ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರದಲ್ಲಿರುವ ಶ್ರೀ ಸೋಮೇಶ್ವರ ನ್ಯಾಯ ಬೆಲೆ ಅಂಗಡಿಗೆ ಶಾಸಕ ಎಸ್. ಮುನಿರಾಜು ದಿಡೀರ್ ಭೇಟಿಕೊಟ್ಟ ಸಂದರ್ಭದಲ್ಲಿ ಪಲಾನುಭವಿಗಳು ಈ ಅಂಗಡಿಯಲ್ಲಿ ಸೋಪು, ಕಾಳುಗಳು, ಉಪ್ಪು,ಹಾಗೂ ಇತರೆ ಪದಾರ್ಥಗಳನ್ನು ಖರೀದಿ ಮಾಡಿದರೆ ಮಾತ್ರ ಮೂರು ಕೆಜಿ ಅಕ್ಕಿ ಹಾಗೂ ಎರಡು ಕೆಜಿ ರಾಗಿ ಕೊಡುತ್ತಾರೆ. ಅಷ್ಟೇ ಅಲ್ಲದೇ ಸಂಜೆ ಬಂದರೆ ಏನೂ ಕೊಡಲ್ಲ ಇದಿನ್ನು ಪ್ರಶ್ನೆ ಮಾಡಿದರೆ ನಿಮ್ಮ ಕಾರ್ಡ್ ಕ್ಯಾನ್ಸಲ್ ಮಾಡುತ್ತೇನೆಂದು ಧಮ್ಕಿ ಹಾಕುತ್ತಾರೆ ನಾವು ಕೆಲಸ ಮಾಡಿಕೊಂಡು ಜೀವನ ಮಾಡುವ ಕೂಲಿ ಕಾರ್ಮಿಕರು ಅಂತ ಸಾರ್ವಜನಿಕರು ಶಾಸಕರಲ್ಲಿ ದೂರು ಹೇಳಿಕೊಂಡರು.
ಶಾಸಕರು ತೂಕ ಪರೀಕ್ಷೆ ಯನ್ನು ತೂಕ ಮಾಪನ ಮಾಡುವ ಅಧಿಕಾರಿಗಳಿಂದ ಮಾಡಿಸಿ ಸರಿಯಾದ ರೀತಿಯಲ್ಲಿ ಕೊಡಿ ಎಂದು ಅಲ್ಲಿಯ ಅಂಗಡಿ ಸಿಬ್ಬಂದಿಗೆ ಹೇಳಿದರು.
ಈ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆಳಿಗ್ಗೆಯಿಂದದಲೇ ಜನ ಸರತಿ ಸಾಲಿನಲ್ಲಿ ನಿಂತಿರುತ್ತಾರೆ ಪ್ರತಿ ನಿತ್ಯ ಈ ದೃಶ್ಯ ನಾನು ನೋಡುತ್ತಿರುತ್ತೇನೆ ಕೇವಲ ಒಂದು ಗಂಟೆಯಲ್ಲಿ ದಾಸ್ತಾನು ಖಾಲಿ ಆಗಿದೆ ನಾಳೆ ಬನ್ನಿ ಅಂತ ಹೇಳುತ್ತಾರೆಂಬ ದೂರಿನ ಹಿನ್ನಲೆಯಲ್ಲಿ ಡಿಡೀರ್ ಭೇಟಿ ನೀಡಲಾಗಿದೆ ಜೊತೆಗೆ ಸಂಬಂದಿಸಿದ ಅಧಿಕಾರಿಗಳು ನಮ್ಮ ಜೊತೆಗೆ ಇದ್ದಾರೆ ಎಂದು ಶಾಸಕ ಮುನಿರಾಜು ಸುದ್ಧಿಗಾರರಿಗೆ ತಿಳಿಸಿದರು.
ಅನೇಕ ಸಲ ಇಲ್ಲಿ ಬಂದಿದ್ದ ರಾಗಿಯನ್ನು ಕಾಳ ಸಂತೆಯಲ್ಲಿ ಮಾರಿದ್ದಾರೆಂದು ಸಾರ್ವಜನಿಕರು ನನ್ನ ಬಳಿ ಅನೇಕ ಸಾರಿ ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈ ಗೊಳ್ಳಿ ಎಂದು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಇಲ್ಲಿ ಸರ್ಕಾರ ಕೊಡುವ ಅಕ್ಕಿ ಹಾಗೂ ರಾಗಿಯನ್ನು ಉಚಿತವಾಗಿ ಕೊಡಬೇಕು ಅದು ಸಹ ತಿಂಗಳು ಪೂರ್ತಿ ಕೊಡಬೇಕು. ಇದು ನಿಯಮ ಆದರೆ ಇವರು ಇತರೆ ದಾಸ್ತಾನು ಪಡೆದರೆ ಮಾತ್ರ ಎಂದರೆ ಹಣ ಇಲ್ಲದವರು ಏನು ಮಾಡಬೇಕು ಇದೆಲ್ಲಾ ನಮ್ಮ ಕ್ಷೇತ್ರದಲ್ಲಿ ನಡೆಯಲು ಬಿಡಲ್ಲ ಈ ಬಗ್ಗೆಯೂ ಅಧಿಕಾರಿಗಳಿಗೆ ಹಾಗೂ ಆಹಾರ ಸಚಿವರ ಗಮನಕ್ಜೆ ತಂದು ಕ್ರಮ ಕೈ ಗೊಳ್ಳಲು ತಿಳಿಸುತ್ತೇನೆ ಅಲ್ಲದೆ ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡುವೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ದಿಡೀರ್ ಬೇಟಿ ಯನ್ನು ಎಲ್ಲಾ ಕಡೆಗೆ ಮಾಡುವೆ ಎಂದು ಶಾಸಕ ಮುನಿರಾಜು ಸುದ್ಧಿಗಾರರಿಗೆ ತಿಳಿಸಿದರು
ವರದಿ. ಎಂ ಶ್ರೀನಿವಾಸ್ ಕುಮಾರ್