ಬೆಂಗಳೂರು : ಜಾಲಹಳ್ಳಿ ಗ್ರಾಮದೇವತೆ ಶ್ರೀ ಮುತ್ಯಾಲಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಂಇಎಸ್ ರಸ್ತೆ, ಮುತ್ಯಾಲ ನಗರದಲ್ಲಿರುವ ದೇವಸ್ಥಾನದಲ್ಲಿ ಜುಲೈ 3 ಮತ್ತು 4 ರಂದು, ಎರಡು ದಿನಗಳ ಕಾಲ 49ನೇ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸೋಮವಾರ ಬೆಳಗ್ಗೆ ದೇವಿಯವರಿಗೆ ಅಭಿಷೇಕವನ್ನು ನೇರವೇರಿಸಿ ನಂತರದಿ ನವಚಂಡಿಕಾ ಹೋಮವ ಮಾಡಿ ಮಧ್ಯಾಹ್ನದ ವೇಳೆಗೆ ಪೂರ್ಣಾಹುತಿ ಸಲ್ಲಿಸಿ ಮಹಾಮಂಗಳಾರತಿ, ತೀರ್ಥ ಪ್ರಸಾದದ ವಿನಿಯೋಗ ಸೇವೆಯನ್ನು ಮುತ್ಯಾಲನಗರದ ಶ್ರೀಮತಿ ಪ್ರಭ ಹಾಗೂ ಶ್ರೀ ಮಂಜುನಾಥ ಕನ್ಯಾಡಿ ನೆರವೇರಿಸಿದರು.
ಮಂಗಳವಾರದಂದು ದೇವಿಯವರಿಗೆ ರುದ್ರಾಭಿಷೇಕವನ್ನು ನೆರವೇರಿಸಿ ನಂತರ ವಿಜೃಂಭಣೆಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಜೆ.ಪಿ. ಪಾರ್ಕ್ ವಾರ್ಡ್ ನ ಮಾಜಿ ಬಿ.ಬಿ.ಎಂ.ಪಿ ಸದಸ್ಯೆ ಶ್ರೀಮತಿ ಮಮತ ಕೆ.ಬಿ. ಹಾಗೂ ಶ್ರೀ ಬಿ.ಎಸ್. ವಾಸುದೇವ ದಂಪತಿಗಳೊಂದಿಗೆ ಶ್ರೀಮತಿ ನವ್ಯಶ್ರೀ ಹಾಗೂ ಶ್ರೀ ವಿನಯ್ ವೀರೇಶ್ ದಂಪತಿಗಳು ಶ್ರೀ ರವಿಶರ್ಮ ಗುರುಗಳ ನೇತೃತ್ವದಲ್ಲಿ ಮಾಜಿ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಬಿ. ಆರ್. ನಂಜುಂಡಪ್ಪ, ಶ್ರೀಮತಿ ನಳಿನ, ಶ್ರೀ ಜೆ.ಎನ್, ಶ್ರೀನಿವಾಸ್‌ಮೂರ್ತಿ (ಜಾನಿ) ಮಾಜಿ ಬಿ.ಬಿ.ಎಂ.ಪಿ ಸದಸ್ಯರು, ಜಾಲಹಳ್ಳಿ, ಯುವ ಕಾಂಗ್ರೆಸ್ ನಾಯಕರಾದ ಶ್ರೀ ಬಿ. ಎನ್. ಯಧಿಷ್ಠಿರಾಮ್, ಶ್ರೀ ಧನಲಕ್ಷ್ಮೀ ಕನ್ಸ್ಟ್ರಕ್ಷನ್ಸ್ ಮಾಲೀಕರು ಹಾಗೂ ಬಿಜೆಪಿ ಮುಖಂಡರು ಶ್ರೀ ಎಸ್. ರಮೇಶ್, ಶ್ರೀಮತಿ ಲಕ್ಷ್ಮೀದೇವಿ, ಶ್ರೀ ಎಸ್. ರಘುರಾಮ್ ಮತ್ತು ಸಹೋದರರ ಉಪಸ್ಥಿತಿಯಲ್ಲಿ, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾಗಲು ಮುತ್ಯಾಲಮ್ಮ ನಗರ, ಜಾಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹದಿಮೂರು ಗ್ರಾಮಗಳ ಗ್ರಾಮಸ್ಥರು ಮಾತ್ರವಲ್ಲದೆ ದೂರದೂರದಿಂದಲೂ ಸಾಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಧ್ಯಾಹ್ನ ಮಹಾಮಂಗಳಾರತಿಯ ನಂತರ ಬಂದವರೆಲ್ಲರಿಗೂ ಅನ್ನಸಂತರ್ಪಣೆಯನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಮು. ಜಿ. ಸ.
ಅಧ್ಯಕ್ಷರು ಬಿ.ಎಸ್. ವಾಸುದೇವರವರು ಈ ವೇಳೆ ಸುದ್ದಿಗರರೊಡನೆ ಮಾತನಾಡುತ್ತಾ ಈ 49 ನೇ ವಾರ್ಷಿಕೋತ್ಸವ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸುತ್ತಾ, ಮುಂದಿನ ವರ್ಷ ನಡೆಯಲಿರುವ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಲೋಚನೆ ಇರುವುದಾಗಿ ತಿಳಿಸಿದರು.
ವರದಿ : ಕೆ. ಸುಕುಮಾರ್ ರಾಜು