬದ ಸಂಭ್ರಮ. ಅರಳುಮಲ್ಲಿಗೆ ಪ್ರತಿಷ್ಠಾನದಿಂದ ಭಕ್ತಿ ಸಾಹಿತ್ಯ ಪ್ರಶಸ್ತಿ ಅವರ ಮುಕುಟಕ್ಕೆ ಮತ್ತೊಂದು ಗರಿ ಎಂದು ಅಭಿಪ್ರಾಯಪಟ್ಟರುಯೋಗ ಯುನಿವರ್ಸಿಟಿ ಆಫ್ ಅಮೆರಿಕಸ್ ಉಪಕುಲಪತಿ ಡಾ. ರಾಜಶೇಖರ ರೆಡ್ಡಿ ಪ್ರಶಸ್ತಿ ಪ್ರಧಾನ ಮಾಡಿದರು. ಖ್ಯಾತ ಕಾದಂಬರಿಕಾರ ಡಾ. ಸುರೇಶ ಪಾಟೀಲ, ಹರಿದಾಸ ಸಂಶೋಧಕ ಸೇಡಂನ ಡಾ. ವಾಸುದೇವ ಅಗ್ನಿಹೋತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್ ನ ಉಪಾಧ್ಯಕ್ಷ ಡಾ ಯೋಗಿ ದೇವರಾಜು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿಶೇಷ ನಾಟಕ ಪ್ರದರ್ಶನ ನೊಣವಿನಕೆರೆ ರಾಮಕೃಷ್ಣಯ್ಯ ನಿರ್ದೇಶನದ ಡಾ.ರತ್ನ ನಾಗರಾಜ್ ರಚನೆಯ ಸಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಕಲಾವಿದರಿಂದ ಗಾಂಧಿ -ಮೌನ -ಯಾನ ನಡೆಯಿತು .