ಗೌರಿ ಬಾರಮ್ಮ

varthajala
0

ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ದೊಡ್ಡ ಹಬ್ಬ. ಹಿಂದೂ ಸಂಪ್ರದಾಯದಲ್ಲಿ ಗೌರಿ ಹಬ್ಬ ಎಲ್ಲರಿಗೂ ಇದೆ.ಆದರೆ ಗೌರಿ ಕೂರಿಸುವ ಪದ್ಧತಿ ಎಲ್ಲರಿಗೂ ಇಲ್ಲ.ಚಿಕ್ಕ ಚಿಕ್ಕ ಊರುಗಳಲ್ಲಿ ಈಗಲೂ ಕೂಡ ಪುರೋಹಿತರ ಮನೆಗೇ ಗೌರಿ ಪೂಜೆಗೆ ಹೋಗುತ್ತಾರೆ. ದೇವಾಲಯ ಗಳಲ್ಲಿ ಗೌರಿ ಕೂರಿಸುವುದು ಇತ್ತೀಚೆಗೆ ಬಂದಿದ್ದೆ.

ನಾನು ಹೆಚ್ಚಾಗಿ ತರೀಕೆರೆಯಲ್ಲಿ ಗೌರಿ ಪೂಜೆಗೆ ಹೋಗುತ್ತಿದ್ದೆ.ಅದು ನನ್ನ ತಾಯಿ ಪ್ರಭಾವತಿ ಅವರ ತವರು.ಅಲ್ಲಿ ನಾನು ಹಾಗೂ ನನ್ನ ತಾಯಿ, ಅಜ್ಜಿ ಅಲ್ಲಿನ ಸುಬ್ರಹ್ಮಣ್ಯ ದೇವಾಲಯದ ಅರ್ಚಕರಾದ ರಾಮಕೃಷ್ಣ ಭಟ್ಟರ ಮನೆಗೆ ಗೌರೀ ಪೂ ಜೆಗೆ ಹೋಗುತ್ತಿದ್ದೆವು.ಬೆಳಿಗ್ಗೆ ೫ ರಿಂದಲೇ ಮೊದಲ ಪಂಕ್ತಿ ಪೂಜೆ ಶುರು.

 ಹಿರಿಯ ಹೆಂಗಸರು ಪೂಜೆಗೆ ಹೋಗಿದ್ದರೆ, ನಾವು ನಸುಕಿನಲ್ಲೇ ತಲೆಗೆ ನಾವೇ ಎ ರೆದುಕೊಂದು ಭಟ್ಟರ ಮನೆಗೆ ಹೋಗುತ್ತಿದ್ದೆವು.ಹಿರಿಯ ಹೆಂಗಸರ ಪೂಜೆ ಮುಗಿದ ನಂತರ ನಾವು ದೇವಿಗೆ ಅರಿಸಿನ, ಕುಂಕುಮ , ಅಲಂಕಾರ ದ ಗೌರಿ ಹತ್ತಿ ಹಾರ ಪೂಜಿಸಿ ಹಿರಿಯ ಮುತ್ತೈದೆಯರ ಕೈಲಿ ಬಲ ಕೈಗೆ ಪಟ್ಟೆದಾರ ಕಟ್ಟಿಸಿಕೊಳ್ಳಲು ಅನುವಾಗುತ್ತಿದ್ದೆವು. ಪಟ್ಟೆದಾರ ಎಂದರೆ ರೇಶಿಮೆ ದಾರ ,ಅಂಚಲ್ಲಿ ಕುಚ್ಚು ಇರುತಿತ್ತು.ನಂತರ ಮನೆಗೆ ಹಿಂದಿರುಗಿ ಭೋಜನ ಮಾಡಿ ಸಂಜೆಗೆ ನಮ್ಮ ವಯಸ್ಸಿನ ಹೆಣ್ಣು ಮಕ್ಕಳಿಗೆ ಬಾಗಿನ ನೀಡುತ್ತಿದ್ದವು.ನಂತರ ಗೌರಿ ಬಿಡುವ ಮುಂಚೆ ಭಟ್ಟರ ಮನೆಗೆ ಹೋಗಿ ಸೋಬಲಕ್ಕಿ ಇಡುತ್ತಿದ್ದೇವು.

ಇದು ಮದುವೆ ಆಗಿರದ ಹೆಣ್ಣು ಮಕ್ಕಳ ಗೌರಿ ಪೂಜೆಯ ವಿವರಣೆ.ಮದುವೆ ಆದವರು ಪೂರ್ತಿ ಪೂಜೆ ಹಾಗೂ ಮರು ದಿನ, ಮರು ಪೂಜೆ ಮಾಡಬೇಕು.ಹಾಗೂ ೧೬ ಬಾಗಿನ ಮದುವೆ ಆದ ವರ್ಷ ಕೊಡಬೇಕು.ನಂತರದ ವರುಷ ೨ ಬಾಗಿನ ಕೊಡುವರು.

ಒಟ್ಟಿನಲ್ಲಿ ಗೌರಿ ಎಲ್ಲ ಹೆಣ್ಣು ಮಕ್ಕಳಿಗೂ ಒಂದು ಸಿಜ್ನೇಚರ್ ಹಬ್ಬ.

ರಾಧಿಕಾ ಜಿ ಎನ್

೭೦೧೯೯೯೦೪೯೨

Post a Comment

0Comments

Post a Comment (0)