ಬಿ.ಎಂ. ಶ್ರೀನಿವಾಸಯ್ಯ ಸ್ಮರಣಾರ್ಥ ೮ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ

varthajala
0

 ಬಿ. ಎಂ. ಎಸ್ ಕಾನೂನು ಮಹಾವಿದ್ಯಾಲಯ, ಬೆಂಗಳೂರಿನಲ್ಲಿ ದಿನಾಂಕ ೦೪.೦೮.೨೦೨೩ ರಿಂದ ೦೬.೦೮.೨೦೨೩ರವರೆಗೆ ನಡೆಯಲಿರುವ ಮೂರು ದಿನಗಳ ಬಿ.ಎಂ. ಶ್ರೀನಿವಾಸಯ್ಯ ಸ್ಮರಣಾರ್ಥ ೮ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಅಂಗವಾಗಿ ಪ್ರಥಮ ದಿನವಾದ ೦೪.೦೮.೨೦೨೩ ರಂದು ಸಂಜೆ ೫.೦೦ ಗಂಟೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೌರವಾನ್ವಿತ ನ್ಯಾಯಾಧೀಶರು ಶ್ರೀ ಪಿ. ಎಸ್ ದಿನೇಶ್ ಕುಮಾರ್, ನ್ಯಾಯಾಧೀಶರು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಹಳೆಯ ವಿದ್ಯಾರ್ಥಿಗಳು ಬಿ ಎಂ ಎಸ್ ಸಿ ಎಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾನೂನು ವಿದ್ಯಾರ್ಥಿಗಳು ಈ ತರಹದ ಅಣಕು ನ್ಯಾಯಾಲಯ ಕಾರ್ಯಕ್ರಮಗಲ್ಲಿ ಆದಷ್ಟು ಹೆಚ್ಚು ಭಾಗವಹಿಸುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ  ಶ್ರೀ ವಿ. ಸುಧೀಶ್ ಪೈ, ಹಿರಿಯ ವಕೀಲರು, ಕರ್ನಾಟಕ ಉಚ್ಛ ನ್ಯಾಯಾಲಯ, ಇವರು ಕಾನೂನು ವೃತ್ತಿಯಲ್ಲಿ ನಿರತರಾದ ಎಲ್ಲಾ ಹಿರಿಯ ವಕೀಲರ ಕುರಿತು ಕೆಲವೊಂದು ವಿವರಗಳನ್ನು ನೀಡಿದರು.   

ಶ್ರೀ ಅವಿರಾಮ್ ಶರ್ಮ, ದತ್ತಿಗಳು ಬಿ ಎಂ ಎಸ್ ಇ ಟಿ, ಬಿ ಎಂ ಎಸ್ ಸಿ ಎಲ್, ಡಾ. ಬಿ. ಎಸ್ ರಾಗಿಣಿ ನಾರಾಯಣ್, ದಾನಿ ದತ್ತಿಗಳು ಬಿ ಎಂ ಎಸ್ ಇ ಟಿ, ಡಾ. ದಯಾನಂದ್ ಪೈ, ಆಜೀವ ದತ್ತಿಗಳು, ಬಿ ಎಂ ಎಸ್ ಇ ಟಿ, ಶ್ರೀ ಗೌತಮ್ ಕಲತ್ತೂರ್, ಚೇರ್ಮನ್, ಬಿ. ಎಂ ಎಸ್ ಆಸ್ಪತ್ರೆ ಟ್ರಸ್ಟ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಅನಿತಾ ಎಫ್. ಎನ್. ಡಿಸೋಜಾ ಇವರು ಗಣ್ಯರನ್ನು ಸ್ವಾಗತಿಸಿದರು.

Post a Comment

0Comments

Post a Comment (0)