*ಅಸಹಾಯಕ ರೈಲು ಪ್ರಯಾಣಿಕರ ನೆರವಿಗೆ ಮುಂದಾದ ಸ್ವಯಂಸೇವಾ ಸಂಸ್ಥೆಗಳು

varthajala
0

ಬೆಂಗಳೂರು : ಒಡಿಶಾದ  ಬಾಲಸೋರ್‌ನಲ್ಲಿ ಇತ್ತೀಚೆಗೆ ಕಳೆದ ಶುಕ್ರವಾರದಂದು ಸಂಭವಿಸಿದ ಭೀಕರ ರೈಲು ಅಪಘಾತದ ಪರಿಣಾಮದಿಂದಾಗಿ , ನಗರದಿಂದ ನಾನಾ  ರಾಜ್ಯಗಳಿಗೆ  ಹೊರಡಬೇಕಿದ್ದ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ  ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದಲ್ಲಿ ಸುಮಾರು 500 ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಬಡ ಕಾರ್ಮಿಕರೊಂದಿಗೆ  ಸಾವಿರಾರು ಪ್ರಯಾಣಿಕರು ಸಹ ತಮ್ಮ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದೆ, ರೈಲು ನಿಲ್ದಾಣದಲ್ಲಿಯೇ  ಉಳಿದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ  ಸಿಕ್ಕಿಹಾಕಿಕೊಂಡಿದ್ದರು. ಅವರು ಒಡಿಶಾ ಮಾರ್ಗವಾಗಿ ತಮ್ಮ ತಮ್ಮ ಗಮ್ಯಸ್ಥಾನಗಳಿಗೆ ಹೋಗಬೇಕಾಗಿದ್ದವರು.

  




 ಈ ಅಸಹಾಯಕ ಪ್ರಯಾಣಿಕರ ನೆರವಿಗೆ ಮುಂದಾದ ಎನ್ ಜಿ ಓ ಸಂಸ್ಥೆಗಳಾದ ಪ್ರತೀತಿ ವೆಲ್ಫೇರ್ ಫೌಂಡೇಶನ್‌ನ ಗೀತಾ ಪ್ರಿಯಾ ಅಯ್ಯರ್ , ಡಬ್ಲ್ಯೂ ಇ ಎನ್ ಇಂಡಿಯಾ  ಸಂಸ್ಥೆಯ  ಸೇಜಲ್ ರಾಜಾ ಮತ್ತು ವಂದಿತಾ ತಿವಾರಿರವರುಗಳ ನೇತೃತ್ವದಲ್ಲಿ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದೆ ಹತಾಶೆಗೊಂಡಿದ್ದ ಪ್ರಯಾಣಿಕರ ನೆರವಿಗೆ ಮುಂದಾಗಿ, ಅವರಿಗೆ ಕುಡಿಯುವ ನೀರು, ಉಪಹಾರ, ಒಣ ತಿಂಡಿಗಳು,  ಸ್ಯಾನಿಟರಿ ನ್ಯಾಪ್‌ಕಿನ್ ಗಳು, ಫೇಸ್ ಮಾಸ್ಕ್‌ಗಳ ವಿತರಣೆಯ  ಜೊತೆಗೆ ಅವರ ಸಾಮಾನು ಸರಂಜಾಮು ವಗೈರೆಗಳ ನಿರ್ವಹಣೆ ಕಾರ್ಯದಲ್ಲೂ ನೆರವಾಗಲು ಮೇಲ್ಕಂಡ ಸಂಸ್ಥೆಗಳ ಸ್ವಯಂಸೇವಕರಾದ ದೀಪಾ, ನಂದು, ಅಬ್ದುಲ್ ರಜಾಕ್, ಮರ್ವಾನ್, ಮಂಜು ಮೆಹ್ರಾ, ಮಂಜುನಾಥ್ ಕಾಳೇಗೌಡ ಮತ್ತಿತರರು ಹಗಲಿರುಳೆನ್ನದೆ ಪರಿಹಾರವನ್ನು ಒದಗಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವವರನ್ನು ಸಂಘಟಿಸುವ ಮತ್ತು ಸಂಯೋಜಿಸುವಲ್ಲಿ ಅನೇಕ ಸ್ವಯಂಸೇವಕರ ಜಂಟಿ ಪ್ರಯತ್ನದಿಂದಾಗಿ ಸಾಧ್ಯವಾಯಿತು ಎಂದು ಹೇಳುತ್ತಾ, "ದಯೆ ಎಂದರೆ ನಿಮ್ಮಲ್ಲಿ ಏನಿದೆಯೋ ಅದರೊಂದಿಗೆ ಮತ್ತೊಬ್ಬರಿಗೆ ನೆರವಾಗುವ  ಇಚ್ಛೆಯಿಂದ ನೆರವನ್ನು  ನೀಡಲು ಮುಂದೆ ಬರುವುದು" ಎಂಬುದಾಗಿ ವಂದಿತಾ ತಿವಾರಿರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Post a Comment

0Comments

Post a Comment (0)