ಮಕ್ಕಳಿಗೆ ಪರೀಕ್ಷೆ ಭಯ ಹೋಗಬೇಕು, ಹಬ್ಬದಂತೆ ಪರೀಕ್ಷೆ ಬರೆಯಬೇಕು

varthajala
0

ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಡೊಡ್ಡದು

ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಭಾರತರತ್ನ ಡಾ||ಎಸ್.ರಾಧಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ

ಉದ್ಘಾಟನೆಯನ್ನು ಶಾಸಕರುಗಳಾದ ಜಿ.ಎಸ್.ಪಾಟೀಲ್ ರವರು, ಎನ್.ಹೆಚ್ ಕೋನರೆಡ್ಡಿರವರು,  ಡಿ.ಎಸ್.ಮ್ಯಾಕ್ಸ್  ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ಪಿ.ದಯಾನಂದರವರು, ಶಿಕ್ಷಣ ತಜ್ಞರಾದ ಕೆ.ಪಿ.ಪುತ್ತೂರಾಯರವರು, ಕೆಆರ್ ಐ.ಡಿ.ಎಲ್.ಸಂಸ್ಥೆಯ ಬಸವರಾಜ್ ರವರು, ಪತ್ರಕರ್ತರಾದ ರಮೇಶ್ ಸುರ್ವೆಯವರು, ಉತ್ತರ ಕರ್ನಾಟಕ ನಾಗರಿಕರ ಸಂಸ್ಥೆಯ ಜವಳಿ, ಜೇವರ್ಗಿ ಯುವ ನಾಯಕ ಮಲ್ಲನಗೌಡ ಪಾಟೀಲ್, ಗದಗ್ ಜಿಲ್ಲಾ ಕಾಂಗ್ರಸಾ ಮುಖಂಡರಾದ  ಶಂಕರಗೌಡ ಪಾಟೀಲ್  ಮತ್ತು ಕರ್ನಾಟಕ ಪ್ರತಿಭಾ ಅಕಾಡೆಮಿ  ಅಧ್ಯಕ್ಷರಾದ ಶಂಕರ್ ಪಾಟೀಲ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕರಾದ ಜಿ.ಎಸ್.ಪಾಟೀಲ್ ರವರು ಮಾತನಾಡಿ ಸಮಾಜಕ್ಕೆ ಗೌರವ ತಂದುಕೊಟ್ಟ ಮಹಾನ್ ವ್ಯಕ್ತಿ ಸರ್ವಪಲ್ಲಿ ರಾಧಕೃಷ್ಣನ್ ರವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆ ಮಾಡುತ್ತಿದ್ದೇವೆ.

ಇಂದು ಶಿಕ್ಷಕರ ಪಾತ್ರ ಡೊಡ್ಡದು, ರಾಷ್ಟ್ರ ಕಟ್ಚುವಲ್ಲಿ ಮತ್ತು ಬೆಳವಣಿಗೆ ಶಿಕ್ಷಕರ ಮಾರ್ಗದರ್ಶನ ಮುಖ್ಯ. ರಾಧಕೃಷ್ಣನ್ ರವರು ಇತಿಹಾಸ ಯುವ ಪೀಳಿಗೆ ತಿಳಿಯಬೇಕು.

ಶಿಕ್ಷಕರು ಸಮಾಜ ಉತ್ತಮ ನಿರ್ಮಾಣ ಮಾಡುವ ಶಿಲ್ಪಿಗಳು ಎಂದು ಹೇಳಿದರು. 

ಕೆ.ಪಿ.ಪುತ್ತೂರಾಯರವರು ಮಾತನಾಡಿ ಅನ್ನ ಕೊಟ್ಟವನು, ಅಕ್ಷರ ಕಲಿಸಿಕೊಟ್ಟವರು ಸ್ವರ್ಗ ಹೋಗುತ್ತಾರೆ , ಶಿಕ್ಷಕರು ಆತ್ಮಭಿಮಾನದಿಂದ ಭೋಧನೆ ಮಾಡಬೇಕು ಮತ್ತು ಮಕ್ಕಳ ಪೇರಣ ಸ್ಯಾಮರ್ಥ್ಯವನ್ನು ಗುರುತಿಸುವ ಕೆಲಸ ಗುರುಗಳು ಮಾಡಬೇಕು.


ಗುರುಗಳು ಶೇಷ್ಠ ವ್ಯಕ್ತಿಗಳು, ಅವರಿಗೆ ಜಾತಿ, ಧರ್ಮವಿಲ್ಲ, ಜ್ಞಾನವೇ ಅವರಿಗೆ ಸಂಪತ್ತು.

ವಿದ್ಯಾರ್ಥಿಗಳನ್ನು ಕಂಡರೆ ಗುರುಗಳ ಭಯಪಡುವ ಪರಿಸ್ಥಿತಿ ಇಂದು ಇದೆ. ಗುರು ಮತ್ತು ಶಿಷ್ಯೆ ನಡುವೆ ಉತ್ತಮ ಸಂಭಂದ ಮೂಲಕ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು. ಅಧ್ಯಕ್ಷರಾದ ಶಂಕರ್ ಪಾಟೀಲ್ ರವರು ಮಾತನಾಡಿ ಕರ್ನಾಟಕ ಪ್ರತಿಭಾ ಅಕಾಡೆಮಿ ಕಳೆದ 20ವರ್ಷಗಳಿಂದ ಉತ್ತಮ ಶಿಕ್ಷಕರನ್ನ ಗುರುತಿಸಿ, ಸನ್ಮಾನಿಸಲಾಗುತ್ತಿದೆ.


ಪ್ರಜ್ಞಾವಂತ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಕರ ಮಾರ್ಗದರ್ಶನ ಮಕ್ಕಳಿಗೆ ಬೇಕು.  ತಂದೆ, ತಾಯಿ ಮತ್ತು ಶಿಕ್ಷಕರನ್ನ  ಮಾತ್ರ ಸಮಾಜದಲ್ಲಿ ದೇವರ ಸಮಾನವಾಗಿ  ಸಮಾಜ ನೋಡುತ್ತದೆ. 2001ರಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಗದಗ್ ಜಿಲ್ಲೆಯಲ್ಲಿ  ಆರಂಭವಾಯಿತು ನಂತರ 2002ರಲ್ಲಿ ಬೆಂಗಳೂರಿನಲ್ಲಿ ಕಛೇರಿ ಆರಂಭಿಸಿ, ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೂರ್ವ ತಯಾರಿಗೆ ಮಕ್ಕಳಿಗೆ  ಉಚಿತವಾಗಿ ತರಭೇತಿ ಆಯೋಜಿಸಿಕೊಂಡು ಬರಲಾಗುತ್ತಿದೆ.

10ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮ ಸಂಘದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಭೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ 6ವಿಷಯಗಳು ಕುರಿತು ರಾಷ್ಟ್ರ ಮಟ್ಟದಲ್ಲಿ ಒಲಿಂಪಿಯಾಡ್ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.

ರಾಧಕೃಷ್ಣನ್ ಪ್ರಶಸ್ತಿಯನ್ನು 10ಜನ ಶಿಕ್ಷಕರಿಗೆ ಸನ್ಮಾನಿಸಲಾಗುತ್ತಿದೆ, 10ಪ್ರಾಂಶುಪಾಲರಿಗೆ ಹಾಗೂ 20ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು. ಮಕ್ಕಳಿಗೆ ಪರೀಕ್ಷೆ ಎಂಬ ಭಯ ಹೋಗಬೇಕು, ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಅಚರಣೆ ಮಾಡಲು ವಿದ್ಯಾರ್ಥಿಗಳನ್ನು ತಯಾರಿ ಮಾಡಲು ಕರ್ನಾಟಕ ಪ್ರತಿಭಾ ಅಕಾಡೆಮಿ ಸಹಕಾರ ನೀಡುತ್ತಿದೆ ಎಂದು ಹೇಳಿದರು.

Post a Comment

0Comments

Post a Comment (0)