ವಿಜಯನಗರ ಜಿಲ್ಲೆ ಕೂಡ್ಲಿಗಿ: ಶಿಕ್ಷಕರು ಉತ್ತಮ ಸಮಾಜದ ಸೃಷ್ಟಿ ಕರ್ತರಾಗಿದ್ದಾರೆ ಎಂದು ಶಾಸಕ ಡಾ"ಎನ್.ಟಿ.ಶ್ರೀನಿವಾಸ ನುಡಿದರು.
ಅವರು ಪಟ್ಟಣದ ಮೇನ್ ಬಾಯ್ಸ್ ಶಾಲೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೂಡ್ಲಿಗಿ-ಕೊಟ್ಟೂರು ಘಟಕಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ. ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ವನ್ನು, ಉದ್ಘಾಟಿಸಿ ಮಾತನಾಡಿದರು.
ಅಜ್ಞಾನದ ಕತ್ತಲೆಯನ್ನು ಅಳಿಸಿ, ಜ್ಞಾನದ ಬೆಳಕನ್ನು ಮೂಡಿಸುವ ಶ್ರೇಯಸ್ಸು ಗುರುಗಳಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಗುರು ಪದವಿಗಿಂತ ಹಿರಿದಾದ ಪದವಿ ಮತ್ತೊಂದಿಲ್ಲ, ನಿವೃತ್ತರ ಜ್ಞಾನವು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ನಮಗೆ ಮಾರ್ಗದರ್ಶನವಾಗಬೇಕಿದೆ.
ಪ್ರಮುಖ ವೃತ್ತಿಗಳಾದ ಸೈನಿಕ ವೈದ್ಯ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ದಾಗಿದೆ, ಏಕೆಂದರೆ ಎಲ್ಲಾ ವೃತ್ತಿಗಳಿಗೆ ಅರ್ಹ ವ್ಯಕ್ತಿತ್ವ ರೂಪಿಸುವವರು ಶಿಕ್ಷಕರಾಗಿದ್ದಾರೆ. ಅವರು ನಿವೃತ್ತಿ ನಂತರದ ಜೀವನವನ್ನು, ಆರೋಗ್ಯ ಹಾಗೂ ನೆಮ್ಮದಿಗಳಿಂದ ನಡೆಸಬೇಕಿದೆ. ದೈಹಿಕ ಮಾನಸಿಕ ಖಾಯಿಲೆಗಳ ರಹಿತ ಪರಿಪೂರ್ಣ ಆರೋಗ್ಯ ಯುತ ಜೀವನ ನಡೆಸಬೇಕಿದೆ, ಆಸ್ಪತ್ರೆಗಳಿಂದ ಬಹು ಅಂತರ ಕಾಪಾಡಿಕೊಳ್ಳಬೇಕಿದ್ದು ಅದಕ್ಕಾಗಿ ಆರೋಗ್ಯದ ಬಗ್ಗೆ ನಿಗಾವಹಿಸಬೇಕಿದೆ ಎಂದರು. ಶಿಕ್ಷಣ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ನಿವೃತ್ತರನ್ನು, ನಾವು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿಗಣಿಸಿ ಅವರ ಅನುಭವವನ್ನು ಸದುಪಯೋಗಪಡಿಸಿಕೊಳ್ಳುವ ಯೋಜನೆ ಇದೆ.ಕಾರಣ ಯಾರೂ ಏಕಾಂಗಿತನ ಖಿನ್ನತೆ ಸೇರಿದಂತೆ, ಯಾವುದೇ ರೀತಿಯಲ್ಲಿ ವ್ಯಾಕುಲತೆಗೆ ಒಳಗಾಗಬಾರದು ಎಂದು ಸೂಚಿಸಿದರು.
ಇದಕ್ಕೂ ಮುನ್ನ ಶಿಕ್ಷಕರ ಸಂಘದ ವಿಜಯ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಿವಾನಂದ ಬಿಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಗೌಡ್ರು ಕೊಟ್ರೇಶ ರ ನೇತೃತ್ವದಲ್ಲಿ, ಶಿಕ್ಷಕರು ಶಾಸಕರಿಗೆ ಮನವಿ ಸಲ್ಲಿಸಿದರು ಮತ್ತು ಕಾರ್ಯಕ್ರಮ ಕುರಿತು ಅಧ್ಯಕ್ಷರು ಮಾತನಾಡಿದರು.
*ಶಿಕ್ಷಕ ಉತ್ತಮ ಸಮಾಜದ ಸೃಷ್ಟಿ ಕರ್ತ-ಶಾಸಕ ಡಾ"ಎನ್.ಟಿ.ಎಸ್.*-ವಿಜಯನಗರ ಜಿಲ್ಲೆ ಕೂಡ್ಲಿಗಿ: ಶಿಕ್ಷಕರು ಉತ್ತಮ ಸಮಾಜದ ಸೃಷ್ಟಿ ಕರ್ತರಾಗಿದ್ದಾರೆ ಎಂದು ಶಾಸಕ ಡಾ"ಎನ್.ಟಿ.ಶ್ರೀನಿವಾಸ ನುಡಿದರು.
ಅವರು ಪಟ್ಟಣದ ಮೇನ್ ಬಾಯ್ಸ್ ಶಾಲೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೂಡ್ಲಿಗಿ-ಕೊಟ್ಟೂರು ಘಟಕಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ. ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ವನ್ನು, ಉದ್ಘಾಟಿಸಿ ಮಾತನಾಡಿದರು.
ಅಜ್ಞಾನದ ಕತ್ತಲೆಯನ್ನು ಅಳಿಸಿ, ಜ್ಞಾನದ ಬೆಳಕನ್ನು ಮೂಡಿಸುವ ಶ್ರೇಯಸ್ಸು ಗುರುಗಳಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಗುರು ಪದವಿಗಿಂತ ಹಿರಿದಾದ ಪದವಿ ಮತ್ತೊಂದಿಲ್ಲ, ನಿವೃತ್ತರ ಜ್ಞಾನವು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ನಮಗೆ ಮಾರ್ಗದರ್ಶನವಾಗಬೇಕಿದೆ.
ಪ್ರಮುಖ ವೃತ್ತಿಗಳಾದ ಸೈನಿಕ ವೈದ್ಯ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ದಾಗಿದೆ, ಏಕೆಂದರೆ ಎಲ್ಲಾ ವೃತ್ತಿಗಳಿಗೆ ಅರ್ಹ ವ್ಯಕ್ತಿತ್ವ ರೂಪಿಸುವವರು ಶಿಕ್ಷಕರಾಗಿದ್ದಾರೆ. ಅವರು ನಿವೃತ್ತಿ ನಂತರದ ಜೀವನವನ್ನು, ಆರೋಗ್ಯ ಹಾಗೂ ನೆಮ್ಮದಿಗಳಿಂದ ನಡೆಸಬೇಕಿದೆ. ದೈಹಿಕ ಮಾನಸಿಕ ಖಾಯಿಲೆಗಳ ರಹಿತ ಪರಿಪೂರ್ಣ ಆರೋಗ್ಯ ಯುತ ಜೀವನ ನಡೆಸಬೇಕಿದೆ, ಆಸ್ಪತ್ರೆಗಳಿಂದ ಬಹು ಅಂತರ ಕಾಪಾಡಿಕೊಳ್ಳಬೇಕಿದ್ದು ಅದಕ್ಕಾಗಿ ಆರೋಗ್ಯದ ಬಗ್ಗೆ ನಿಗಾವಹಿಸಬೇಕಿದೆ ಎಂದರು. ಶಿಕ್ಷಣ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ನಿವೃತ್ತರನ್ನು, ನಾವು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿಗಣಿಸಿ ಅವರ ಅನುಭವವನ್ನು ಸದುಪಯೋಗಪಡಿಸಿಕೊಳ್ಳುವ ಯೋಜನೆ ಇದೆ.ಕಾರಣ ಯಾರೂ ಏಕಾಂಗಿತನ ಖಿನ್ನತೆ ಸೇರಿದಂತೆ, ಯಾವುದೇ ರೀತಿಯಲ್ಲಿ ವ್ಯಾಕುಲತೆಗೆ ಒಳಗಾಗಬಾರದು ಎಂದು ಸೂಚಿಸಿದರು.
ಇದಕ್ಕೂ ಮುನ್ನ ಶಿಕ್ಷಕರ ಸಂಘದ ವಿಜಯ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಿವಾನಂದ ಬಿಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಗೌಡ್ರು ಕೊಟ್ರೇಶ ರ ನೇತೃತ್ವದಲ್ಲಿ, ಶಿಕ್ಷಕರು ಶಾಸಕರಿಗೆ ಮನವಿ ಸಲ್ಲಿಸಿದರು ಮತ್ತು ಕಾರ್ಯಕ್ರಮ ಕುರಿತು ಅಧ್ಯಕ್ಷರು ಮಾತನಾಡಿದರು.
*ವಯೋ ನಿವೃತ್ತಿ ಹೊಂದಿದ 21 ಶಿಕ್ಷಕರನ್ನು ,ಶಾಸಕರು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು*-ಶ್ರೀಮತಿ ಬಿ.ಹುಲುಗೆಮ್ಮ,
ಸಕಿಪ್ರಾ ಶಾಲೆ ಅಜಾದ್‌ನಗರ ಕೂಡ್ಲಿಗಿ, ಶ್ರೀಮತಿ ಎಸ್.ಜಿ.ಲಕ್ಷ್ಮಿದೇವಿ
ಸಹಿಪ್ರಾ ಶಾಲೆ ಬೈರದೇವರಗುಡ್ಡ, ಶ್ರೀಮತಿ ಬಿ.ಮಲ್ಲಮ್ಮ
ಸಹಿಪ್ರಾ ಶಾಲೆ ಬಡೇಲಡಕು, ಶ್ರೀಮತಿ ಯು.ನಿರ್ಮಲ
ಸಹಿಪ್ರಾ ಶಾಲೆ 7ನೇ ವಾರ್ಡ್ ಕೂಡ್ಲಿಗಿ, ಶ್ಯಮ್ ಸುಂದರ್ ಸಫಾರಿ
ಸಹಿಪ್ರಾ ಶಾಲೆ ಹಿರೇಕುಂಬಳಕುಂಟೆ, ಎಂ.ವೆಂಕಟೇಶ್
ಸಹಿಪ್ರಾ ಶಾಲೆ ಅಮಲಾಪುರ, ಜಿ.ಪ್ರಹ್ಲಾದ
ಸಹಿಪ್ರಾ ಶಾಲೆ ಹೊಸಕೋಡಿಹಳ್ಳಿ, ಟಿ.ಬಸವರಾಜ
ಸಹಿಪ್ರಾ ಶಾಲೆ ಕೆಳಗಿನ ಕಾರ್ನೆರಟ್ಟಿ, ಕೃಷ್ಣಪ್ಪ.ಡಿ
ಸಹಿಪ್ರಾ ಶಾಲೆ ಕುಪ್ಪಿನಕೆರೆ, ಕಾಯಿಕೆಡವ ಕಡೇಮನಿ ಕೊಡದೀರಪ್ಪ,
ಸಹಿಪ್ರಾ ಶಾಲೆ ಸಾಸಲವಾಡ, ಕೆ.ವಸಂತ
ಸಹಿಪ್ರಾ ಬಾಲಕರ ಶಾಲೆ ತೂಲಹಳ್ಳಿ, ಎಸ್.ಬಸವರಾಜ
ಸಹಿಪ್ರಾ ಶಾಲೆ ಬಿ ರಸ್ತೆ ಹಾರಕಬಾವಿ, ಜಿ.ದಿವಾಕರ
ಸಹಿಪ್ರಾ ಶಾಲೆ ರಾಜೀವ್ ಗಾಂಧಿ ನಗರ ಕೂಡ್ಲಿಗಿ,
ಬಿ.ಈಶ್ವರಗೌಡ
ಸಹಿಪ್ರಾ ಶಾಲೆ ಬೆಳ್ಳಕಟ್ಟೆ, ಲೋಕೇಶಪ್ಪ ಡಿ
ಸಹಿಪ್ರಾ ಶಾಲೆ ಗಾಣಗಟ್ಟೆ,ಕೆ.ಹಾಲೇಶ್
ಸಹಿಪ್ರಾ ಶಾಲೆ ನಾಗರಕಟ್ಟೆ, ದುರುಗಪ್ಪ ಬಿ
ಸಹಿಪ್ರಾ ಶಾಲೆ ಹಿರೇ ಹೆಗ್ಡಾಳ್, ಶ್ರೀಮತಿ ಬಿ.ರಾಯಮ್ಮ
ಸಹಿಪ್ರಾ ಶಾಲೆ ಕಾರ್ತಕೆಹಟ್ಟಿ,
ಜೆ ಬಿ ಸೋಮನಗೌಡ
ಸಹಿಪ್ರಾ ಶಾಲೆ ಹ್ಯಾಳ್ಯಾ,
ಕೆ.ಕೃಷ್ಣಪ್ಪ
ಸಹಿಪ್ರಾ ಶಾಲೆ ಲೋಕಿಕೆರೆ. ಇವರು ನಿವೃತ್ತಿ ಹೊಂದಿದ ಶಿಕ್ಷಕರಾಗಿದ್ದಾರೆ.
ನಂತರ ಮೇನ್ ಬಾಯ್ಸ್ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಿಸರು. *ಶಾಸಕರಿಗೆ ಸನ್ಮಾನ:-* ನೂತನವಾಗಿ ಚುನಾಯಿತರಾದ ಶಾಸಕರನ್ನು, ಶಿಕ್ಷಕರ ಸಂಘದಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಕೊಟ್ಟೂರು ಘಟಕದ ಅಧ್ಯಕ್ಷ, ಸಿದ್ಧಲಿಂಗಪ್ಪ ಅಣಿಜಿ ಸ್ವಾಗತಿಸಿದರು, ಕೂಡ್ಲಿಗಿ ಕಾರ್ಯದರ್ಶಿ ಶೇಖರಯ್ಯ ಟಿ.ಹೆಚ್.ಎಂ, ಸಂಘಟನಾ ಕಾರ್ಯದರ್ಶಿ ಗೋಣಿಬಸಪ್ಪ ಇವರು ನಿರ್ವಹಿಸಿದರು. ಸದಸ್ಯರಾದ ಕೆ. ಜಿನಾಬಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾ ಅಧಿಕಾರಿ ಆರ್.ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜನಾಯ್ಕ್, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಸ್. ಜಗದೀಶ್, ಬಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ಕೆ ತಿಪ್ಪೇಸ್ವಾಮಿ, ನಿರ್ದೇಶಕ ಗುರುಸಿದ್ಧನಗೌಡ, ಪಟ್ಟಣ ಪಂಚಾಯ್ತಿ ಸದಸ್ಯ ಕಾವಲಿ ಶಿವಪ್ಪ ನಾಯಕ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿ ಗೀತಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ನಾಗೇಶ್, ತಾಲೂಕು ಉಪಾಧ್ಯಕ್ಷ ಹೆಚ್.ಜಿ.ಹನುಮಂತಪ್ಪ, ಹೆಚ್. ಇಂದಿರಾ, ಖಜಾಂಚಿ ಎಲ್. ನಂದೀಶ್ವರನಾಯ್ಕ್, ಸಹ ಕಾರ್ಯದರ್ಶಿ ಗೀತಾ ಭಾಪ್ರಿ, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಬಿ.ಮಾರೆಶ್, ಸದಸ್ಯರಾದ ಕೆ.ಎರಿಸ್ವಾಮಿ, ಎನ್.ಪುಟ್ಟಪ್ಪ, ನಿವೃತ್ತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ, ಕೂಡ್ಲಿಗಿ ಅಧ್ಯಕ್ಷ ವೀರಯ್ಯ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*