ಬಾಕಿ ಇರುವ ಗೌರವಧನ ನೀಡಿ : ಅತಿಥಿ ಶಿಕ್ಷಕರ ಅಳಲು

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ : ಅತಿಥಿ ಶಿಕ್ಷಕರಿಗೆ ನಾಲ್ಕು ತಿಂಗಳ ಗೌರವ ಧನ ನೀಡದೇ ಇರುವುದರಿಂದ ನಮ್ಮ ಕುಟುಂಬದ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ ಎಂದು ಅಥಿತಿ ಶಿಕ್ಷಕಿ ಶಮಾ ಜ್ಹಡ್ ತಿಳಿಸಿದರು.


ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡರು. ನಾವು ಸುಮಾರು ನಾಲ್ಕೈದು ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿರುತ್ತೇವೆ. ನಮಗೂ ಕುಟುಂಬದ ಸಮಸ್ಯೆ,ವ್ಯವಹಾರಿಕ ಸಮಸ್ಯೆಗಳು ಇವೆ. ನಮಗೆ ಅಲ್ಪ ಸ್ವಲ್ಪ ಬರುವ ಗೌರವಧನವನ್ನೇ ನಂಬಿ ಜೀವನ ಮಾಡುವಂತಾಗಿದೆ, ಆದರೆ ನಮಗೆ ಸಮಯಕ್ಕೆ ಸರಿಯಾಗಿ ಗೌರವಧನ ನೀಡದೇ ಇರುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ,ಸರ್ಕಾರ ನಮ್ಮ ಕಷ್ಟ ಅರ್ಥ ಮಾಡಿಕೊಂಡು ನಮಗೆ ಆದಷ್ಟು ಬೇಗ ಗೌರವ ಧನ ನೀಡಿ, ಹಾಗೆಯೇ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನಕ್ಕೆ ಕಾಲೇಜಿನಿಂದಲೇ ನಮ್ಮನ್ನೂ ಪರಿಗಣಿಸಿ, ನಮಗೂ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಮಕ್ಕಳ ಭವಿಷ್ಯ ರೂಪಿಸುವ ಪ್ರೌಢಶಾಲೆ ಮತ್ತು ಕಾಲೇಜಿನ ಅತಿಥಿ ಶಿಕ್ಷಕರು ಸರ್ಕಾರದ ಅಲ್ಪ ಗೌರವಧನದಲ್ಲಿ ಜೀವನ ನಿರ್ವಹಣೆ ಮಾಡಲು ಸಾದ್ಯವಾಗದಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ನೀಡುತ್ತಿದ್ದೇವೆ. ರಾಜ್ಯಾದ್ಯಂತ ಎಲ್ಲಾ ಅತಿಥಿ ಶಿಕ್ಷಕರ ಪರಿಸ್ಥಿತಿಯೂ ನಮ್ಮಂತೆಯೇ ಆಗಿದೆ ಎಲ್ಲಾ ಅತಿಥಿ ಶಿಕ್ಷಕರಿಗೂ ಕಾಲಕಾಲಕ್ಕೆ ಗೌರವಧನ ನೀಡಿ ನಮ್ಮ ಕುಟುಂಬ ನಿರ್ವಹಣೆಗೆ ಸಹಕರಿಸಿ ಎಂದು ಎಸ್ ಚಂದ್ರಶೇಖರ್  ತಮ್ಮ ಅಳಲನ್ನು ತೋಡಿಕೊಂಡರು.

  • ಬಿಜೆಪಿ ಸರ್ಕಾರದಲ್ಲಿದ್ದಾಗ ಅತಿಥಿ ಶಿಕ್ಷಕರಿಗೆ 12,500,ಸಾವಿರದಿಂದ 28ಸಾವಿರದವರೆಗೆ ನಾವು ಅವರಿಗೆ ಗೌರವಧನ ನೀಡಿದ್ದೇವೆ.ಪ್ರೌಢಶಾಲಾ ಶಿಕ್ಷಕರಿಗೆ ನಾವು 10 ಸಾವಿರ ರೂಗೆ ಹೆಚ್ಚಿಸಿದ್ದೆವು. ಇದೀಗ ಜನವರಿ,ಪೆಬ್ರವರಿ, ಮಾರ್ಚ್ ಮತ್ತು ಜೂನ್ ತಿಂಗಳ ಗೌರವ ಧನ ನೀಡದೇ ಇರುವುದು ನಮಗೆ ಬೇಸರವಾಗಿದೆ.

- ವಿಧಾನ ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ

ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಶ್ರೀಧರ್ ಎನ್,ಅರ್ಚನಾ ಎಂ,ರಮೇಶ್ ಎಂ,ಮತ್ತಿತರರು ಇದ್ದರು.

Post a Comment

0Comments

Post a Comment (0)