ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ಬೆಂಗಳೂರು ವಿಭಾಗದ ಹೆಣ್ಣೂರು ಬ್ಲಾಕ್ ಅಧ್ಯಕ್ಷರಾಗಿ ಕುಮಾರ್ ಸ್ವಾಮಿ ರೆಡ್ಡಿ

varthajala
0

ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷರಾದ  ಡಾ.ಜಿ.ಸಂಜೀವ ರೆಡ್ಡಿ, ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ, ಸಚಿವರಾದ ಕೆ.ಜೆ.ಜಾರ್ಜ್ ರವರ ಶಿಫಾರಸ್ಸಿನ ಮೇರೆಗೆ, ಕರ್ನಾಟಕ ರಾಜ್ಯಾಧ್ಯಕ್ಷರಾದ ಡಿ.ಲಕ್ಷ್ಮೀ ವೆಂಕಟೇಶ್‌ ರವರ ಆದೇಶದ ಮೇರೆಗೆ, *ಇಂಟಕ್ ಬೆಂಗಳೂರು ವಿಭಾಗದ ಹೆಣ್ಣೂರ್ ಬ್ಲಾಕ್ ಅಧ್ಯಕ್ಷರಾಗಿ  ಕುಮಾರ್‌ಸ್ವಾಮಿ ರೆಡ್ಡಿ ನೇಮಕ ಮಾಡಲಾಗಿದೆ*

ಕಾಂಗ್ರೆಸ್ ಭವನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ಬೆಂಗಳೂರು ವಿಭಾಗದ ಹೆಣ್ಣೂರು ಬ್ಲಾಕ್ ಅಧ್ಯಕ್ಷರಾಗಿ ಕುಮಾರ್ ಸ್ವಾಮಿ ರೆಡ್ಡಿರವರಿಗೆ ಕಾಂಗ್ರೆಸ್ ಭವನ, ಇಂಟಕ್ ಕಛೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶೌಕತ್ ಅಲಿರವರು ನೇಮಕಾತಿ ಆದೇಶ ಪತ್ರವನ್ನು ನೀಡಿದರು.




ಇದೇ ಸಂದರ್ಭದಲ್ಲಿ *ಕುಮಾರ್ ಸ್ವಾಮಿ ರೆಡ್ಡಿರವರು* ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ, ಶ್ರಮಿಕರ ಪರ ಹೋರಾಟ ಮಾಡುವ ಪಕ್ಷ.

ಹೆಣ್ಣೂರು ಬ್ಲಾಕ್ ವಿಭಾಗದಲ್ಲಿ ಬರುವ ಕೂಲಿಕಾರ್ಮಿಕರು, ಶ್ರಮಿಕವರ್ಗದರನ್ನು ಸಂಘಟನೆ ಮಾಡಲಾಗುವುದು.

ಕಾಂಗ್ರೆಸ್ ಪಕ್ಷದ ಜನಪ್ರಿಯ ಯೋಜನೆಗಳಾದ 5ಗ್ಯಾರಂಟಿ ಯೋಜನೆಗಳನ್ನು ಶ್ರಮಿಕವರ್ಗದ ಕುಟುಂಬದ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಲಾಗುವುದು.

ಸಮಾಜಸೇವೆ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಜನಸೇವೆ ಮಾಡುವ ಹಂಬಲ ನನ್ನದು .

ಕೊವಿಡ್ ಲಾಕ್ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತವಾಗಿ ಆಹಾರ ಕಿಟ್ , ಔಷಧಿ ವಿತರಣೆ ಮಾಡಲಾಯಿತು.

 ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಪ್ರತಿವರ್ಷ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ.

ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪರಿಸರ ಜಾಗೃತಿ ಅಭಿಯಾನ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇನೆ.

ಬಡವರ, ನೊಂದವರ ಬಾಳಿಗೆ ಆಸರೆಯಾಗಿ ನಿಲ್ಲಬೇಕು ಎಂಬದು ನನ್ನ ಉದ್ದೇಶ.

ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಯಶ್ವಸಿಯಾಗಿ ಜನಪರ ಆಡಳಿತ ನೀಡಿ ಸಾಗುತ್ತಿದೆ .

ಶ್ರಮಿಕ ವರ್ಗದವರಿಗೆ ಆರ್ಥಿಕವಾಗಿ ಸಬಲರಾಗಲು ಇಂಟಕ್ ಸಂಘಟನೆ ಮೂಲಕ ಶ್ರಮಿಸುವುದಾಗಿ ಎಂದು ಹೇಳಿದರು.

Post a Comment

0Comments

Post a Comment (0)