ನವೋದಯ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಅದ್ದೂರಿ ಸಮಾವೇಶ

varthajala
0

 ಜವಾಹರ್ ನವೋದಯ ವಿದ್ಯಾಲಯ ದಲ್ಲಿ, ಹೈದರಾಬಾದ್ ವಲಯ ನವೋದಯ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಸಮಾವೇಶ ಅದ್ದೂರಿಯಾಗಿ ನಡೆಯಿತು.

5000 ಹೆಚ್ಚು ಜನ ಸೇರಿ ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

ಮುಖ್ಯ ಅತಿಥಿಗಳಾದ ನವೋದಯ ಸಮಿತಿ ಆಯುಕ್ತರಾದ ಶ್ರೀ ವಿನಾಯಕ ಗರ್ಗ್ ರವರು ಮಾತನಾಡಿ, "ಇಷ್ಟು ದೊಡ್ಡಮಟ್ಟದ ಸಮಾರಂಭ ನೋಡಿ ಖುಷಿಯಾಯಿತು.

ಯಾವ ರಾಜ್ಯದಲ್ಲೂ ಇಂತಹ ಅದ್ದೂರಿ ಸಮಾರಂಭ ಮಾಡಿರಲಿಲ್ಲ.

ನವೋದಯ ಕುಟುಂಬಕ್ಕೆ ಸೇರಿದ್ದು ನನ್ನ ಭಾಗ್ಯ ಎಂದರು.ಮುಂದೆ ಇಂತಹ ಸಮಾರಂಭಗಳು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.

ಹೈದರಾಬಾದ್ ವಲಯ ಉಪ ಆಯುಕ್ತರಾದ ಶ್ರೀ ಗೋಪಾಲಕೃಷ್ಣ ರವರು ಮಾತನಾಡಿ "ಭಾರತದ ನವೋದಯ ವಿದ್ಯಾಲಯ ಗಳಲ್ಲಿ ಹೈದರಾಬಾದ್ ವಲಯ ವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಿವೆ. ಕರ್ನಾಟಕದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹೆಚ್ಚು ಸಾಮಾಜಿಕ ಕಾರ್ಯ ಮಾಡುತ್ತಿವೆ ಎಂದರು. ವಿಜಯಪುರ ನವೋದಯ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಮಾತನಾಡಿ "ನವೋದಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ನಾವು ನವೋದಯ ವಿದ್ಯಾರ್ಥಿಯಾಗಿದ್ದು ನಮ್ಮ ಪುಣ್ಯ ಎಂದರು.

ಹಳೆ ವಿದ್ಯಾರ್ಥಿಗಳಾದ ಇಂಕಮ್ ಟ್ಯಾಕ್ಸ್ ಅಧಿಕಾರಿ, ಕಿರಣ್ಕುಮಾರ್,

ಪೊಲೀಸ್ ವರಿಷ್ಟರಾದ ಶರಣಪ್ಪ, ರಾಜಶೇಖರ್ ಜಾಕ, ಕೇಶವ್ ವಿನಯ್,ಸುಪ್ರೀತ್,ಹರೀಶ್,ಮಂಜುನಾಥ್, ನವೀನ್,ಸೋಮೇಶ್ ನವೋದಯ,ತಾರಾನಾಥ್, ಶ್ರೀನಿವಾಸ್ ಹಾಗೂ ಸಮಿತಿ ಅಧಿಕಾರಿಗಳು ಹಾಗೂ ಸಾವಿರಾರು ಹಳೆ ವಿದ್ಯಾರ್ಥಿಗಳು ಮತ್ತು ಕುಟುಂಬ ಭಾಗವಹಿಸಿದ್ದರು.

ಇಂಗ್ಲಿಷ್ ಶಿಕ್ಷಕರಾದ ಪ್ರಹ್ಲಾದ್ ಹಾಗೂ ಆರ್ ಜೆ ರಶೀದ್ ನಿರೂಪಿಸಿದರು,ಕರ್ನಾಟಕ, ಆಂದ್ರ,ತೆಲಂಗಾಣ,ಕೇರಳ ಅಂಡಮಾನ್,ಪುದುಚೇರಿ ರಾಜ್ಯಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ರಕ್ತದಾನ ಶಿಬಿರ ಉದ್ಯೋಗ ಮೇಳ ಏರ್ಪಡಿಸಿದ್ದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು.

Post a Comment

0Comments

Post a Comment (0)