ಶಸ್ತ್ರಚಿಕಿತ್ಯರ ದಿನಾಚರಣೆ ಪ್ರಯುಕ್ತ ನಡಿಗೆ ಜಾಥ

varthajala
0

ಕಾರ್ಯಕ್ರಮ  ಆರೋಗ್ಯವಂತ ಸಮಾಜ ಮತ್ತು  ರೋಗ ಮುಕ್ತವಾಗಲು ವೈದ್ಯರ ಸಲಹೆ ಮುಖ್ಯ  ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ASICC(R) ಗೋಲ್ಡನ್ ಜುಬ್ಲಿ ಆಚರಣೆ ಮತ್ತು ಕರ್ನಾಟಕ ಸ್ಟೇಟ್ ಚಾಪ್ಟರ್ ಆಫ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಇಂಡಿಯಾ ವತಿಯಿಂದ Surgeon's Day (ಶಸ್ತ್ರಚಿಕಿತ್ಸರ ದಿನ) ಪ್ರಯುಕ್ತ ವಾಕ್ ಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.   








ಕ್ಯಾನ್ಸರ್ ಮತ್ತು ರೋಬಿಟಿಕ್ ಸರ್ಜನ್ ಮತ್ತು ಅಧ್ಯಕ್ಷರು ಸರ್ಜಿಕಲ್ ಸೊಸೈಟಿ ಇಂಡಿಯಾದ ಅಧ್ಯಕ್ಷರಾದ ಡಾ.ರಾಜಶೇಖರ್ ಸಿ.ಜಾಕ, ಅಧ್ಯಕ್ಷರಾದ ಡಾ.ವೆಂಕಟೇಶ್ , ಡಾ.ಮನೀಶ್ ಜೋಷಿ, ಸೆಂಟ್ ಮಾರ್ಥಾಸ್ ಆಸ್ಪತ್ರೆಯ ಆಡಳಿತ ಮಂಡಳಿ , ವೈದ್ಯರು ದಾದಿಯರು ಸೇಂಟ್ ಮಾರ್ಥಾಸ್ ಆಸ್ಪತ್ರೆಯಿಂದ ಫ್ರೀಡಂ ಪಾರ್ಕವರಗೆ 5ಕಿಲೋ ಮೀಟರ್ ವರಗೆ ವಾಕ್ ಥಾನ್ (ನಡಿಗೆ ಜಾಥ)  ಕಾರ್ಯಕ್ರಮ ಉದ್ಘಾಟನೆ ಮಾಡಿದರು.  ಸರ್ಜಿಕಲ್ ಸೊಸೈಟಿ ಅಧ್ಯಕ್ಷರಾದ ಡಾ.ರಾಜಶೇಖರ್ ಸಿ.ಜಾಕರವರು ಮಾತನಾಡಿ ಸರ್ಜಿಕಲ್ ಸೊಸೈಟಿ 50ನೇವರ್ಷ ಸಂಭ್ರಮಾಚರಣೆ ಅಚರಿಸುತ್ತಿದೆ.  ವೈದ್ಯರ ಜೊತೆಯಲ್ಲಿ ಸರ್ಜಿಯ ಆಗುವ ರೋಗಿಯ ಆರೋಗ್ಯ ಮುಖ್ಯ. ನಡಿಗೆ ಮೂಲಕ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬಹುದು.  

ಪ್ರತಿದಿನ ಮೂರು ಕಿಲೋ ಮೀಟರ್ ವಾಕಿಂಗ್ ನಿಂದ ಕ್ಯಾನ್ಸರ್ ಮತ್ತು ಹೃದಯ ಸಂಭಂದಿಸಿ ಖಾಯಿಲೆಯಿಂದ ದೂರವಿರಬಹುದು.  ಪ್ರತಿದಿನ ಆಪರೇಷನ್ ಮಾಡಿ ಸರ್ಜಿಕಲ್ ಡಾಕ್ಟರ್ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ , ನಡಿಗೆ ಮಾಡುವ ಮೂಲಕ ತಮ್ಮ ಆರೋಗ್ಯದ ಜೊತೆಯಲ್ಲಿ ಮಾನಸಿಕ ಸ್ಥಿತಿ ಸಮಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.  ನಮ್ಮ ಸರ್ಜಿಕಲ್ ಸೊಸೈಟಿ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ಖ್ಯಾತ ಸರ್ಜಿಕಲ್ ಡಾಕ್ಟರ್ ಗಳು ಇದ್ದಾರೆ ಎಂದು ಹೇಳಿದರು.  ಡಾ.ವೆಂಕಟೇಶ್ ರವರು ಮಾತನಾಡಿ ಶುಶ್ರತರವರು  ವಿಶ್ವದ ಮೊದಲ ಆಪರೇಷನ್ ಮಾಡಿದ ಸರ್ಜಿಕಲ್ ವೈದ್ಯ . ಅದರಿಂದ ಸರ್ಜಿಕಲ್ ದಿನವನ್ನು ಅಚರಿಸಲಾಗುತ್ತಿದೆ.  ಕ್ಯಾನ್ಸರ್ ಮತ್ತು ಹೃದಯ ಸಂಭಂದಿದ ಮತ್ತು ಹಲವಾರು ರೋಗಗಳ ನಿವಾರಣೆಗಾಗಿ ಶಸ್ತ್ರಚಿಕಿತ್ಯೆ ಮುಖ್ಯ.  ಇಂದು ಮೆಡಿಕಲ್ ಟೂರಿಸಂನಲ್ಲಿ ಬೆಂಗಳೂರುನಗರ ವಿಶ್ವಮಟ್ಚದಲ್ಲಿ ಹೆಸರು ಪಡೆದಿದೆ.  ಶಸ್ತ್ರಚಿಕಿತ್ಯೆ ಕುರಿತು ಯುವ ವೈದ್ಯರುಗಳನ್ನು ಸಮರ್ಪಕವಾಗಿ ತಯಾರಿ ಮಾಡಿ ಸಮಾಜಕ್ಕೆ ನೀಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. 

 ಡಾ.ಮನೀಶ್ ಜೋಷಿರವರು ಮಾತನಾಡಿ ಸರ್ಜನ್ಸ್ ಡೇ ಅಚರಿಸಲಾಗುತ್ತಿದೆ. ಸರ್ಜನ್ ಎಂದರೆ ಅವರು ಎಲ್ಲರಂತೆ ಮನುಷ್ಯರು ಅವರ ಕುಟುಂಬವು ಇರುತ್ತದೆ.  ಆಪರೇಷನ್ ಕೊಠಡಿಗೆ ಬಂದಾಗ ತನ್ನ ಎಲ್ಲ ಸಂಕಷ್ಟಗಳನ್ನು ಮರೆತು ಅಪರೇಷನ್ ಗೆ ಒಳಗಾಗುವ ವ್ಯಕ್ತಿಗಳ ಪ್ರಾಣ ಮತ್ತು ಅವರ ಕುಟುಂಬದ ಸಂಕಷ್ಟಗಳನ್ನು ದೂರ ಮಾಡಬೇಕು ಎಂದು ಆಪರೇಷನ್ ಮಾಡಲಾಗುತ್ತದೆ.  ರೋಗಿಯು ಗುಣವಾಗಿ ಇಡಿ ಕುಟುಂಬವೆ ನಗುಮೂಗದಿಂದ ನಮ್ಮನ್ನು ನೋಡಿದಾಗ ನಾವು ಕಲಿತ ವಿದ್ಯೆಗೆ ನ್ಯಾಯ ಒದಗಿಸಿದಂತೆ ಮತ್ತು ಪ್ರಶಸ್ತಿ ಪಡೆದ ಸಂತೋಷ ನಮಗೆ ಆಗುತ್ತದೆ.  ಪ್ರತಿಯೊಬ್ಬರು ಪ್ರತಿದಿನ ಒಂದು ಘಂಟೆ ವಾಕಿಂಗ್ ಮಾಡಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದು ಹೇಳಿದರು.  500ಹೆಚ್ಚು ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗಳು ನಡಿಗೆ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Post a Comment

0Comments

Post a Comment (0)