ನಾವೆಲ್ಲ ಕಂಡಂತೆ ಜನಪ್ರಿಯ ಹಬ್ಬ ಕೃಷ್ಣಾಷ್ಟಮಿ

varthajala
0

 ಕೃಷ್ಣಾಷ್ಟಮಿನಾವೆಲ್ಲ ಕಂಡಂತೆ ಜನಪ್ರಿಯ ಹಬ್ಬ.ತಿಂಡಿಗಳ ಸಾಲು ಚಿಕ್ಕಂದಿನಲ್ಲಿ ನಮ್ಮ ಅಂದರೆ ಮಕ್ಕಳ ಆಕರ್ಷಣೆ. ಈ ಹಬ್ಬವನ್ನು ತಿಥಿ ಹಾಗೂ ನಕ್ಷತ್ರದ ಆಧಾರದ ಮೇಲೆ ಬೇರೆ ಬೇರೆ ದಿನ ಆಚರಿಸುವುದು ರೂಡಿಯಲ್ಲಿ ಇದೆ.

 ಈ ದಿನ ಉಪವಾಸ ಇರುವವರು ಇದ್ದಾರೆ.ಹಬ್ಬದ ಅಡಿಗೆ ಮಾಡುವವರು ಇದ್ದಾರೆ.ಇದು ಅಯ್ಯಂಗಾರರ ಅಚ್ಚುಮೆಚ್ಚಿನ ಹಬ್ಬ.ಕೃಷ್ಣನ ಹೆಜ್ಜೆ ಮನೆಯ ಪ್ರಮುಖ ದ್ವಾರದಿಂದ ಪೂಜಾ ಗೃಹದ ವರೆಗೂ ಬರೆಯುತ್ತಾರೆ.ಇದಕ್ಕೆ ಅಚ್ಚು ಬಳಸುವವರು ಇದ್ದರೆ, ಪುಟ್ಟ ಮಕ್ಕಳ ಹೆಜ್ಜೆ ಗುರುತು ಮಾಡುವವರು ಇದ್ದಾರೆ.ನಮ್ಮ ಅಜ್ಜಿ ನೈವೇದ್ಯದ ಜೊತೆಯಲ್ಲಿ ಶುಂಠಿ,ತುಪ್ಪ, ಬೆಲ್ಲ ಕಲೆಸಿ ಇಡುತ್ತಿದ್ದರು.



ಈ ದಿನ ಮೊಸರು ಗಡಿಗೆ ಒಡೆಯುವುದು ಉತ್ತರ ಭಾರತದ ಸಂಪ್ರದಾಯ.ಇದು ಈ ನಡುವೆ ನಮ್ಮಲ್ಲೂ ಬಳಕೆಗೆ ಬಂದಿದೆ.

ಮಕ್ಕಳ ಕೃಷ್ಣ ವೇಷಧಾರಣೆಯ ಸ್ಪರ್ಧೆ ಕೂಡ ನಡೆಯುತ್ತದೆ.ನಾನೂ ಕೂಡ ಚಿಕ್ಕಂದಿನಲ್ಲಿ ಯಶೋದೆಯ ವೇಷ ಹಾಕಿದ್ದೆ.

ಒಟ್ಟಿನಲ್ಲಿ ಕೃಷ್ಣಾಷ್ಟಮಿ ಜನಮನದ ಹಬ್ಬ.


ಆಲದೆಲೆಯ ಮೇಲೆ ಮಲಗಿರುವ ಬಾಲಕೃಷ್ಣ.ಅಮ್ಮನ ಪುಸ್ತಕದಿಂದ ಬಿಡಿಸಿದ್ದು.

Article & Pic. by Radhika GN

7019990492

Post a Comment

0Comments

Post a Comment (0)