ಸ್ವಾತಂತ್ರ್ಯ ಹೋರಾಟಗಾರರ ಸಂಸ್ಕರಣ ಅಚರಣೆ
ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚಿರಿತ್ರೆಯನ್ನು ಶಾಲೆ ಪಠ್ಯಪುಸ್ತಕದಲ್ಲಿ ಆಳವಡಿಸಬೇಕು.
ತುಮಕೂರು:ಸ್ವಾತಂತ್ರ್ಯ ಹೋರಾಟಗಾರರ ಸಂಸ್ಕರಣ ಸಮಿತಿ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಾದ ಗೋರರು ರಾಮಸ್ವಾಮಿ ಅಯ್ಯಂಗಾರ್ ಮತ್ತು ನಂಜುಂಡಪ್ಪ, ಗಂಗಪ್ಪರವರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಕರಣ ಅಚರಣೆ.
ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿರವರ ಮೊಮ್ಮಗಳಾದ ಶ್ರೀಮತಿ ವಸಂತ ಕವಿತಾರವರು ಮತ್ತು ಸಮಿತಿಯ ಅಮರನಾಥ್ ರವರು ಹಾಗೂ ಸ್ಥಳೀಯ ಹಿರಿಯ ನಾಗರಿಕರ ಜೊತೆಯಲ್ಲಿ ಸ್ವಾತಂತ್ರ್ಯ ಸ್ಮಾರಕಕ್ಕೆ ನಮಿಸಿ, ಸಸಿ ನೀರು ಹಾಕುವ ಮೂಲಕ ಸಂಸ್ಕರಣ ಅಚರಣೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಮತಿ ವಸಂತ ಕವಿತಾ ರವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ದ ಹೋರಾಟ, ತ್ಯಾಗ ಬಲಿದಾನ ಮಾಡಿದ ಮಾಡಿದ ಪರಿಣಾಮದಿಂದ ಇಂದು ನಮಗೆ ಸ್ವಾತಂತ್ರ್ಯ ಲಭಿಸಿತು.
ನಮ್ಮ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯಲ್ಲಿ ಶಾಲೆಯ ಪಠ್ಯಪುಸ್ತಕದಲ್ಲಿ ಆಳವಡಿಸಬೇಕು.
ಕರ್ನಾಟಕ ರಾಜ್ಯ ಮೊದಲ ಹೆಸರು ಮೈಸೂರು ಪ್ರಾಂತ್ಯವಾಗಿತ್ತು ಅದರೆ ಸ್ವಾತಂತ್ರ್ಯ ಬಂದ ನಂತರ ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಮೈಸೂರು ಚಲೋ 44ದಿನಗಳ ಪಾದಯಾತ್ರೆ ಪರಿಣಾಮದಿಂದ ರಾಜರ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ರಾಷ್ಟ್ರ ಸ್ಥಾಪನೆಗೆ ನಾಂದಿ ಹಾಡಲಾಯಿತು.
ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಗುಣಗಳನ್ನು ಇಂದಿನ ರಾಜಕಾರಣಿ ಮತ್ತು ಶಾಲೆಯ ಮಕ್ಕಳು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.