ಆಂಧ್ರ ಗಡಿಯಲ್ಲಿನ ಕನ್ನಡಿಗರ ಮಕ್ಕಳಿಗೆ ಪ್ರೌಢಹಂತದ ಗುಣಮಟ್ಟದ ಶಿಕ್ಷಣ ನೀಡಿದ ಶಿಕ್ಷಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ರೋಣ ಶಾಸಕ ಜಿ ಎಸ್ ಪಾಟೀಲ ಹೇಳಿದರು.
ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಶನಿವಾರ ಆಂಧ್ರಗಡಿಯ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿಗೆ ಡಾ ರಾಧಾಕೃಷ್ಣನ್ ರಾಷ್ಟಿçÃಯ ಪ್ರಶಸ್ತಿ ನೀಡಿ ಮಾತನಾಡಿದರು
ಆಂಧ್ರಗಡಿಯಲ್ಲಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಕನ್ನಡ ಮಾಧ್ಯಮದ ಸರ್ಕಾರಿ ಪ್ರೌಢಶಾಲಾಮುಖ್ಯಶಿಕ್ಷಕ ಸಾಹಿತಿ ಸಂಸ್ಕತಿ ಚಿಂತಕ ಶ್ರೀನಿವಾಸಮೂರ್ತಿ ಅವರು ಚಳ್ಳಕೆರೆ ತಾಲೂಕಿನ ಆಂಧ್ರಗಡಿಯAಚಿನಲ್ಲಿರುವ ಗಡಿ ಗ್ರಾಮ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಪ್ರತಿಭಾ ಅಕಾಡೆಮಿಯ ರಾಷ್ಟಿçಯ ಮಟ್ಟದ ಪ್ರತಿಭಾ ಪರೀಕ್ಷೆಗಳನ್ನು ಏರ್ಪಡಿಸುವ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯನ್ನು ಉಂಟುಮಾಡಲುಇವರು ತೆಗೆದುಕೊಂಡ ಕ್ರಮಗಳನ್ನು ಮೆಚ್ಚಿ ಇವರು ಗಡಿಯ ಶಾಲೆಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗಣಿತ ವಿಜ್ಞಾನ ಸೇರಿದಂತೆ ಸಾಹಿತ್ಯ ಅಭ್ಯಾಸಕ್ಕೆ ತೆಗೆದುಕೊಂಡ ಕ್ರಮಗಳಿಗೆ ಬೆಂಗಳೂರಿನ ಕರ್ನಾಟಕ ಪ್ರತಿಭಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದರು
ಸAದರ್ಭದಲ್ಲಿ ನವಲಗುಂದ ಶಾಸಕ ಎಚ್ ಕೋನರೆಡ್ಡಿ, ಬೆಂಗಳೂರಿನ ಪ್ರತಿಭಾ ಅಕಾಡೆಮಿಯ ಅಧ್ಯಕ್ಷ ಶಂಕರ ಪಾಟೀಲ,ಶಿಕ್ಷಣತಜ್ಞ ಪುತ್ತೂರಾಯ ರಾಜ್ಯದ ವಿವಿಧೆಡೆಯ ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು
ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಶನಿವಾರ ಆಂಧ್ರಗಡಿಯ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿಗೆ ಡಾ ರಾಧಾಕೃಷ್ಣನ್ ರಾಷ್ಟಿçÃಯ ಪ್ರಶಸ್ತಿ ನೀಡಿ ಗೌರವಿಸಲಾಯಿತು