ಜುಮುಕಿಯ ಕಥೆ.

varthajala
0

*ಜುಮುಕ ಗಿರಾರೆ ಕರೆಲಿ ಕೇ ಬಜಾರ್ ಮೆ* ಈ ಹಾಡನ್ನು ನಾವೆಲ್ಲ ಕೇಳಿದ್ದೇವೆ.ಇದು ಜನಪ್ರಿಯ ಹಾಡು.ಚಿತ್ರದಲ್ಲಿ ಕಾಣಿಸಿರುವ ಜುಮುಕಿಗಳೆಲ್ಲ ನನ್ನ ಸ್ನೇಹಿತೆಯ ಕೈಚಳಕ.ಹಿಂದೆ ನನ್ನ ಅಜ್ಜಿಯ ಕಾಲದಲ್ಲಿ ಸಿಲ್ಕ್ ದಾರದ ಬಳೆಗಳು ಜನಪ್ರಿಯ.ಆಗ ಎಲ್ಲರೂ ಗಾಜಿನ ಬಳೆ ಧರಿಸುತ್ತಿದ್ದರು.ಆದರೆ ಸಿಲ್ಕಿನ ಜೂಮುಕಿ ಪ್ರಚಲಿತ ಇದ್ದಂತೆ ಕಾಣಲಿಲ್ಲ. ಏಕೆಂದರೆ ಆಗ ಕಿವಿಗೆ ಬೆಳ್ಳಿ ಅಥವಾ ಬಂಗಾರದ ಒಡವೆ ಧರಿಸುತ್ತಿದ್ದರು.

ಮಕ್ಕಳಾಗಲಿ, ದೊಡ್ಡವರು ಆಗಲಿ ಕಿವಿಗೆ ಬಂಗಾರ ಇರುತಿತ್ತು. ಈ ನಡುವೆ ೮-೧೦ ವರುಷಗಳಿಂದ ಸಿಲ್ಕ್ ದಾರದ ಆಭರಣ ಮತ್ತೆ ಚಾಲ್ತಿ ಗೆ ಬಂದಿದೆ. ಈಗ ತರಹೇವಾರಿ ಜುಮುಕೀ ಜೊತೆಯಲ್ಲಿ ವೈಟ್ ಮೆಟಲ್, ಬ್ಲಾಕ್ ಮೆಟಲ್, ಆಕ್ಸೈಡಿಸ್ಡ್, ಬೆಳ್ಳಿ, ಬಂಗಾರ, ಪೇಪರ್,ಪ್ಲಾಸ್ಟಿಕ್ ಇತ್ಯಾದಿ ವೆರೈಟಿ ಇವೆ.

ಹಬ್ಬ ಹರಿದಿನಗಳ ದಿನ ಬೆಳ್ಳಿ, ಬಂಗಾರದ ಜುಮೂಕೀ ಧರಿಸಿದರೆ, ಬೇರೆ ದಿನ ನಮ್ಮ ವಸ್ತ್ರಕ್ಕೇ ಮ್ಯಾಚ್  ಆಗುವ ಬೇರೆ ವೆರೈಟಿ ಜುಮುಕೀ ಧರಿಸಬಹುದು.ಸಿಲ್ಕ್ ದಾರದ ಜುಮೂಕಿ ಸೀರೆ, ಲಂಗ ದಾವಣಿ, ಹಾಗೂ ಇನ್ನಿತರೆ ರೇಷ್ಮೆ ವಸ್ತ್ರಗಳೊಂದಿಗೆ ಹೊಂದುತ್ತದೆ.
ಹೆಣ್ಣು ಮಕ್ಕಳ ಕತ್ತು ಕುಲುಕುವಾಗ ತೂಗುವ ಜುಮೂಕೀ ಅಂದವೇ ಅಂದ.ಜುಮುಕೀಗೆ ಹೊಂದುವ ಇತರೆ ಆಭರಣ ಧರಿಸಿದರೆ ನಮ್ಮಹೆಣ್ಣು ಮಕ್ಕಳು ಯಾವ ಸೆಲೆಬ್ರಿಟಿಗು ಕಡಿಮೆ ಇಲ್ಲ.
ದಯವಿಟ್ಟು ನೈಸರ್ಗಿಕ ಹಾಗೂ ಸ್ಥಳೀಯ ಆಭರಣಗಳಿಗೆ ಆದ್ಯತೆ ನೀಡಿ.
Vocal for local

Radhika GN

7019990492

Post a Comment

0Comments

Post a Comment (0)